Ads By Google
Business News

ನಿಮ್ಮ ಎಷ್ಟೇ ಹಳೆಯ ಜಮೀನಿನ ದಾಖಲೆಗಳು ಬೇಕಾದ್ರೂ ಇನ್ಮುಂದೆ ಮೊಬೈಲ್ ನಲ್ಲೇ ಸಿಗಲಿದೆ! ಇಲ್ಲಿದೆ ಲಿಂಕ್

ಭೂಮಿಯ ಮೇಲೆ ಸಾಲ (Bank Loan) ಪಡೆಯಲು, ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಪಡೆಯಲು, ಇದೆಲ್ಲದಕ್ಕೂ ಭೂಮಿ ದಾಖಲೆ ಬೇಕೇ ಬೇಕು.

Ads By Google

ಭಾರತ ಈಗ ಡಿಜಿಟಲ್ ಇಂಡಿಯಾ (Digital India) ಆಗುತ್ತಿದೆ. ಬಹುತೇಕ ವ್ಯವಹಾರಗಳಿಗೆ, ಚಟುವಟಿಕೆಗಳಿಗೆ ಮೊಬೈಲ್ ಫೋನ್ ಗಳನ್ನೇ ಬಳಸಲಾಗುತ್ತಿದೆ. ಈ ಕಾರಣಕ್ಕೆ ಎಲ್ಲರ ಮನೆಯಲ್ಲೂ ಒಂದಾದರೂ ಆಂಡ್ರಾಯ್ಡ್ ಫೋನ್ (Android Phone) ಇರುತ್ತದೆ ಎಂದರೆ ತಪ್ಪಲ್ಲ.

ಹಣಕಾಸಿನ ವ್ಯವಹಾರ, ಬ್ಯಾಂಕ್ ಕೆಲಸ, ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸ ಇದೆಲ್ಲವನ್ನು ಸಹ ಫೋನ್ (Smartphone) ಮೂಲಕವೇ ಮಾಡಿಕೊಳ್ಳಬಹುದು. ಹಾಗಾಗಿ ಇದೀಗ ರೈತರಿಗೆ (Farmers) ಬೇಕಾದ ಒಂದು ಪ್ರಮುಖ ವಿಚಾರವನ್ನು ಕೂಡ ಇನ್ಮುಂದೆ ಫೋನ್ ಇಂದಲೇ ಪಡೆಯುವ ಸೌಕರ್ಯವನ್ನು ಸರ್ಕಾರ ಮಾಡಿಕೊಡುತ್ತಿದೆ.

ಹೌದು, ಒಬ್ಬ ರೈತರಿಗೆ ಭೂಮಿಯ ದಾಖಲೆಗಳು (Land Documents) ಎಷ್ಟು ಮುಖ್ಯ ಎಂದು ನಮಗೆಲ್ಲಾ ಗೊತ್ತೇ ಇದೆ. ಭೂಮಿಯ ಮೇಲೆ ಸಾಲ (Bank Loan) ಪಡೆಯಲು, ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಪಡೆಯಲು, ಇದೆಲ್ಲದಕ್ಕೂ ಭೂಮಿ ದಾಖಲೆ ಬೇಕೇ ಬೇಕು.

ಉಚಿತ ಗ್ಯಾಸ್ ಕನೆಕ್ಷನ್ ಜೊತೆಗೆ ಇನ್ನೂ ಮುಂದಿನ 9 ತಿಂಗಳ ಕಾಲ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ

ಆದರೆ ಕೆಲವೊಮ್ಮೆ ಅಗತ್ಯವಿರುವ ಸಮಯದಲ್ಲಿ ದಾಖಲೆಗಳು ಸಿಗದೇ ಹೋಗಬಹುದು. ಅಥವಾ ದಾಖಲೆಗಳು ಎಲ್ಲೋ ಕಳೆದು ಹೋಗಿರಬಹುದು. ಆ ಪರಿಸ್ಥಿತಿ ಬಂದರೆ ಹೊಸ ದಾಖಲೆ ಪಡೆಯುವುದು ಸುಲಭ ಅಂತೂ ಅಲ್ಲ.

ಮತ್ತೊಮ್ಮೆ ನಿಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳು (Property Documents) ಬೇಕು ಎಂದರೆ, ತಾಲ್ಲೂಕು ಕಛೇರಿಗೆ ಹೋಗಿ, ಅರ್ಜಿ ಸಲ್ಲಿಸಿ, ಡಾಕ್ಯುಮೆಂಟ್ ಗಳು ಸಿಗುವುದಕ್ಕೆ ಒಂದಷ್ಟು ದಿನಗಳ ಕಾಲ ಕಾಯಬೇಕು. ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಹಾಗಾಗಿ ಸರ್ಕಾರವು ರೈತರಿಗೆ ತಮ್ಮ ಭೂಮಿ ದಾಖಲೆ ಪಡೆಯಲು ಒಂದು ಸುಲಭ ವಿಧಾನವನ್ನು ತರಲಿದೆ. ಇದರ ಮೂಲಕ ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸುಲಭವಾಗಿ ನಿಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಸರ್ಕಾರ ಒಂದು ಆಪ್ ಅನ್ನು (App) ಹೊರತಂದಿದ್ದು, ಈ ಆಪ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯೋಣ..

ಮಹಿಳೆಯರಿಗೆ ಸಿಗಲಿದೆ ₹60,000 ರೂಪಾಯಿ! ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು

ಫೋನ್ ನಲ್ಲೇ ಜಮೀನಿನ ದಾಖಲೆ ಪಡೆಯಿರಿ:

* landrecords.karnataka.gov.in ಕಂದಾಯ ಇಲಾಖೆಯ ಈ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ.

*ಹೋಮ್ ಪೇಜ್ ನಲ್ಲಿ View RTC and MR ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

*ಇಲ್ಲಿ View Current Year, RTC, Old Year RTC and MR, Mutation Status ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ.

*ಬಳಿಕ ಮತ್ತೊಂದು ಪೇಜ್ ಓಪನ್ ಆಗಿ ಅದರಲ್ಲಿ, RTC, Mutation Status, Khata Extract, Survey Documents ಎನ್ನುವ ಆಯ್ಕೆ ಸಿಗುತ್ತದೆ. ಇದರಲ್ಲಿ ನೀವು Survey Documents ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

*ಬಳಿಕ ಇನ್ನೊಂದು ಹೊಸ ಪೇಜ್ ಓಪನ್ ಆಗುತ್ತದೆ, ಇದು Karnataka Land Records Image Retrieval System ಎನ್ನುವ ಹೊಸ ಪೇಜ್ ಆಗಿರುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್! ಬಂಪರ್ ಕೊಡುಗೆ

*ಇಲ್ಲಿ ನೀವು ನಿಮ್ಮ ಫೋನ್ ನಂಬರ್ ಮತ್ತು ಕ್ಯಾಪ್ಚ ಕೋಡ್ ಎಂಟರ್ ಮಾಡಬೇಕು, ಈಗ ನಿಮ್ಮ ನಂಬರ್ ಗೆ ಒಂದು OTP ಬರುತ್ತದೆ, ಅದನ್ನು ಬಳಸಿ ಲಾಗಿನ್ ಮಾಡಿ.

*ಬಳಿಕ Select Survey Number ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ, ಇದರಲ್ಲಿ ನಿಮ್ಮ ಜಿಲ್ಲೆ, ಹೋಬಳಿ, ತಾಲ್ಲೂಕು, ಗ್ರಾಮ ಇದೆಲ್ಲವನ್ನು ಆಯ್ಕೆ ಮಾಡಿ.

*ನಂತರ ಸರ್ವೇ ನಂಬರ್ ಹಾಕಿ, ಸರ್ಚ್ ಮಾಡಿ. ಈಗ ಇನ್ನೊಂದು ಹೊಸ ಪೇಜ್ ಓಪನ್ ಆಗುತ್ತದೆ.

*ಹೊಸ ಪೇಜ್ ನಲ್ಲಿ ಹಿಸ್ಸಾ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೇ ಪ್ರತಿ ಪುಸ್ತಕ, ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಪ್ರತಿ ಪುಸ್ತಕ, ರೀ ಸರ್ವೆ ಟಿಪ್ಪಣಿ ಪುಸ್ತಕ ಹಿಸ್ಸ ಸರ್ವೆ ಪಕ್ಕ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಟಿಪ್ಪಣಿ ಪುಸ್ತಕ ಈ ಎಲ್ಲಾ ಆಯ್ಕೆಗಳು ಕಾಣುತ್ತದೆ. ಇದರಲ್ಲಿ ನಿಮಗೆ ಯಾವುದು ಬೇಕೋ, ಆ ಆಯ್ಕೆಯನ್ನು ಕ್ಲಿಕ್ ಮಾಡಿ, ಆ ಡಾಕ್ಯುಮೆಂಟ್ ಪಡೆಯಿರಿ.

ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ! ತಿಂಗಳ ಮೊದಲ ದಿನವೇ ಚಿನ್ನದ ಬೆಲೆ ಕುಸಿತ

No matter how old your land records are, you will get them on your mobile

Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere