ಕೇಂದ್ರ ಸರ್ಕಾರವಾಗಲಿ (Central Government) ಅಥವಾ ರಾಜ್ಯ ಸರ್ಕಾರವಾಗಲಿ (State Government) ತನ್ನ ಆಡಳಿತ ಅವಧಿಯಲ್ಲಿ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತವೆ.
ಇಂತಹ ಯೋಜನೆಗಳು ಜನತೆಗೆ ಸಾಕಷ್ಟು ಪ್ರಯೋಜನವನ್ನು ಕೂಡ ನೀಡುತ್ತವೆ ಎನ್ನಬಹುದು. ಮಕ್ಕಳ ಆರೋಗ್ಯ. ಶಿಕ್ಷಣ, ಭವಿಷ್ಯ ಮೊದಲಾದವುಗಳಿಗೆ ಸಹಾಕಯವಾಗುವ ಯೋಜನೆಗಳಿಂದ ಹಿಡಿದು ವೃದ್ಧ ದಂಪತಿಗಳಿಗೆ ಪಿಂಚಣಿ (Pension) ನೀಡುವ ವರೆಗಿನ ಯೋಜನೆಗಳು ನಮ್ಮ ದೇಶದಲ್ಲಿ ಜಾರಿಯಲ್ಲಿ ಇವೆ.
ಅದರಲ್ಲಿ ಬಡವರಿಗಾಗಿಯೇ ಇರುವ ಕೆಲವು ಯೋಜನೆಗಳಲ್ಲಿ ಬಂಡವಾಳ ಅಥವಾ ಹೂಡಿಕೆ ಮಾಡದೆ ಪ್ರತಿ ತಿಂಗಳು 3000 ರೂ. ಪಿಂಚಣಿ (Monthly Pension Scheme) ಪಡೆಯುವ ಯೋಜನೆ ಕೂಡ ಒಂದಾಗಿದೆ.
ಯಾವುದೇ ಸರ್ಕಾರಿ ನೌಕರರಿಗೆ ಸರ್ಕಾರದಿಂದಲೇ ಪಿಂಚಣಿ ವ್ಯವಸ್ಥೆ ಇರುತ್ತದೆ, ಆದರೆ ಬಡ ಕಾರ್ಮಿಕರಿಗೆ ಅಥವಾ ದಿನಗೂಲಿ ಮಾಡಿಕೊಂಡು ಜೀವನ ನಡೆಸುವವರಿಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ. ಇದಕ್ಕಾಗಿ ಸರ್ಕಾರ ಹೊಸದೊಂದು ಪಿಂಚಣಿ ಯೋಜನೆ ಜಾರಿಗೆ ತಂದಿದ್ದು ಇದರಿಂದ ಸಾಕಷ್ಟು ಬಡ ಕಾರ್ಮಿಕರಿಗೆ ಸಹಾಯಕವಾಗಲಿದೆ.
ದಿನಗೂಲಿ ಮಾಡುವವರು ಅಥವಾ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರ ಜೀವನ ಕಷ್ಟ. ಅವರು ದಿನವೂ ದುಡಿದರೆ ಮಾತ್ರ ಅವರಿಗೆ ಊಟ. ಹೀಗಿರುವಾಗ ವೃದ್ಧಾಪ್ಯದಲ್ಲಿ ಜೀವನ ಸಾಗಿಸುವುದು ಇನ್ನಷ್ಟು ಕಷ್ಟಕರವಾಗುತ್ತದೆ.
ಹಾಗಾಗಿ ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಜೀವನ ಉದ್ಧಾರಕ್ಕೆ “ನಿರ್ಮಾಣ ಕಾಮಗಾರಿ ಪಿಂಚಣಿ ಯೋಜನೆ” (Nirman Kamagari pension Scheme) ಅನ್ನು ಜಾರಿಗೆ ತಂದಿದೆ.
60 ವರ್ಷ ಅಥವಾ ಅದಕ್ಕಿಂತ ಮೇಲಿನ ವಯಸ್ಸಿನವರು ಕಟ್ಟಡ ಕಾರ್ಮಿಕರಾಗಿದ್ದರೆ ಅಂತವರಿಗೆ ಪ್ರತಿ ತಿಂಗಳು 3000 ರೂ. ಗಳನ್ನು ನೀಡುವ ಯೋಜನೆ ಇದಾಗಿದೆ. ಇದಕ್ಕಾಗಿ ಒಂದು ರೂಪಾಯಿಗಳನ್ನು ಕೂಡ ಹೂಡಿಕೆ (Investment) ಮಾಡುವ ಅಗತ್ಯವಲ್ಲ.
ಅರ್ಜಿ ಸಲ್ಲಿಸುವುದು ಹೇಗೆ (How apply)
ಈ ಪಿಂಚಣಿ ಯೋಜನೆಗೆ ಅರ್ಜಿ ಹಾಕಲು ಕಾರ್ಮಿಕ ಮಂಡಳಿಯಲ್ಲಿ ಸದಸ್ಯತ್ವವನ್ನು ಹೊಂದಿರಬೇಕು. ಇನ್ನು ಈ ಯೋಜನೆಗೆ ಅರ್ಜಿ ಹಾಕುವ ಫಲಾನುಭವಿಗಳು ಬೇರೆ ಯಾವುದೇ ಇಲಾಖೆ ಅಥವಾ ಮಂಡಳಿಯ ಯೋಜನೆಯ ಫಲಾನುಭವಿಗಳಾಗಿರಬಾರದು.
ಅಂತ್ಯೋದಯ ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಪಿಂಚಣಿ ಯೋಜನೆಗೆ (Pension Scheme) ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯದಲ್ಲಿ ವಾಸಿಸುತ್ತಿರುವುದರ ಬಗ್ಗೆ ನಿವಾಸ ಪುರಾವೆ ಅಥವಾ ಶಾಶ್ವತ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯನ್ನು ಹೊಂದಿದ್ದು ಅದರ ವಿವರಗಳು
ಆಧಾರ್ ಕಾರ್ಡ್
60 ವರ್ಷ ಆಗಿರುವುದಕ್ಕೆ ಪ್ರಮಾಣ ಪತ್ರ
ನಿರ್ಮಾಣ ಕಾರ್ಮಿಕರು ಮಂಡಳಿ ನೋಂದಣಿ ಮಾಡಿಕೊಂಡಿದ್ದು ಅದರ ಸಂಖ್ಯೆ
ಕೆಲಸದ ಚೀಟಿ
ಇ-ಮೇಲ್ ಐಡಿ
ಮೊಬೈಲ್ ಸಂಖ್ಯೆ
ಮೊದಲಾದ ದಾಖಲೆಗಳು ಬೇಕು. ಎಲ್ಲಾ ದಾಖಲೆಗಳು ನಿಮ್ಮಲ್ಲಿ ಇದ್ದರೆ ಅಧಿಕೃತ ವೆಬ್ಸೈಟ್ ಆಗಿರುವ saralharyana.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸದ್ಯ ಈ ಯೋಜನೆ ಹರಿಯಾಣ (Hariyana) ರಾಜ್ಯದಲ್ಲಿ ಮಾತ್ರ ಲಭ್ಯವಿದ್ದು ಸದ್ಯದಲ್ಲಿಯೇ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಕಟ್ಟಡ ಕಾರ್ಮಿಕ ವೃದ್ಧ ದಂಪತಿಗಳಿಗೆ ಪಿಂಚಣಿ ನೀಡುವ ಯೋಜನೆ ಆರಂಭವಾಗಬಹುದು.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019