ಇನ್ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯೋಕೆ ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ! ನಿಯಮದಲ್ಲಿ ಬದಲಾವಣೆ

ತಿಷ್ಠಿತ ಡ್ರೈವಿಂಗ್ ಸ್ಕೂಲ್ (driving school) ಅಥವಾ ತರಬೇತಿ ಕೇಂದ್ರದಲ್ಲೇ (training centre) ಚಾಲನಾ ಪರವಾನಿಗೆ ಪಡೆದುಕೊಳ್ಳಬಹುದು.

ಸೈಕಲ್ ಒಂದನ್ನು ಬಿಟ್ಟು ಯಾವುದೇ ವಾಹನ ಓಡಿಸಲು ಚಾಲನಾ ಪರವಾನಿಗೆ (driving licence) ಅಗತ್ಯ. ಚಾಲನಾ ಪರವಾನಿಗೆ ಇಲ್ಲದಿದ್ದರೆ ಟ್ರಾಫಿಕ್ ಪೊಲೀಸರು (traffic police) ದಂಡ ವಿಧಿಸುತ್ತಾರೆ.

ಕೆಲವೊಂದು ಪ್ರಕರಣದಲ್ಲಿ ವಾಹನವನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಆದ್ದರಿಂದ ವಾಹನ ಹೊಂದಿದ ಪ್ರತಿಯೊಬ್ಬರು ಚಾಲನಾ ಪರವಾನಿಗೆ ಹೊಂದುವುದು ಅವಶ್ಯ.

ಈ ಚಾಲನಾ ಪರವಾನಿಗೆ ಪಡೆಯಲು ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಟೆಸ್ಟ್ ಡ್ರೈವ್ (test drive) ನೀಡಬೇಕು. ನಿಮಗೆ ಚಾಲನೆ ಬರುತ್ತದೆ ಎಂದು ಅಧಿಕಾರಿಗಳಿಗೆ ಮನವರಿಕೆ ಆದಾಗ ನಿಮಗೆ ಚಾಲನಾ ಪರವಾನಿಗೆ ನೀಡುತ್ತಾರೆ. ಆದರೆ ಈ ಚಾಲನಾ ಪರವಾನಿಗೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆ ಮಾಡಿದೆ.

ಇನ್ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯೋಕೆ ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ! ನಿಯಮದಲ್ಲಿ ಬದಲಾವಣೆ - Kannada News

ಬಯೋಮೆಟ್ರಿಕ್ ನವೀಕರಿಸದಿದ್ದರೆ ಗ್ಯಾಸ್ ಸಬ್ಸಿಡಿ ಕ್ಯಾನ್ಸಲ್ ಆಗುತ್ತಾ? ಇಲ್ಲಿದೆ ಅಸಲಿ ವಿಷಯ

ಇನ್ಮುಂದೆ ಚಾಲನಾ ಪರವಾನಿಗೆ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿ ಕ್ಯೂನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಯಾಕೆಂದ್ರೆ ಕೇಂದ್ರ ಸರ್ಕಾರ ಚಾಲನಾ ಪರವಾನಿಗೆ ನಿಯಮವನ್ನು ಸರಳಗೊಳಿಸಿದೆ.

ಚಾಲನಾ ಪರವಾನಿಗೆ ಪಡೆಯಲು ಇರುವ ಶರತ್ತುಗಳ ಪ್ರಕಾರ ಈಗ ನೀವು ಆರ್ಟಿಒ (RTO) ಹೋಗಿ ಯಾವುದೇ ರೀತಿಯ ಟೆಸ್ಟ್ ಡ್ರೈವ್ ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಿಳಿಸಿದೆ.

ಈ ಬ್ಯಾಂಕ್ ಅಕೌಂಟ್ ಇರೋರಿಗೆ ರಾತ್ರೋ-ರಾತ್ರಿ ಸಿಹಿ ಸುದ್ದಿ! ಸಿಗುತ್ತೆ ಹೆಚ್ಚಿನ ಬಡ್ಡಿ

New rules for driving licenseತರಬೇತಿ ಪಡೆದ ಸಂಸ್ಥೆಯಿಂದಲೇ ಪಡೆಯಬಹುದು ಲೈಸೆನ್ಸ್:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ನೀವು ಆರ್ಟಿಒ ಕಚೇರಿಗೆ ತೆರಳಬೇಕಾದ ಅವಶ್ಯಕತೆ ಇಲ್ಲ. ಇನ್ಮುಂದೆ ಪ್ರತಿಷ್ಠಿತ ಡ್ರೈವಿಂಗ್ ಸ್ಕೂಲ್ (driving school) ಅಥವಾ ತರಬೇತಿ ಕೇಂದ್ರದಲ್ಲೇ (training centre) ಚಾಲನಾ ಪರವಾನಿಗೆ ಪಡೆದುಕೊಳ್ಳಬಹುದು. ಅರ್ಜಿದಾರರು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅವರು ತರಬೇತಿ ಪಡೆದ ಕೇಂದ್ರದಿಂದಲೇ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು.

ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳ ತರಬೇತಿ ಕೇಂದ್ರ ನಡೆಸಲು ಕನಿಷ್ಠ ಒಂದು ಎಕರೆ ಜಮೀನು ಇರಬೇಕು. ಮಧ್ಯಮ ಮತ್ತು ಭಾರಿ ವಾಹನಗಳ ತರಬೇತಿ ಕೇಂದ್ರಗಳು ಎರಡು ಎಕರೆ ಜಮೀನು ಹೊಂದಿರಬೇಕು. ತರಬೇತಿ ನೀಡುವವರು ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು. ಲಘು ಮೋಟಾರು ವಾಹನಗಳ ಕೋರ್ಸ್ ನಡೆಸಲು ನಾಲ್ಕು ವಾರಗಳ ಗಡುವು ನೀಡಲಾಗಿದೆ.

ನಿಮ್ಮ ಬ್ಯಾಂಕ್ ಲೋನ್ ಅರ್ಜಿ ರಿಜೆಕ್ಟ್ ಆಯ್ತಾ? ಅದಕ್ಕೆ ಪಕ್ಕಾ ಕಾರಣ ಇಲ್ಲಿದೆ ತಿಳಿಯಿರಿ

ಡ್ರೈವಿಂಗ್ ಕಲಿಯುವ ಮುನ್ನ ನಿಯಮ ತಿಳಿದುಕೊಳ್ಳಿ

ಡ್ರೈವಿಂಗ್ ಕಲಿಯುವಾಗ ಮೂಲಭೂತ ರಸ್ತೆಗಳು, ಗ್ರಾಮೀಣ ರಸ್ತೆಗಳು, ಹೆದ್ದಾರಿಗಳು, ನಗರದ ರಸ್ತೆಗಳು, ಪಾರ್ಕಿಂಗ್, ಹಿಮ್ಮುಖ ಚಲನೆ ಇತ್ಯಾದಿಗಳನ್ನು ಕಲಿಯಬೇಕಾಗುತ್ತದೆ. ಇದರ ಜೊತೆ ಟ್ರಾಫಿಕ್ ಸಂಬಂಧಿತ ಮಾಹಿತಿ, ಅವಘಡಗಳು ಸಂಭವಿಸಿದ ವೇಳೆ ಪ್ರಥಮ ಚಿಕಿತ್ಸೆ ನೀಡುವುದರ ಕುರಿತು ಮಾಹಿತಿ ಪಡೆದಿರಬೇಕು.

2 ವರ್ಷದಿಂದ ಬ್ಯಾಂಕ್ ಅಕೌಂಟ್ ಬಳಸದವರಿಗೆ ಹೊಸ ನಿಯಮ! ಖಾತೆ ಡಿಆಕ್ಟಿವೇಟ್

No more driving test to get driving license, Change in rule

Follow us On

FaceBook Google News

No more driving test to get driving license, Change in rule