ಒಂದು ಲೀಟರ್ ಪೆಟ್ರೋಲ್ ನಿಂದ ತೈಲ ಕಂಪನಿಗಳು ಎಷ್ಟು ಗಳಿಸುತ್ತವೆ ಗೊತ್ತಾ? ಬೆಚ್ಚಿಬೀಳುವ ಸಂಗತಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಜನರಿಗೆ ಉಪಶಮನ ಇಲ್ಲ. ಪೆಟ್ರೋಲ್, ಡೀಸೆಲ್ ದರ ಇನ್ನೂ 90 ರೂ. ಮೀರಿ ಸಾಗುತ್ತಿದೆ. ಒಂದು ಲೀಟರ್‌ನಲ್ಲೇ ಕಂಪನಿಗಳಿಗೆ ಕೋಟಿ ಲಾಭ.

  • ಪೆಟ್ರೋಲ್, ಡೀಸೆಲ್ ದರ 90 ರೂ. ಮೀರಿದ ಸ್ಥಿತಿ
  • ತೈಲ ಕಂಪನಿಗಳು ಲೀಟರ್‌ ನಲ್ಲೆ ಕೋಟಿ ಲಾಭ ಪಡೆಯುತ್ತಿವೆ
  • ಕಚ್ಚಾ ತೈಲ ಬೆಲೆ ಇಳಿಕೆ, ಗ್ರಾಹಕರಿಗೆ ಲಾಭ ಇಲ್ಲ

Petrol and Diesel Price : ಭಾರತೀಯ ತೈಲ ಕಂಪನಿಗಳ ಲಾಭದ ಅಂಕಿ-ಅಂಶಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ. ಇತ್ತೀಚಿನ ವರದಿ ಪ್ರಕಾರ, ಒಂದು ಲೀಟರ್ ಪೆಟ್ರೋಲ್ ಮಾರಾಟದಿಂದ ತೈಲ ಮಾರ್ಕೆಟಿಂಗ್ ಕಂಪನಿಗಳು ಸರಾಸರಿ ₹11.2 ರೂಪಾಯಿ ಗಳಿಸುತ್ತಿವೆ. ಅದೇ ರೀತಿ, ಡೀಸೆಲ್ ಲೀಟರ್‌ ನಲ್ಲಿ ಕಂಪನಿಗಳು ₹8.1 ರೂಪಾಯಿಲಾಭ ಪಡೆಯುತ್ತಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗಿಂತ ಕಡಿಮೆಯಾಗಿದೆ. ಬ್ರೆಂಟ್ ಕ್ರೂಡ್ ತೈಲದ ಬೆಲೆ $67.10ಕ್ಕೆ ಇಳಿದಿದೆ. ಅಮೆರಿಕನ್ ಕ್ರೂಡ್ ತೈಲವೂ $63.13ಕ್ಕೆ ಕುಸಿದಿದೆ. ಕಳೆದ ತಿಂಗಳಿಗಿಂತ 7–9 ಶೇಕಡಾ ಇಳಿಕೆಯಾಗಿದ್ದರೂ, ಇದರ ಲಾಭ ಗ್ರಾಹಕರಿಗೆ ತಲುಪಿಲ್ಲ.

ಇತ್ತ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಇನ್ನೂ ಉನ್ನತ ಮಟ್ಟದಲ್ಲೇ ಇದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ ₹94.77, ಡೀಸೆಲ್ ₹87.67. ಕೋಲ್ಕತ್ತಾದಲ್ಲಿ ಪೆಟ್ರೋಲ್ ₹105.41, ಡೀಸೆಲ್ ₹92.02. ಬೆಂಗಳೂರು, ಮುಂಬೈ ಹಾಗೂ ಚೆನ್ನೈಯಲ್ಲಿಯೂ ಬೆಲೆ ₹100 ಮೀರಿದ ಮಟ್ಟದಲ್ಲೇ ಇದೆ.

ಇದನ್ನೂಓದಿ : ಸೆಪ್ಟೆಂಬರ್ 1ರಿಂದ ಎಲ್‌ಪಿಜಿ, ಎಟಿಎಂ ಮತ್ತು ಎಸ್‌ಬಿಐ ಕಾರ್ಡ್ ಶುಲ್ಕಗಳಲ್ಲಿ ಭಾರೀ ಬದಲಾವಣೆ

2024ರಲ್ಲಿ ಕೊನೆಯದಾಗಿ ಪೆಟ್ರೋಲ್, ಡೀಸೆಲ್ ದರ ₹2–₹3ರಷ್ಟು ಕಡಿಮೆಯಾಗಿತ್ತು. ಆ ಬಳಿಕ ಯಾವುದೇ ಕಡಿತವಾಗದೆ ಜನ ಸಾಮಾನ್ಯರು ಹೆಚ್ಚಿನ ಬೆಲೆ ಕಟ್ಟುತ್ತಿದ್ದಾರೆ. ತೈಲ ಕಂಪನಿಗಳೇ ಇದರ ನೇರ ಲಾಭ ಪಡೆಯುತ್ತಿವೆ.

ಅಮೆರಿಕಾ, ಯುರೋಪ್ ದೇಶಗಳು ರಷ್ಯಾದಿಂದ ಭಾರತ ತೈಲವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ನಂತರ ಮಾರುಕಟ್ಟೆಯಲ್ಲಿ ಲಾಭ ಮಾಡುತ್ತಿದೆ ಎಂದು ಟೀಕಿಸುತ್ತಿವೆ. ಆದರೆ ಇದರ ನಡುವೆ ಸಾಮಾನ್ಯ ಗ್ರಾಹಕರ ಜೇಬಿಗೆ ಯಾವ ಉಪಶಮನವೂ ಸಿಕ್ಕಿಲ್ಲ.

ಪೆಟ್ರೋಲಿಯಂ ಕಂಪನಿಗಳು ಇದರಿಂದ ಲಾಭ ಪಡೆಯುತ್ತಿವೆ. ಕಚ್ಚಾ ತೈಲ ಬೆಲೆ ಇಳಿಕೆಯ ನಂತರವೂ ಸಾಮಾನ್ಯ ಜನರಿಗೆ ಅದರ ಲಾಭ ಸಿಕ್ಕಿಲ್ಲ. ಅಂದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಕೊನೆಯ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 2024 ರಲ್ಲಿ ಇಳಿಸಲಾಯಿತು.

Oil Companies Profit on Petrol and Diesel

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories