ಲೈಸೆನ್ಸ್ ಇಲ್ಲದೆ ಓಡಿಸಬಹುದಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಪೆಟ್ರೋಲ್ ಬೆಲೆ ಏರಿಕೆ ನಡುವೆ, ಜೀಲಿಯೊ ಈ-ಮೊಬಿಲಿಟಿ ಹೊಸ EV (Electric Scooter) ಸ್ಕೂಟರ್ ಲಿಟಲ್ ಗ್ರೇಸಿಯನ್ನು ಪರಿಚಯಿಸಿದೆ. ಕಡಿಮೆ ವೆಚ್ಚ, ಹೆಚ್ಚು ಮೈಲೇಜ್ ಮತ್ತು ಯುವಕರಿಗಾಗಿ ವಿಶೇಷ ಆಕರ್ಷಣೆ!
- ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಿಟಲ್ ಗ್ರೇಸಿ ಲೈಸೆನ್ಸ್ ಇಲ್ಲದೆ ಚಾಲನೆ ಮಾಡಬಹುದು
- ಮೂರು ಬೇರಿಯಂಟ್ಸ್ ಲಭ್ಯವಿದ್ದು, ಗರಿಷ್ಠ 75 ಕಿಮೀ ರೇಂಜ್ ಪಡೆಯಬಹುದು
- ಕಡಿಮೆ ವೆಚ್ಚದಲ್ಲಿ ಎಕಾನಮಿಕಲ್ ಟ್ರಾವೆಲ್, ಅನೇಕ ಆಕರ್ಷಕ ವೈಶಿಷ್ಟ್ಯಗಳು
Electric Scooter: ಇಂಧನ ದರ ಏರಿಕೆ ಮತ್ತು ಪರಿಸರ ಸ್ನೇಹಿ ಪ್ರಯಾಣದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ, ಜನರು ಸ್ಮಾರ್ಟ್ ಆಯ್ಕೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಮಧ್ಯೆ, ಜೀಲಿಯೊ ಈ-ಮೊಬಿಲಿಟಿ ಹೊಸ EV ಸ್ಕೂಟರ್ ಲಿಟಲ್ ಗ್ರೇಸಿಯನ್ನು (Zelio E-Mobility little grace ev scooter) ಬಿಡುಗಡೆ ಮಾಡಿದೆ.
ಈ ವಿಶೇಷ ಸ್ಕೂಟರ್ ಅನ್ನು 10 ರಿಂದ 18 ವರ್ಷ ವಯಸ್ಸಿನ ಟೀನೇಜ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ಸಿಕ್ಕಾಪಟ್ಟೆ ಕಡಿಮೆ ಬಡ್ಡಿಗೆ ಲೋನ್ ಪಡೆಯೋ ಸೀಕ್ರೆಟ್ ಟಿಪ್ಸ್ ಇಲ್ಲಿದೆ
ಹೊಸ ಲಿಟಲ್ ಗ್ರೇಸಿ ಸ್ಕೂಟರ್‌ನ್ನು (Zelio E-Mobility) ಚಾಲನೆ ಮಾಡಲು ಯಾವುದೇ ಲೈಸೆನ್ಸ್ (Driving License) ಅಗತ್ಯವಿಲ್ಲ. ಇದರಿಂದಾಗಿ ಟೀನೇಜರ್ ಮತ್ತು ನಗರಿಯ ದಿನನಿತ್ಯ ಪ್ರಯಾಣಿಕರಿಗೆ ಇದು ಅನುಕೂಲಕರ ಆಯ್ಕೆಯಾಗಲಿದೆ.
ಈ ಸ್ಕೂಟರ್ ಮೂರು ವಿಭಿನ್ನ ವೇರಿಯಂಟ್ಸ್‌ನಲ್ಲಿ ಲಭ್ಯವಿದ್ದು, ಬೆಲೆ ₹49,500ರಿಂದ ಆರಂಭವಾಗುತ್ತದೆ. ವಿವಿಧ ಬ್ಯಾಟರಿ ಆಯ್ಕೆಗಳೊಂದಿಗೆ ಗರಿಷ್ಠ 75 ಕಿಮೀ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 5 ಬೆಸ್ಟ್ CNG ಕಾರುಗಳು
ಫೀಚರ್ಸ್ ಮತ್ತು ಸ್ಪೆಸಿಫಿಕೇಷನ್
- ಲಿಟಲ್ ಗ್ರೇಸಿ ಸ್ಕೂಟರ್ 48V/32Ah ಲೀಡ್ ಆಸಿಡ್ ಬ್ಯಾಟರಿ, 60V/32Ah ಲೀಡ್ ಆಸಿಡ್ ಬ್ಯಾಟರಿ ಮತ್ತು 60V/30Ah ಲಿಥಿಯಂ-ಅಯಾನ್ ಬ್ಯಾಟರಿ ಆಯ್ಕೆಯಲ್ಲಿ ಲಭ್ಯವಿದೆ.
- ಈ ಮೂರು ವೇರಿಯಂಟ್ಸ್ ಕ್ರಮವಾಗಿ 55-60 ಕಿಮೀ, 70 ಕಿಮೀ ಮತ್ತು 70-75 ಕಿಮೀ ರೇಂಜ್ ಒದಗಿಸುತ್ತವೆ.
- ಗರಿಷ್ಠ ವೇಗ 25 km/h ಆಗಿದ್ದು, ವಿದ್ಯುತ್ ಬಳಕೆ ದೈನಂದಿನ ಪ್ರಯಾಣಕ್ಕೆ ಎಕಾನಮಿಕಲ್ ಆಯ್ಕೆ ಆಗಿಸುತ್ತದೆ.
- ಡಿಜಿಟಲ್ ಡ್ಯಾಶ್‌ಬೋರ್ಡ್, USB ಪೋರ್ಟ್, ಕೀಲೆಸ್ ಸ್ಟಾರ್ಟ್, ಆಂಟಿ-ಥೆಫ್ಟ್ ಅಲಾರ್ಮ್, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್ ಸೇರಿದಂತೆ ಆಧುನಿಕ ತಂತ್ರಜ್ಞಾನವಿದೆ.
- ಪಿಂಕ್, ಕ್ರೀಮ್ ಬ್ರೌನ್, ವೈಟ್-ಬ್ಲೂ, ಹಾಗೂ ಹಳದಿ-ಹಸಿರು ಬಣ್ಣಗಳಲ್ಲಿ ಲಭ್ಯವಿದೆ.
ಜೀಲಿಯೊ ಈ-ಮೊಬಿಲಿಟಿಯ ಸಹ ಸ್ಥಾಪಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕುನಾಲ್ ಆರ್ಯ ಈ ಸ್ಕೂಟರ್ ಬಗ್ಗೆ ಮಾತನಾಡಿ, “ಇದು ನಗರ ಪ್ರಯಾಣಕ್ಕಾಗಿ ಅತ್ಯುತ್ತಮ ಆಯ್ಕೆ. ಇದು ಬಜೆಟ್-ಫ್ರೆಂಡ್ಲಿ ಆಗಿದ್ದು, ಜನರ ದಿನನಿತ್ಯದ ಓಡಾಟ ಸುಲಭಗೊಳಿಸುತ್ತದೆ” ಎಂದರು.
ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೂ ಸಿಗುತ್ತೆ ಹೋಂ ಲೋನ್! ಬ್ಯಾಂಕ್ ಬಂಪರ್ ಆಫರ್
ಈ ಹೊಸ ಸ್ಕೂಟರ್ (Zelio E-Mobility Electric Scooter) ಈಗಾಗಲೇ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ EV ವಾಹನಗಳ ಬೇಡಿಕೆ ಗಗನಕ್ಕೇರುತ್ತಿದೆ. ಜೀಲಿಯೊ ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ 1,000 ಕ್ಕಿಂತ ಹೆಚ್ಚು ಡೀಲರ್‌ಶಿಪ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.
No License Needed, New EV Scooter Launched