ಬ್ಯಾಂಕ್ ಅಕೌಂಟ್ ಹೊಸ ರೂಲ್ಸ್! ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ಯಾ? ಹಾಗಾದ್ರೆ..

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದೆಯಾ? ಹಾಗಾದ್ರೆ ಲಾಭದ ಜೊತೆಗೆ ನಷ್ಟವೂ ಇದೆ. ಟ್ಯಾಕ್ಸ್, ನಿರ್ವಹಣೆ ಶುಲ್ಕ, ಸರ್ಕಾರದ ಸಬ್ಸಿಡಿ ಮುಂತಾದ ಅಂಶಗಳಲ್ಲಿ ಜಾಗ್ರತೆ ಅಗತ್ಯ.

  • ಒಂದುಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ಲಾಭವೂ ಇದೆ ನಷ್ಟವೂ ಇದೆ
  • ಖಾತೆ ನಿರ್ವಹಣೆ, ಕೆವೈಸಿ ಅಪ್‌ಡೇಟ್ ಅಗತ್ಯ
  • ಸರ್ಕಾರಿ ಯೋಜನೆಗಳು ಹಾಗೂ ಟ್ಯಾಕ್ಸ್‌ನಲ್ಲಿ ಜಾಗರೂಕತೆ ಬೇಕು

ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಲಾಭವೇ? ಇಲ್ಲ ನಷ್ಟವೇ?

Multiple Bank Accounts : ಇಂದು ಬಹುತೇಕ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಒಂದು ಖಾತೆ, ಉದ್ಯೋಗಕ್ಕೆ ಸೇರಿದ ನಂತರ ಮತ್ತೊಂದು, ಅಲ್ಲದೆ ಆನ್‌ಲೈನ್ ಸೇವೆಗಳ ಸುಲಭತೆಯಿಂದ ಹೊಸ ಖಾತೆ ತೆರೆಯುವುದು ಸುಲಭವಾಗಿದೆ. ಕೆಲವೊಮ್ಮೆ ಬೇರೆ ಬೇರೆ ಬ್ಯಾಂಕ್‌ಗಳ ಸೇವೆಗಳನ್ನು ಬಳಸಿಕೊಳ್ಳುವುದು ಸಹಾಯಕವಾಗಬಹುದು.

ಆದರೆ, ಎಲ್ಲಾ ಖಾತೆಗಳಲ್ಲಿ ಚಲಾವಣೆ ನಡೆಯುತ್ತಿದೆಯೇ? ಇಲ್ಲದಿದ್ದರೆ ನಿಮಗೆ ದಂಡ ಅಥವಾ ಖಾತೆ ಮುಚ್ಚುವ ಸಂದರ್ಭ ಎದುರಾಗಬಹುದು. ಎರಡು ವರ್ಷ ಬಳಸದೇ ಬಿಟ್ಟ ಖಾತೆಗಳನ್ನು ಬ್ಯಾಂಕ್ ನಿರಾಕರಿಸಬಹುದು. ಮತ್ತೆ ಸಕ್ರಿಯಗೊಳಿಸಲು ಹೊಸ ಕೆವೈಸಿ ಹಾಗೂ ಅರ್ಜಿ ಪ್ರಕ್ರಿಯೆ ಮೂಲಕ ಹೋಗಬೇಕಾಗುತ್ತದೆ.

ಇದನ್ನೂ ಓದಿ: ಇನ್ಮುಂದೆ ಪಿನ್ ಇಲ್ಲದೆ ಫೋನ್‌ಪೇ, ಗೂಗಲ್‌ಪೇ ಪೇಮೆಂಟ್ ಸಾಧ್ಯ! ಬಿಗ್ ಅಪ್ಡೇಟ್

ಖಾತೆಗಳಲ್ಲಿ ಸಕ್ರಿಯತೆ ಅಗತ್ಯ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇರುವುದು ಕಾನೂನಿಗೆ ವಿರುದ್ಧವಲ್ಲ. ಆದರೆ, ಆರ್ಥಿಕ ಲೆಕ್ಕಾಚಾರದ ದೃಷ್ಟಿಯಿಂದ ನಿಜವಾದ ಅವಶ್ಯಕತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಪ್ರತಿಯೊಂದು ಖಾತೆಗೂ ಪ್ರತ್ಯೇಕವಾಗಿ ಕೆವೈಸಿ ಅಪ್‌ಡೇಟ್ ಮಾಡಬೇಕಾಗುತ್ತದೆ. ಪ್ಯಾನ್, ಆಧಾರ್ ಹಾಗೂ ವಿಳಾಸದ ಪ್ರಾಮಾಣಿಕ ದಾಖಲೆಗಳು ಅಗತ್ಯವಿದೆ.

ಹೆಚ್ಚು ಖಾತೆಗಳಿದ್ದರೆ, ನಿರ್ವಹಣಾ ಶುಲ್ಕ, ಸರ್ವೀಸ್ ಚಾರ್ಜ್‌ಗಳು ಹೆಚ್ಚಾಗಬಹುದು. ಎಲ್ಲ ಖಾತೆಗಳ ಮಾಹಿತಿಯನ್ನು ನಿಯಮಿತವಾಗಿ ಟ್ರಾಕ್ ಮಾಡುವುದು ಒಂದಿಷ್ಟು ತೊಂದರೆ ನೀಡಬಹುದು. ಇದರಿಂದಾಗಿ ಕೆಲವೊಮ್ಮೆ ಲೆಕ್ಕಪತ್ರಗಳಲ್ಲಿ ಗೊಂದಲ ಉಂಟಾಗಬಹುದು.

ಇದನ್ನೂ ಓದಿ: ನೀವೇ ಗ್ಯಾಸ್ ಏಜೆನ್ಸಿ ಆರಂಭಿಸಿ, ಬಂಪರ್ ಅವಕಾಶ! ಕಮ್ಮಿ ಬಂಡವಾಳಕ್ಕೆ ಭರ್ಜರಿ ಆದಾಯ

ಲಾಭದ ಬದಿಯೂ ಇದೆ

ಒಂದುಕ್ಕಿಂತ ಹೆಚ್ಚು ಖಾತೆ ಇದ್ದರೆ, ವೆಚ್ಚ ಮತ್ತು ಆದಾಯವನ್ನು ವಿಭಜಿಸಿ ಸಮರ್ಪಕವಾಗಿ ಲೆಕ್ಕ ಇಡಬಹುದು. ತಾಂತ್ರಿಕ ಸಮಸ್ಯೆ ಬಂದು ಯಾವುದಾದರೂ ಖಾತೆಯಲ್ಲಿ ವಹಿವಾಟು ಅಸಾಧ್ಯವಾದರೂ, ಇನ್ನೊಂದು ಖಾತೆಯು ಬ್ಯಾಕಪ್ ಆಗಿ ಕೆಲಸ ಮಾಡುತ್ತದೆ. ಕೆಲವೊಮ್ಮೆ ಬೇರೆ ಬೇರೆ ಬ್ಯಾಂಕ್‌ಗಳಿಂದ ವಿಶೇಷ ಆಫರ್‌ಗಳೂ ದೊರೆಯುತ್ತವೆ.

Bank Account

ಟ್ಯಾಕ್ಸ್ ಮತ್ತು ಸರ್ಕಾರಿ ಯೋಜನೆಗಳಲ್ಲಿ ಜಾಗ್ರತೆ ಬೇಕು

ಹೆಚ್ಚು ಖಾತೆಗಳಲ್ಲಿ ದೊಡ್ಡ ಮೊತ್ತ ಇದೆಯೆಂದರೆ, ಅದರ ಮೇಲೆ ಬರುವ ಬಡ್ಡಿಯನ್ನು ಐಟಿಆರ್‌ನಲ್ಲಿ ಘೋಷಿಸಲೇ ಬೇಕು. ಸರ್ಕಾರದ ಸಬ್ಸಿಡಿ ಅಥವಾ ಡಿಬಿಟಿ (DBT) ಯೋಜನೆಗಳಿಗೆ ಒಂದೇ ಖಾತೆ ನಿಗದಿಯಾಗಿರಬೇಕು. ಒಂದಕ್ಕಿಂತ ಹೆಚ್ಚು ಖಾತೆಯಿಂದ ಲಾಭ ಪಡೆಯುವುದು ನಿಯಮ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: ಬರಿ 3,000 ಕಟ್ಟಿ ತಗೊಂಡು ಹೋಗಿ ಹೀರೋ ಬೈಕ್! ನಿಮ್ಮ ಬಜೆಟ್ ತಕ್ಕಂತೆ ಇಎಂಐ

ಸಣ್ಣ ತಪ್ಪಿಗೆ ಭಾರಿ ನಷ್ಟವಾಗಬಾರದು

ಹೆಚ್ಚು ಬ್ಯಾಂಕ್ ಅಕೌಂಟ್ ಇರೋದು ತಪ್ಪಲ್ಲ, ಆದರೆ ಜವಾಬ್ದಾರಿ ಮುಖ್ಯ. ಖಾತೆ ನಿರ್ವಹಣೆಯ ಜಾಣ್ಮೆ ಇರಬೇಕು, ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. ಇಲ್ಲದಿದ್ದರೆ, ನಷ್ಟವಾಗಬಹುದು.

Multiple Bank Accounts, Know the Risks Before You Decide

Related Stories