ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಸಿಹಿ ಸುದ್ದಿ! ಸಬ್ಸಿಡಿ ವಿಚಾರದಲ್ಲಿ ಹೊಸ ಅಪ್ಡೇಟ್

Gas Cylinder Subsidy : ಮೊದಲೆಲ್ಲ ಹಳ್ಳಿಗಳಲ್ಲಿ ಒಲೆಯಲ್ಲಿ ಕಟ್ಟಿಗೆಯಿಂದ ಬೆಂಕಿ ಮಾಡಿಕೊಂಡು ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೆಂಕಿ ಮಾಡುವ ವೇಳೆ ತೀರಾ ಹೊಗೆ ಬರುತ್ತಿತ್ತು. ಇದು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಇದರಿಂದಾಗಿ ಅನೇಕ ಮಹಿಳೆಯರು ಶ್ವಾಸ ಸಂಬಂಧಿತ ರೋಗಗಳಿಗೆ ಗುರಿಯಾಗುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಹಳ್ಳಿಗಳಲ್ಲಿಯೂ ಎಲ್ಲರ ಮನೆಗಳಲ್ಲಿ ಕಟ್ಟಿಗೆ ಒಲೆಯ ಜಾಗಕ್ಕೆ ಅಡುಗೆ ಅನಿಲ ಬಂದಿದೆ. ಈಗ ಅಡುಗೆ ಅನಿಲದಿಂದಲೇ ಅಡುಗೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಸಹ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ.

ಚಿನ್ನದ ಬೆಲೆ ಸ್ಥಿರ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಗೋಲ್ಡ್ ರೇಟ್

ಇದಕ್ಕಾಗಿಯೇ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಜಾರಿಗೆ ತರಲಾಗಿದೆ. ಹಾಗಾದರೆ ಈ ಯೋಜನೆ ಅಡಿಯಲ್ಲಿ ಎಷ್ಟು ಸಬ್ಸಿಡಿ ಸಿಗುತ್ತದೆ. ಒಂದು ಸಿಲಿಂಡರಿನ ಬೆಲೆ ಎಷ್ಟಾಗಿದೆ ಎಂದು ಈಗ ತಿಳಿದುಕೊಳ್ಳೊಣ.

ದೇಶದಲ್ಲಿರುವ ಬಡವರೂ ಸಹ ಎಲ್ಪಿಜಿ ಗ್ಯಾಸ್ (LPG Gas Cylinder) ಬಳಸಿ ಅಡುಗೆ ಮಾಡಬೇಕು. ಇದರಿಂದ ಅವರ ಆರೋಗ್ಯ ಚೆನ್ನಾಗಿರುತ್ತದೆ. ಹಾಗೂ ಸಮಯವೂ ಉಳಿತಾಯವಾಗುತ್ತದೆ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಬಹಳ ಬಡವರಿದ್ದವರಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ನೀಡಲಾಗುತ್ತದೆ. ಒಂದು ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ೭೫ ಲಕ್ಷ ಜನರು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳಾಗಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಹಣ! ಅಷ್ಟಕ್ಕೂ ಲಿಮಿಟ್ ಎಷ್ಟು? ಇಲ್ಲಿದೆ ಮಾಹಿತಿ

ಸಬ್ಸಿಡಿ ವಿಚಾರದಲ್ಲಿ ಹೊಸ ಘೋಷಣೆ:

Gas Cylinderಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ಪ್ರತಿ ಸಿಲಿಂಡರ್ಗೆ 300 ರೂ. ಸಬ್ಸಿಡಿ ನೀಡಲಾಗುತ್ತದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರಿನ ಬೆಲೆಯು 903 ರೂ.ಗಳಾಗಿವೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳು ಸಹ ಇಷ್ಟೇ ಹಣ ನೀಡಿ ಸಿಲಿಂಡರ್ ಖರೀದಿಸಬೇಕಾಗುತ್ತದೆ. ಸಿಲಿಂಡರ್ ಖರೀದಿಸಿದ ನಂತರ 300 ರೂ. ಬಳಕೆದಾರರ ಖಾತೆಗೆ (Bank Account) ನೇರವಾಗಿ ಜಮಾ ಮಾಡಲಾಗುತ್ತದೆ. ಹೀಗೆ ಉಜ್ವಲಾ ಯೋಜನೆ ಫಲಾನುಭವಿಗಳಿಗೆ 603 ರೂ.ಗಳಿಗೆ ಸಿಲಿಂಡರ್ ದೊರೆಯುತ್ತದೆ.

ಕಳೆದ ಆಗಸ್ಟ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಸಿಲಿಂಡರಿನ ದರವನ್ನು 200 ರೂ. ಕಡಿಮೆ ಮಾಡಿತ್ತು. ಆ ಹಣವನ್ನು ಕೇಂದ್ರ ಸರ್ಕಾರವೇ ಬರಿಸುವುದಾಗಿ ತಿಳಿಸಿತ್ತು. ಇದರಿಂದಾಗಿ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ 400 ರೂ. ಕಡಿಮೆ ದರದಲ್ಲಿ ಸಿಲಿಂಡರ್ ಲಭ್ಯವಾಗಿತ್ತು.

ಬೀದಿ ಬದಿ ವ್ಯಾಪಾರಿಗಳಿಗೆ 50 ಸಾವಿರದವರೆಗೆ ಸಾಲ! ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ?:

ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಬೇಕು. ನಂತರ ಪಿಎಂಯುವೈ ನಲ್ಲಿ ಅನ್ವಯಿಸು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನೀವು ಖರೀದಿಸಲು ಬಯಸುವ ಗ್ಯಾಸ್ ಸಿಲಿಂಡರ್ ಯಾವುದು ಎನ್ನುವುದನ್ನು ನಮೂದಿಸಬೇಕು. ನಂತರ ಅಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.

New Update on LPG Gas Cylinder Subsidy

About Author:

Kannada News Today

Kannada News Today Providing News, information & entertainment in Kannada Language, Since 2019. This Website reacts as a…🔸ಇನ್ನಷ್ಟು ಓದಿ »

Related Stories