ತಿಂಗಳಿಗೆ 1 ಲಕ್ಷ ರೂಪಾಯಿ ಸಿಗುತ್ತೆ! ಈ ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು - Lifetime Pension
ನಿವೃತ್ತಿ ನಂತರ ಆದಾಯದ ಕೊರತೆಯ ಆತಂಕ ಬೇಡ. ಎಲ್‌ಐಸಿ ಜೀವನ್ ಶಾಂತಿ ಯೋಜನೆ ಒಂದೇ ಬಾರಿಗೆ ಹೂಡಿಕೆಯಿಂದ ಜೀವನಪೂರ್ತಿ ಪಿಂಚಣಿ ಭದ್ರತೆ ನೀಡುತ್ತದೆ. ಕುಟುಂಬಕ್ಕೂ ಆರ್ಥಿಕ ಸುರಕ್ಷತೆ ಸಿಗಲಿದೆ.

ನಿವೃತ್ತಿಯ ನಂತರದ ದಿನಗಳ ಬಗ್ಗೆ ಆರ್ಥಿಕ ಚಿಂತೆ ಇದ್ದರೆ, ಎಲ್‌ಐಸಿ (LIC Pension Scheme) ಜೀವನ್ ಶಾಂತಿ ಯೋಜನೆ ಉತ್ತಮ ಆಯ್ಕೆ ಆಗಬಹುದು. ಈ ಯೋಜನೆಯಲ್ಲಿ ನೀವು ಒಂದೇ ಬಾರಿಗೆ ಹಣ ಹೂಡಿಕೆ ಮಾಡಿದರೆ ಸಾಕು, ಜೀವನಪೂರ್ತಿ ಪಿಂಚಣಿ ಪಡೆಯುವ ಭರವಸೆ ಸಿಗುತ್ತದೆ.
ಈ ಪ್ಲಾನ್ ಸಿಂಗಲ್ ಪ್ರೀಮಿಯಂ ಪಾಲಿಸಿ ಆಗಿದ್ದು, ಕನಿಷ್ಠ ರೂ.1.5 ಲಕ್ಷದಿಂದ ಆರಂಭಿಸಬಹುದು. ಹೆಚ್ಚಿನ ಹೂಡಿಕೆ ಮಾಡಿದಷ್ಟು ಹೆಚ್ಚು ಪಿಂಚಣಿ ಸಿಗುತ್ತದೆ. 30ರಿಂದ 79 ವರ್ಷ ವಯಸ್ಸಿನವರು ಈ ಯೋಜನೆ ಖರೀದಿಸಲು ಅರ್ಹರು.
ಹೂಡಿಕೆಯ 5 ವರ್ಷಗಳ ನಂತರದಿಂದ ಪಿಂಚಣಿ ಪಡೆಯಲು ಪ್ರಾರಂಭಿಸಬಹುದು. ಉದಾಹರಣೆಗೆ, 55 ವರ್ಷ ವಯಸ್ಸಿನಲ್ಲಿ ರೂ.11 ಲಕ್ಷ ಹೂಡಿಕೆ ಮಾಡಿದರೆ, 60ನೇ ವಯಸ್ಸಿನಿಂದ ಪ್ರತಿ ವರ್ಷ ಸುಮಾರು ರೂ.1 ಲಕ್ಷ ಪಿಂಚಣಿ ಸಿಗುತ್ತದೆ.
ಪಿಂಚಣಿ ಪಡೆಯುವ ವಿಧಾನದಲ್ಲಿ ಆಯ್ಕೆ ಸೌಲಭ್ಯವಿದ್ದು, ತಿಂಗಳ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಹಣ ಪಡೆಯಬಹುದು.
ಈ ಪ್ಲಾನ್‌ನಲ್ಲಿ ಸಿಂಗಲ್ ಲೈಫ್ ಮತ್ತು ಜಾಯಿಂಟ್ ಲೈಫ್ ಎಂಬ ಎರಡು ಆಯ್ಕೆಗಳಿವೆ. ಸಿಂಗಲ್ ಲೈಫ್‌ನಲ್ಲಿ ಒಬ್ಬರಿಗಷ್ಟೇ ಪಿಂಚಣಿ ಸಿಗುತ್ತದೆ. ಆದರೆ ಜಾಯಿಂಟ್ ಲೈಫ್ ಪ್ಲಾನ್‌ನಲ್ಲಿ ಪತಿ–ಪತ್ನಿ ಇಬ್ಬರಿಗೂ ಪಿಂಚಣಿ ಸಿಗುತ್ತದೆ. ಅವರಲ್ಲಿ ಒಬ್ಬರು ನಿಧನರಾದರೆ, ನಾಮಿನಿಗೆ ಉಳಿದ ಹಣ ವರ್ಗಾಯಿಸಲಾಗುತ್ತದೆ.
ಮತ್ತೊಂದು ಸೌಲಭ್ಯವೆಂದರೆ, ಪಾಲಿಸಿಯು ಪ್ರಾರಂಭವಾದ 3 ತಿಂಗಳ ಬಳಿಕ ಸಾಲ (Loan) ಪಡೆಯಬಹುದು. ಆದರೆ ಆ ಸಾಲವು ವಾರ್ಷಿಕ ಪಿಂಚಣಿಯ 50% ಮೀರಬಾರದು. ಪಾಲಿಸಿಯು ಸೂಕ್ತವಾಗಿಲ್ಲವೆಂದು ತೋಚಿದರೆ, ಸರಂಡರ್ ಮಾಡುವ ಅವಕಾಶವೂ ಇದೆ.
ಈ ಮೂಲಕ ಹೂಡಿಕೆಯ ಜೊತೆಗೆ ನಿವೃತ್ತಿ ನಂತರದ ಆದಾಯ ಭದ್ರತೆ ಹಾಗೂ ಕುಟುಂಬಕ್ಕೂ ಆರ್ಥಿಕ ಸುರಕ್ಷತೆ ಸಿಗುವುದು ಖಚಿತ.



