10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 5 ಬೆಸ್ಟ್ CNG ಕಾರುಗಳು
10 ಲಕ್ಷ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ಹಾಗೂ ಎಫಿಶಿಯನ್ಸಿ ನೀಡುವ ಟಾಪ್ CNG ಕಾರುಗಳ ಮಾಹಿತಿ ಇಲ್ಲಿದೆ. ಮಾರ್ಕೆಟ್‌ನಲ್ಲಿ ಲಭ್ಯವಿರುವ ಬೆಸ್ಟ್ ಆಯ್ಕೆಗಳ ದರ, ವೈಶಿಷ್ಟ್ಯ, ಮೈಲೇಜ್ ಕುರಿತು ಸಂಪೂರ್ಣ ವಿವರ.
- 10 ಲಕ್ಷ ಒಳಗೆ ಉತ್ತಮ CNG ಕಾರುಗಳ ಪಟ್ಟಿ
- ಉತ್ತಮ ಮೈಲೇಜ್, ಬಜೆಟ್ ಫ್ರೆಂಡ್ಲಿ ಆಯ್ಕೆಗಳು
- ಎಲ್ಲ ಕಾರುಗಳ ಫೀಚರ್, ಬೆಲೆ ವಿವರ ಇಲ್ಲಿದೆ
ನಿಮ್ಮ ಬಜೆಟ್ (Budget) 10 ಲಕ್ಷ ಒಳಗಿದೆಯಾ? ಹಾಗಾದ್ರೆ, ಮಾರುಕಟ್ಟೆಯಲ್ಲಿ ಹಲವು ಫ್ಯೂಯೆಲ್-ಎಫಿಶಿಯಂಟ್ CNG ಕಾರುಗಳು ಲಭ್ಯವಿವೆ. ದುಬಾರಿ ಪೆಟ್ರೋಲ್, ಡೀಸೆಲ್ ಕಾಟ ತಪ್ಪಿಸಿಕೊಳ್ಳಲು CNG ಕಾರುಗಳು ಆಪ್ಟ್ ಆಯ್ಕೆಯಾಗಿದ್ದು, ಉತ್ತಮ ಮೈಲೇಜ್ ನೀಡುತ್ತವೆ. ಇಲ್ಲಿದೆ 10 ಲಕ್ಷ ಒಳಗೆ ಲಭ್ಯವಿರುವ ಟಾಪ್ CNG ಕಾರುಗಳ ಮಾಹಿತಿ.
ಮಾರ್ಕೆಟ್‌ನಲ್ಲಿ ಲಭ್ಯವಿರುವ ಬೆಸ್ಟ್ ಆಯ್ಕೆಗಳ ದರ, ವೈಶಿಷ್ಟ್ಯ, ಮೈಲೇಜ್ ಕುರಿತು ಸಂಪೂರ್ಣ ವಿವರ.
ಇದನ್ನೂ ಓದಿ: EMI ಕಟ್ಟಿಲ್ವಾ? ಕ್ರೆಡಿಟ್ ಸ್ಕೋರ್ ಕಡಿಮೆ ಆಗೋಕೂ ಮುನ್ನ ಈಗೆ ಮಾಡಿ
1. Maruti Suzuki Alto K10
ಚಿಕ್ಕದಾದ, ಸ್ಟೈಲಿಶ್, ಬಜೆಟ್ ಫ್ರೆಂಡ್ಲಿ ಕಾರ್ ಹುಡುಕುತ್ತಿದ್ದರೆ, Maruti Suzuki Alto K10 ಒಳ್ಳೆಯ ಆಯ್ಕೆ. ಇದು 998cc ಇಂಜಿನ್ ಹೊಂದಿದ್ದು, 56bhp ಪವರ್, 82.1Nm ಟಾರ್ಕ್ ನೀಡುತ್ತದೆ. 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಹೊಂದಿದ್ದು, 33.85 km/kg ಮೈಲೇಜ್ ನೀಡುತ್ತದೆ.
ಬೆಲೆ: ₹5.83-₹6.04 ಲಕ್ಷ (ಎಕ್ಸ್-ಶೋರೂಂ)
2. Maruti Suzuki S-Presso
ಹೈ ಗ್ರೌಂಡ್ ಕ್ಲಿಯರೆನ್ಸ್(Clearance), ಎನರ್ಜಿ ಟಿಕ್ ಡಿಸೈನ್ ಹೊಂದಿರುವ S-Presso ಕೂಡ ಉತ್ತಮ ಆಯ್ಕೆ. 998cc ಇಂಜಿನ್, 56bhp ಪವರ್, 82.1Nm ಟಾರ್ಕ್, 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಹೊಂದಿದ್ದು, 32.73 km/kg ಮೈಲೇಜ್ ನೀಡುತ್ತದೆ.
ಬೆಲೆ: ₹5.91-₹6.11 ಲಕ್ಷ (ಎಕ್ಸ್-ಶೋರೂಂ)
ಇದನ್ನೂ ಓದಿ: ಬಸ್ ಟಿಕೆಟ್ ಬೆಲೆಗೆ ವಿಮಾನ ಟಿಕೆಟ್! ಕೇವಲ ₹999ಕ್ಕೆ ಎಲ್ಲಾದ್ರೂ ಹಾರಾಡಿ
3. Tata Tiago iCNG
ಕಂಪಾಕ್ಟ್ ಹ್ಯಾಚ್‌ಬ್ಯಾಕ್, ಪವರ್‌ಫುಲ್ ಪರ್ಫಾರ್ಮೆನ್ಸ್ ನೀಡುವ Tata Tiago iCNG ಒಂದು ಉತ್ತಮ ಆಯ್ಕೆ. 1.2 ಲೀಟರ್ ಇಂಜಿನ್ ಹೊಂದಿದ್ದು, 72.3bhp ಪವರ್, 95Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುಯಲ್, AMT ವೆರಿಯಂಟ್‌ಗಳಲ್ಲಿದೆ. 26.49-28.06 km/kg ಮೈಲೇಜ್ ನೀಡುತ್ತದೆ.
ಬೆಲೆ: ₹5.99-₹8.19 ಲಕ್ಷ (ಎಕ್ಸ್-ಶೋರೂಂ)
4. Maruti Suzuki Wagon R CNG
ಸ್ಪೇಷಿಯಸ್(Space), ಫ್ಯಾಮಿಲಿ ಫ್ರೆಂಡ್ಲಿ ಡಿಸೈನ್ ಹೊಂದಿರುವ Wagon R CNG ಕಾರು, 998cc ಇಂಜಿನ್, 56bhp ಪವರ್, 82.1Nm ಟಾರ್ಕ್ ನೀಡುತ್ತದೆ. 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಹೊಂದಿದ್ದು, 33.47 km/kg ಮೈಲೇಜ್ ನೀಡುತ್ತದೆ.
ಬೆಲೆ: ₹6.54-₹6.99 ಲಕ್ಷ (ಎಕ್ಸ್-ಶೋರೂಂ)
ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೂ ಸಿಗುತ್ತೆ ಹೋಂ ಲೋನ್! ಬ್ಯಾಂಕ್ ಬಂಪರ್ ಆಫರ್
5. Maruti Suzuki Celerio CNG
ಅತ್ಯುತ್ತಮ ಮೈಲೇಜ್ ನೀಡುವ Maruti Suzuki Celerio CNG, 998cc ಇಂಜಿನ್, 55.92bhp ಪವರ್, 82.1Nm ಟಾರ್ಕ್ ಹೊಂದಿದ್ದು, 34 km/kg ಮೈಲೇಜ್ ನೀಡುತ್ತದೆ. ಬಜೆಟ್ ಸ್ನೇಹಿ ಆಯ್ಕೆ.
ಬೆಲೆ: ₹6.90 ಲಕ್ಷ (ಎಕ್ಸ್-ಶೋರೂಂ)
ನಿಮಗೆ ಹಾಗೂ ನಿಮ್ಮ ಬಜೆಟ್ ಹಾಗೂ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಸರಿಯಾದ ಆಯ್ಕೆ ಮಾಡಿಕೊಳ್ಳಿ!
Top 5 Best CNG Cars Under 10 Lakh
Our Whatsapp Channel is Live Now 👇