ಇನ್ಮುಂದೆ ಫೋನ್‌ಪೇ, ಗೂಗಲ್ ಪೇ ಬಳಸಲು ಸಾಧ್ಯವಿಲ್ಲ; ರದ್ದಾಗಲಿದೆ ಯುಪಿಐ ಐಡಿ
ಯಾವುದೇ ರೀತಿಯ ಪೇಮೆಂಟ್ (payment) ಮಾಡುವುದಿದ್ದರೆ ಬ್ಯಾಂಕ್ (Bank) ಗೆ ಹೋಗದೆ ಮನೆಯಲ್ಲಿ ಕುಳಿತು ಸ್ಮಾರ್ಟ್ ಫೋನ್ (smartphone) ಹಿಡಿದು ಪೇಮೆಂಟ್ ಮಾಡಿಕೊಳ್ಳುವಷ್ಟು ನಾವು ಮುಂದುವರೆದಿದ್ದೇವೆ.
ಯುಪಿಐ ಐಡಿ (UPI ID) ಒಂದಿದ್ರೆ ಸಾಕು ನೀವು ಗೂಗಲ್ ಪೇ (Google Pay), ಫೋನ್ ಪೇ (Phonepe), ಪೇಟಿಎಂ (Paytm) ಸೇರಿದಂತೆ ಬೇರೆ ಬೇರೆ ಅಪ್ಲಿಕೇಶನ್ (payment applications) ಮೂಲಕ ಯಾವುದೇ ರೀತಿಯ ಪೇಮೆಂಟ್ ಮಾಡಿಕೊಳ್ಳಬಹುದು.

ಕಾರ್ ಲೋನ್ ತೆಗೆದುಕೊಳ್ಳಲು ನಿಖರವಾದ ಯೋಜನೆ ಮುಖ್ಯ! ಇಲ್ಲವೇ ಬಾರೀ ನಷ್ಟ ಎದುರಿಸಬೇಕು
NPCI (payment corporation of India) ಹೊಸ ಅಪ್ಡೇಟ್!
NPCI ಆರಂಭಿಸಿರುವ ಯುಪಿಐ ಪ್ರತಿಯೊಬ್ಬ ಗ್ರಾಹಕರಿಗೂ ವರದಾನವಾಗಿದೆ. ಇಂಟರ್ನೆಟ್ (without Internet payment) ಇಲ್ಲದೆ ಅಥವಾ ನಿಮ್ಮ ಬ್ಯಾಂಕ್ ನಲ್ಲಿ ಹಣವು ಇಲ್ಲದೆ ಪೇಮೆಂಟ್ ಮಾಡಿಕೊಳ್ಳಬಹುದಾದ ಏಕೈಕ ವ್ಯವಸ್ಥೆ ಅಂದರೆ ಅದು ಯುಪಿಐ.
ಬ್ಯಾಂಕ್ ನ ಎಲ್ಲಾ ವ್ಯವಹಾರಗಳನ್ನು ಆನ್ಲೈನ್ (Online Payment) ಮೂಲಕವೇ ಮಾಡಿಕೊಳ್ಳಬಹುದು, ಅಷ್ಟೇ ಅಲ್ಲದೆ ಯಾವುದೇ ರೀತಿಯ ಪೇಮೆಂಟ್ ಅನ್ನು ಕೂಡ ಯುಪಿಐ ಮೂಲಕ ಮಾಡಬಹುದು.
ನಗರಪ್ರದೇಶಗಳಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲಿಯೂ ಕೂಡ ಯುಪಿಐ ಪೇಮೆಂಟ್ ಇದೀಗ ಹೆಚ್ಚು ಪ್ರಚಲಿತದಲ್ಲಿದೆ ಎನ್ನಬಹುದು. ಸಣ್ಣ ಪುಟ್ಟ ಅಂಗಡಿಗಳ ಮುಂದೆ ನಿಂತು ಚಿಲ್ಲರೆಗಾಗಿ ಈಗ ಪರದಾಡಬೇಕಿಲ್ಲ, ನಿಮ್ಮ ಬಳಿ ಯುಪಿಐ ಪೇಮೆಂಟ್ ಮಾಡುವ ಅವಕಾಶವಿದ್ರೆ ಕ್ಷಣಮಾತ್ರದಲ್ಲಿ ಪೇಮೆಂಟ್ ಮಾಡಿ ಮುಗಿಸಬಹುದು.
ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಸಕಾಲ! ಕಡಿಮೆ ಬಡ್ಡಿಗೆ ಸಿಗುತ್ತಿದೆ ಹೋಮ್ ಲೋನ್
UPI ಪಾವತಿ ಮಾಡುವವರಿಗೆ ಹೊಸ ನಿಯಮ! (New rules for UPI users)
ಎನ್ ಪಿ ಸಿ ಐ ತನ್ನ ಯುಪಿಐ ಪೇಮೆಂಟ್ ನಲ್ಲಿ ಹೊಸ ಬದಲಾವಣೆಗಳನ್ನು ತಂದಿದೆ, ಹಾಗಾದರೆ ಎನ್‌ಪಿಸಿಐ ಗ್ರಾಹಕರಿಗಾಗಿ ಆರಂಭಿಸಿರುವ ಯುಪಿಐ ಪೇಮೆಂಟ್ ನಲ್ಲಿ ಮಾಡಿರುವ ಮಹತ್ವದ ಬದಲಾವಣೆ ಯಾವುದು ನೋಡೋಣ.
ಯುಪಿಐ ಐಡಿ ರದ್ದುಪಡಿಸಲು ನಿರ್ಧರಿಸಿರುವ ಎನ್‌ಪಿಸಿಐ! (UPI ID cancellation)
ಯುಪಿಐ ಮೂಲಕ ನಾವು ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಪೇಮೆಂಟ್ ಅನ್ನು ಮಾಡುತ್ತೇವೆ. ಆದರೆ ಸಾಕಷ್ಟು ಜನ ಯುಪಿಐ ಐಡಿ ಹೊಂದಿದ್ದು ಕಳೆದ ಒಂದು ವರ್ಷಗಳಿಂದ ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡಿಲ್ಲ ಹಾಗಾಗಿ ಇಂತಹ ಯುಪಿಐ ಐಡಿಯನ್ನು ಗುರುತಿಸಿ ತಕ್ಷಣವೇ ಅದನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ
ಈ ರೀತಿ ಯುಪಿಐ ಐಡಿ ರದ್ದಾದರೆ, ನೀವು ಆನ್ಲೈನ್ ಮೂಲಕ ಗೂಗಲ್ ಪೇ, ಫೋನ್ ಪೇ ಅಪ್ಲಿಕೇಶನ್ ಬಳಸಿ ಪೇಮೆಂಟ್ ಮಾಡಲು ಸಾಧ್ಯವಿಲ್ಲ.
ಇನ್ಮುಂದೆ ಅಮೆಜಾನ್ ಆನ್‌ಲೈನ್‌ನಲ್ಲೇ ಕಾರುಗಳ ಮಾರಾಟ ಮಾಡಲಿದೆ! ಮಾರಾಟ, ಬುಕಿಂಗ್ ಎಲ್ಲವೂ ಆನ್‌ಲೈನ್‌ನಲ್ಲೆ
ಡಿಸೆಂಬರ್ 31 ರಿಂದಲೇ ಹೊಸ ನಿಯಮ ಜಾರಿ!
ಯುಪಿಐ ಪಾವತಿಗಾಗಿ ನಾವು ಥರ್ಡ್ ಪಾರ್ಟಿ ಅಪ್ಲಿಕೇಶನ್ (third party applications) ಗಳಾಗಿರುವ Google pay, phonepe, Amazon pay, Airtel pay Paytm ಮೊದಲಾದ ಅಪ್ಲಿಕೇಶನ್ಗಳನ್ನು ಬಳಸುತ್ತೇವೆ.
ಇದೀಗ ಈ ಎಲ್ಲಾ ಅಪ್ಲಿಕೇಶನ್ಗಳನ್ನು ಬಳಸಿ ಯುಪಿಐ ಬಳಕೆ ಮಾಡದೆ ಇರುವ ಐಡಿ ಗಳನ್ನು ರದ್ದುಪಡಿಸಲು ತಿಳಿಸಿದೆ. ಆದ್ದರಿಂದ ಈ ಎಲ್ಲಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಹಾಗೂ ಪಿ ಎಸ್ ಪಿ ಬ್ಯಾಂಕ್ (PSP bank) ಗಳು, ಯುಪಿಐ ಐಡಿ ಹೊಂದಿದ್ದು ಕಳೆದ ಒಂದು ವರ್ಷಗಳಿಂದ ಯಾವುದೇ ರೀತಿಯ ಹಣಕಾಸಿನ ವಹಿವಾಟು ಮಾಡದೆ ಇರುವವರನ್ನು ಗುರುತಿಸಿ ಅಂತವರ ಯುಪಿಐ ಐಡಿ ರದ್ದುಪಡಿಸಲು ನಿರ್ಧರಿಸಲಾಗಿದೆ.
ಎಲ್ಲಾ ಪೇಮೆಂಟ್ ಅಪ್ಲಿಕೇಶನ್ ಹಾಗೂ ಪಿ ಎಸ್ ಪಿ ಬ್ಯಾಂಕ್ಗಳಿಗೆ (Banks) ವಹಿವಾಟು ನಡೆಸದೇ ಇರುವ ಯುಪಿಐ ಐಡಿ ಬಗ್ಗೆ ತಿಳಿದುಕೊಳ್ಳುವುದು ಸುಲಭ, ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ನೀವು ಎಷ್ಟು ಹಣಕಾಸಿನ ವ್ಯವಹಾರ ಮಾಡಿದ್ದೀರಿ ಅಥವಾ ಒಂದು ವರ್ಷದಿಂದ ಯಾವುದೇ ಯುಪಿಐ ಪೇಮೆಂಟ್ ಮಾಡಿದ್ದೀರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ಪರ್ಸನಲ್ ಲೋನ್ ಬದಲಿಗೆ ಈ ಸಾಲಗಳನ್ನು ತೆಗೆದುಕೊಳ್ಳಿ! ಬಡ್ಡಿ ಹೊರೆ ತುಂಬಾ ಕಡಿಮೆ
ಒಂದು ವೇಳೆ ಕಳೆದ ಒಂದು ವರ್ಷದಿಂದ ನೀವು ಯಾವುದೇ ರೀತಿಯ ಪೇಮೆಂಟ್ ಮಾಡದೇ ಇದ್ದಲ್ಲಿ ಡಿಸೆಂಬರ್ 31ರ ಒಳಗೆ ಯುಪಿಐ ಮೂಲಕ ಡೆಬಿಟ್ ಅಥವಾ ಕ್ರೆಡಿಟ್ ವಹಿವಾಟು ನಡೆಸಲು ಆರಂಭಿಸಿ.
ಒಂದು ವರ್ಷದಿಂದ ಬಳಕೆ ಆಗದೆ ಇರುವ ಯುಪಿಐ ಐಡಿ ಒಮ್ಮೆ ರದ್ದಾದರೆ ಮತ್ತೆ ಅದನ್ನು ನೀವು ಬಳಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಒಂದು ವರ್ಷಕ್ಕಿಂತ ಮೊದಲು ಯುಪಿಐ ಐಡಿ ಬಳಸಿ ಪೇಮೆಂಟ್ ಮಾಡಿದರೆ ಯುಪಿಐ ಐಡಿ ಬಳಸಿಕೊಳ್ಳಬಹುದು
Old UPI ID will be cancelled, Unable to Use Phonepe, Google Pay