ಬಸ್ ಟಿಕೆಟ್ ಬೆಲೆಗೆ ವಿಮಾನ ಟಿಕೆಟ್! ಕೇವಲ ₹999ಕ್ಕೆ ಎಲ್ಲಾದ್ರೂ ಹಾರಾಡಿ
Flight Ticket Offer: ಹೋಳಿ ಹಬ್ಬದ ಸಂಭ್ರಮದಲ್ಲಿ ಸ್ಟಾರ್ ಏರ್ ಬಂಪರ್ ಡಿಸ್ಕೌಂಟ್ ಘೋಷಿಸಿದೆ! ಕೇವಲ ₹999 ರಿಂದ ಎಕಾನಮಿ ಕ್ಲಾಸ್ ಟಿಕೆಟ್ ಲಭ್ಯ, 7 ತಿಂಗಳವರೆಗೆ ಪ್ರಯಾಣ ಅವಕಾಶ.
- ಹೋಳಿ ಹಬ್ಬದ ವಿಶೇಷ ಡಿಸ್ಕೌಂಟ್ – ಟಿಕೆಟ್ ₹999ರಿಂದ ಆರಂಭ
- ಮಾರ್ಚ್ 11 ರಿಂದ 17ರ ವರೆಗೆ ಬುಕಿಂಗ್ ಮಾಡಬಹುದಾದ ಅವಕಾಶ
- ಸೆಪ್ಟೆಂಬರ್ 30, 2025ರವರೆಗೆ ಪ್ರಯಾಣ ಸೌಲಭ್ಯ
999 ರೂಪಾಯಿಗೆ ವಿಮಾನ ಪ್ರಯಾಣ – ಸ್ಟಾರ್ ಏರ್ ಸರ್ಪ್ರೈಸ್ ಆಫರ್!
Flight Ticket Offer: ಭಾರತೀಯ ಸ್ಟಾರ್ ಏರ್ (Star Air) ತನ್ನ ಗ್ರಾಹಕರಿಗೆ ಹೋಳಿ ಹಬ್ಬದ ಸಿಹಿಸುದ್ದಿ ನೀಡಿದ್ದು, ವಿಮಾನ ಪ್ರಯಾಣಕ್ಕೆ ಬಂಪರ್ ಆಫರ್ ಘೋಷಿಸಿದೆ. ಈಗ ಕೇವಲ ₹999ನಿಂದ ವಿಮಾನ ಪ್ರಯಾಣ ಸಾಧ್ಯ, ಬಸ್ ಟಿಕೆಟ್‍ಗೂ ಪೈಪೋಟಿ ಕೊಡುವ ದರದಲ್ಲಿ ಟಿಕೆಟ್‌ಗಳನ್ನು (Flight Ticket Discount) ಲಭ್ಯ ಮಾಡಲಾಗಿದೆ.
ಹೌದು, ಹೋಳಿ ಹಬ್ಬದ ಸಂಭ್ರಮದಲ್ಲಿ ಸ್ಟಾರ್ ಏರ್ ಬಂಪರ್ ಡಿಸ್ಕೌಂಟ್ ಘೋಷಿಸಿದೆ! ಕೇವಲ ₹999 ರಿಂದ ಎಕಾನಮಿ ಕ್ಲಾಸ್ ಟಿಕೆಟ್ ಲಭ್ಯ.
ಇದನ್ನೂ ಓದಿ: EMI ಕಟ್ಟಿಲ್ವಾ? ಕ್ರೆಡಿಟ್ ಸ್ಕೋರ್ ಕಡಿಮೆ ಆಗೋಕೂ ಮುನ್ನ ಈಗೆ ಮಾಡಿ
7 ದಿನದ ಆಫರ್, 7 ತಿಂಗಳ ಪ್ರಯಾಣ ಅವಕಾಶ!
ಹೋಳಿ ಹಬ್ಬದ ಈ ಆಫರ್ ಮಾರ್ಚ್ 11 ರಿಂದ 17, 2025ರ ವರೆಗೆ ಬುಕಿಂಗ್‌ಗೆ ತೆರೆಯಲಾಗಿದ್ದು, ಪ್ರಯಾಣದ ಅವಧಿ ಮಾರ್ಚ್ 11 ರಿಂದ ಸೆಪ್ಟೆಂಬರ್ 30, 2025ರವರೆಗೆ ವಿಸ್ತರಿಸಲಾಗಿದೆ. ಈ ಆಫರ್ ಪ್ರಯಾಣಿಕರಿಗೆ ದೀರ್ಘಾವಧಿಯ ಪ್ರಯಾಣ ಯೋಜನೆ ಮಾಡಲು ಅವಕಾಶ ಕಲ್ಪಿಸುತ್ತಿದೆ.
ಬ್ಯೂಸಿನೆಸ್ ಕ್ಲಾಸ್‌ಗೆ ಕೂಡಾ ಡಿಸ್ಕೌಂಟ್!
ಸಾಮಾನ್ಯವಾಗಿ ಹಳೆಯ ಪ್ರಯಾಣಿಕರು ಮಾತ್ರ ಆಫರ್ ಪಡೆಯಲು ಸಾಧ್ಯ ಎನ್ನುವ ಭಾವನೆಗೆ ಬ್ರೇಕ್ ಹಾಕಿರುವ ಸ್ಟಾರ್ ಏರ್, ಬ್ಯೂಸಿನೆಸ್ ಕ್ಲಾಸ್ (Business Class) ಪ್ರಯಾಣಕ್ಕೂ ವಿಶೇಷ ರಿಯಾಯಿತಿ ಘೋಷಿಸಿದೆ. ಬ್ಯೂಸಿನೆಸ್ ಕ್ಲಾಸ್ ಟಿಕೆಟ್ ದರ ₹3099 ರಿಂದ ಪ್ರಾರಂಭವಾಗಲಿದೆ.
ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೂ ಸಿಗುತ್ತೆ ಹೋಂ ಲೋನ್! ಬ್ಯಾಂಕ್ ಬಂಪರ್ ಆಫರ್
ಬುಕಿಂಗ್ ಮತ್ತು ಪ್ರಯಾಣದ ವಿವರಗಳು
✔ ಎಕಾನಮಿ ಕ್ಲಾಸ್: ₹999ರಿಂದ ಪ್ರಾರಂಭ
✔ ಬ್ಯೂಸಿನೆಸ್ ಕ್ಲಾಸ್: ₹3099ರಿಂದ ಪ್ರಾರಂಭ
✔ ಬುಕಿಂಗ್ ಅವಧಿ: ಮಾರ್ಚ್ 11 – ಮಾರ್ಚ್ 17, 2025
✔ ಪ್ರಯಾಣ ಅವಧಿ: ಮಾರ್ಚ್ 11 – ಸೆಪ್ಟೆಂಬರ್ 30, 2025
ಸ್ಟಾರ್ ಏರ್ ಸೇವೆಗಳು – ನಿಮ್ಮ ಹತ್ತಿರದ ವಿಮಾನ ನಿಲ್ದಾಣದಿಂದ!
ಸ್ಟಾರ್ ಏರ್ ಪ್ರಸ್ತುತ ಬೆಂಗಳೂರು, ಶಿವಮೊಗ್ಗ, ಹೈದರಾಬಾದ್ (Hyderabad), ಗೋವಾ, ತಿರುಪತಿ, ಬೆಳಗಾವಿ, ನಾಗ್ಪುರ ಸೇರಿದಂತೆ ಹಲವೆಡೆಗೆ ಸೇವೆ ನೀಡುತ್ತಿದೆ. 2019ರಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bangalore Airport) ತನ್ನ ಸೇವೆ ಪ್ರಾರಂಭಿಸಿದ ಸ್ಟಾರ್ ಏರ್, ಈಗ ಉಡಾನ್ (UDAN) ಯೋಜನೆಯಡಿ ದೇಶದ ಹಲವು ನಗರಗಳಿಗೆ ತನ್ನ ಸೇವೆ ವಿಸ್ತರಿಸಿದೆ.
ಇದನ್ನೂ ಓದಿ: ₹1,119ಕ್ಕೆ ವಿಮಾನ ಪ್ರಯಾಣ! ಆಕಾಶದಲ್ಲಿ ಹಾರಾಡೋ ಕನಸು ನೆರವೇರಿಸಿಕೊಳ್ಳಿ
ಹೋಳಿ ಆಫರ್ ಅನ್ನು ಬಳಸಿಕೊಳ್ಳಲು, ಪ್ರಯಾಣಿಕರು ಶೀಘ್ರವೇ ಟಿಕೆಟ್ ಬುಕ್ (Flight Ticket Booking) ಮಾಡಬೇಕು, ಇಲ್ಲದಿದ್ದರೆ ಆಫರ್ ಮಿಸ್ ಆಗಬಹುದು!
Star Air Holi Flight Ticket Offer, Fly at Just 999
Our Whatsapp Channel is Live Now 👇