ಇಂಟರ್ನೆಟ್ ಇಲ್ಲದೇ ಯುಪಿಐ ಪೇಮೆಂಟ್ ಮಾಡುವ ಸುಲಭ ಪ್ರಕ್ರಿಯೆ ಇಲ್ಲಿದೆ
ಇಂಟರ್ನೆಟ್ ಸಂಪರ್ಕವಿಲ್ಲದ ಸಂದರ್ಭದಲ್ಲಿಯೂ *99# ಡಯಲ್ ಕೋಡ್ ಬಳಸಿ ಯುಪಿಐ ಮೂಲಕ ಪಾವತಿಗಳು, ಬ್ಯಾಲೆನ್ಸ್ ಪರಿಶೀಲನೆ, ಪಿನ್ ಬದಲಾವಣೆ ಹಾಗೂ ಬ್ಯಾಂಕ್ ಖಾತೆ ಸಂಪರ್ಕ ಸೇವೆಗಳನ್ನು ಬಳಸಬಹುದು.

UPI Payments : ಸಾಮಾನ್ಯವಾಗಿ ಯುಪಿಐ ಪಾವತಿಗಳನ್ನು ಮಾಡಲು ಇಂಟರ್ನೆಟ್ ಸಂಪರ್ಕ ಅವಶ್ಯಕ. ಆದರೆ ತುರ್ತು ಸಮಯದಲ್ಲಿ ಸಮಯದಲ್ಲಿ ಡೇಟಾ ಇಲ್ಲದಿದ್ದಾಗ ಅಥವಾ ಸಂಪರ್ಕ ಇಲ್ಲದಿದ್ದಾಗ ಪಾವತಿಗಳನ್ನು ನಿರ್ವಹಿಸಲು ಮಾರ್ಗವಿದೆ. *99# ಡಯಲ್ ಮಾಡುವ ಮೂಲಕ ಆಫ್‌ಲೈನ್ ಯುಪಿಐ ಸೇವೆಗಳನ್ನು ಬಳಸಬಹುದು.
ಡಯಲ್ ಕೋಡ್ ಬಳಸಿ ದೇಶದ 83 ಪ್ರಮುಖ ಬ್ಯಾಂಕ್‌ಗಳೊಂದಿಗೆ ಸಂಪರ್ಕ ಸಾಧಿಸಿ, ಹಣ ಕಳುಹಿಸಬಹುದು, ಪಿನ್ ಬದಲಾಯಿಸುವುದು, ಖಾತೆ ಬ್ಯಾಲೆನ್ಸ್ ಪರಿಶೀಲಿಸುವಂತಹ ಸೇವೆಗಳನ್ನು ಪಡೆಯಬಹುದು. ಈ ಸೌಲಭ್ಯ 13 ಭಾಷೆಗಳಲ್ಲಿ ಲಭ್ಯವಿದೆ.
ಆಫ್‌ಲೈನ್ ಯುಪಿಐ ಸೇವೆಗೆ ಮೊದಲು ರಿಜಿಸ್ಟರ್ ಮಾಡಬೇಕಾಗುತ್ತದೆ. ಬ್ಯಾಂಕ್ ಜೊತೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ನಿಂದ *99# ಡಯಲ್ ಮಾಡಿ, ಭಾಷೆಯನ್ನು ಆಯ್ಕೆ ಮಾಡಿ, ಬ್ಯಾಂಕ್ ಹೆಸರು ನಮೂದಿಸಿ, ಸಂಬಂಧಿತ ಖಾತೆ ಆಯ್ಕೆ ಮಾಡಿ, ಡೆಬಿಟ್ ಕಾರ್ಡ್ ಅಂತಿಮ ಆರು ಅಂಕೆ ಮತ್ತು ಎಕ್ಸ್ಪೈರಿ ಡೇಟ್ ನಮೂದಿಸಿ. ಈ ಕ್ರಮವು ನಿಮ್ಮ ಮೊಬೈಲ್ ನಂಬರ್ ಅನ್ನು ಆಫ್‌ಲೈನ್ ಯುಪಿಐ ಸೇವೆಗೆ ರಿಜಿಸ್ಟರ್ ಮಾಡುತ್ತದೆ.
ಪಾವತಿಯನ್ನು ಮಾಡಲು *99# ಡಯಲ್ ಮಾಡಿ, ಪಾವತಿ ಆಯ್ಕೆ 1 ನಂಬರ್ ಎಂಟರ್ ಮಾಡಿ, ಪಡೆಯುವವರ ಯುಪಿಐ ಐಡಿ/ಫೋನ್ ನಂಬರ್/ಬ್ಯಾಂಕ್ ಖಾತೆ ವಿವರ ನಮೂದಿಸಿ, ಮೊತ್ತ ಹಾಗೂ ಯುಪಿಐ ಪಿನ್ ನಮೂದಿಸಿ.
ಈ ಮೂಲಕ ಆನ್‌ಲೈನ್ ಸಂಪರ್ಕವಿಲ್ಲದೆ ಕೂಡ ಪಾವತಿ ಯಶಸ್ವಿಯಾಗಿ ನೆರವೇರುತ್ತದೆ. ಪ್ರತಿಯೊಂದು ಟ್ರಾನ್ಸಕ್ಷನ್ ₹0.50 ಶುಲ್ಕ ಇರುತ್ತದೆ.
Offline UPI Payments without Internet



