ಹೊಸ ಪೋಸ್ಟ್ ಆಫೀಸ್ ಸ್ಕೀಮ್; 5 ಸಾವಿರಕ್ಕೆ ಪಡೆಯಬಹುದು 3 ಲಕ್ಷ ರೂಪಾಯಿ ರಿಟರ್ನ್ಸ್

ಪೋಸ್ಟ್ ಆಫೀಸ್ನ (Post Office Scheme) ಮರುಕಳಿಸುವ ಠೇವಣಿ - RD ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದ್ದು ಮೊದಲಿಗಿಂತಲೂ ಹೆಚ್ಚಿನ ಬಡ್ಡಿ (interest) ದರವನ್ನು ಗ್ರಾಹಕರು ಪಡೆದುಕೊಳ್ಳಬಹುದು.

Bengaluru, Karnataka, India
Edited By: Satish Raj Goravigere

ಭವಿಷ್ಯದ ಆರ್ಥಿಕ (future financial plan) ದೃಷ್ಟಿಯಿಂದ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಈ ಮರುಕಳಿಸುವ ಠೇವಣಿ (post office RD) ಯೋಜನೆಯನ್ನು ನೀವು ಆಯ್ದುಕೊಳ್ಳಬಹುದು, ಇದರಿಂದ ಹೆಚ್ಚು ಲಾಭವೂ ಇದೆ, ಅತ್ಯುತ್ತಮ ಆದಾಯವನ್ನು ಗಳಿಸುತ್ತೀರಿ.

ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಸ್ಕೀಮ್! (Post office RD scheme)

ಪ್ರತಿ ಮೂರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ಎಲ್ಲಾ ಯೋಜನೆಗಳ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ. ಇದೆ ರೀತಿ ಪೋಸ್ಟ್ ಆಫೀಸ್ನ (Post Office Scheme) ಮರುಕಳಿಸುವ ಠೇವಣಿ – RD ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದ್ದು ಮೊದಲಿಗಿಂತಲೂ ಹೆಚ್ಚಿನ ಬಡ್ಡಿ (interest) ದರವನ್ನು ಗ್ರಾಹಕರು ಪಡೆದುಕೊಳ್ಳಬಹುದು.

from now on you can get 90 thousand personal loan at the post office

ಹಬ್ಬಗಳ ಈ ಸಮಯದಲ್ಲಿ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದು ಆರ್‌ಡಿ ಠೇವಣಿಯ (RD Deposit) ಮೇಲೆ ಬಡ್ಡಿದರವನ್ನು ಹೆಚ್ಚಿಸಿದೆ. ಈ ಹಿಂದೆ 6.5% ನಷ್ಟು ಬಡ್ಡಿದರ ಇದ್ದಿದ್ದು ಈಗ 6.7% ಗೆ ಹೆಚ್ಚಳವಾಗಿದೆ.

ಹಾಗಾಗಿ ನೀವು ಕೇವಲ 2000ಗಳನ್ನ ಡೆಪಾಸಿಟ್ (deposit) ಇಟ್ಟರು 2 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಈ ಆರ್ ಡಿ ಯಲ್ಲಿ 2000, 3000 ಹಾಗೂ 5,000 ಗಳಂತೆ ಹಣ ಡೆಪಾಸಿಟ್ ಮಾಡ್ತಾ ಹೋದರೆ ಐದು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ರಿಟರ್ನ್ ಪಡೆಯಬಹುದು.

60 ವರ್ಷ ಮೇಲ್ಪಟ್ಟ ಜನರಿಗೆ ಕೇಂದ್ರದಿಂದ ಆನ್ಲೈನ್ ಮೂಲಕವೇ ಹೊಸ ಸೇವೆ ಆರಂಭ

2,000ರೂ. ಹೂಡಿಕೆ ಮಾಡಿದರೆ ಸಿಗುವ ಹಣ ಎಷ್ಟು?

Post Office Schemesಅಂಚೆ ಕಚೇರಿಯ ಮರುಕಳಿಸುವ ಠೇವಣಿಯಲ್ಲಿ ಒಂದು ವೇಳೆ ಎರಡು ಸಾವಿರ ರೂಪಾಯಿಗಳನ್ನು ನೀವು ಹೂಡಿಕೆ ಮಾಡಿದರೆ ವರ್ಷಕ್ಕೆ ಒಟ್ಟು 24,000ಗಳನ್ನು ಠೇವಣಿ ಇಡುತ್ತೀರಿ. 5 ವರ್ಷಗಳಲ್ಲಿ 1,20,000ರೂ.ಗಳನ್ನು ಠೇವಣಿ ಮಾಡಿದಂತಾಗುತ್ತದೆ. ಈ ಅಂಚೆ ಕಚೇರಿ ನೀಡುವ ಬಡ್ಡಿದರ 6.7% ಎಂದಾದರೆ 22,732 ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ ಒಟ್ಟಾರೆಯಾಗಿ 1,42,732 ರೂಪಾಯಿಗಳನ್ನು ನೀವು ಹಿಂಪಡೆಯಬಹುದು.

ಈ ಬ್ಯಾಂಕ್‌ನಲ್ಲಿ ಖಾತೆ ಇದ್ರೆ ಪ್ರತಿ ತಿಂಗಳು ಸಿಗುತ್ತೆ 1 ಲಕ್ಷ ಪಿಂಚಣಿ; ನಿಮ್ಮದೂ ಸಹ ಅಕೌಂಟ್ ಇದಿಯಾ?

3,000ರೂ.ಗಳನ್ನು ಠೇವಣಿ ಮಾಡಿದರೆ ಸಿಗುವ ಮೊತ್ತ!

ಒಂದು ವೇಳೆ ನೀವು ಪ್ರತಿ ತಿಂಗಳು 3,000 ರೂಪಾಯಿಗಳ ಠೇವಣಿ ಆರಂಭಿಸಿದರೆ ಒಂದು ವರ್ಷದಲ್ಲಿ 36,000 ರೂಪಾಯಿಗಳನ್ನು ಅಂದರೆ 5 ವರ್ಷಗಳಲ್ಲಿ 1,80,000 ರೂಪಾಯಿಗಳನ್ನು ಉಳಿತಾಯ ಮಾಡುತ್ತೀರಿ. 6.7% ಹೊಸ ಬಡ್ಡಿದರಗಳ ಪ್ರಕಾರ, ನೀವು 34,097 ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ ನೀವು ಒಟ್ಟಾರೆಯಾಗಿ 2,14,097 ರೂಪಾಯಿ ಪಡೆಯಬಹುದು.

5,000ಗಳನ್ನು ಠೇವಣಿ ಇಟ್ಟರೆ ಪಡೆಯುವ ಮೊತ್ತ!

ಪ್ರತಿ ತಿಂಗಳು 5,000 ರೂಪಾಯಿಗಳ ಆರ್‌ಡಿಯನ್ನು ಅಂಚೆ ಕಚೇರಿಯಲ್ಲಿ ಆರಂಭಿಸಿದರೆ 5 ವರ್ಷಗಳಲ್ಲಿ ಒಟ್ಟು 3,00,000 ರೂಪಾಯಿ ಉಳಿತಾಯ ಮಾಡಬಹುದು. ಹೊಸ ಬಡ್ಡಿದರ 6.7% ಪ್ರಕಾರ 56,830 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಐದು ವರ್ಷಗಳ ಅವಧಿಯಲ್ಲಿ ಮೆಚ್ಯುರಿಟಿ ಆಗುವ ಈ ಯೋಜನೆಯಲ್ಲಿ ನೀವು ಒಟ್ಟು 5000 ಹೂಡಿಕೆಗೆ 3,56,830 ರೂಪಾಯಿ ಪಡೆಯಬಹುದು.

New Post Office Scheme, 5 thousand can get 3 lakh rupees returns