ಆನ್ಲೈನ್ ಶಾಪಿಂಗ್ಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಮೊದಲು ಈ ವಿಷಯ ತಿಳಿಯಿರಿ
ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡಿದಾಗ ಕ್ರೆಡಿಟ್ ಕಾರ್ಡ್ ಬಳಕೆದಾರರು ಎಚ್ಚರಿಕೆ ಪಾಲಿಸುವುದು ಅತ್ಯಂತ ಅಗತ್ಯ. ಖಾತೆ ಸುರಕ್ಷತೆ, ವಿಶ್ವಾಸಾರ್ಹ ವೆಬ್ಸೈಟ್, ಮತ್ತು ಡಬಲ್ ಫ್ಯಾಕ್ಟರ್ ಪ್ರಾಮಾಣೀಕರಣ ಕುರಿತು ತಿಳಿದುಕೊಳ್ಳೋಣ.

- ಕ್ರೆಡಿಟ್ ಕಾರ್ಡ್ ಬಳಕೆದಾರರು ಖಾತೆ ನಿಯಮಿತ ಪರಿಶೀಲನೆ ಮುಖ್ಯ
- ಭದ್ರತಾ ದೃಢೀಕರಣ (2FA) ಬಳಸುವುದು ಅಗತ್ಯ
- ವರ್ಚುವಲ್ ಕ್ರೆಡಿಟ್ ಕಾರ್ಡ್ಗಳ ಮಹತ್ವ ಹೆಚ್ಚಾಗಿದೆ
Online Shopping: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ವ್ಯಾಪಕವಾಗಿವೆ. ಡಿಜಿಟಲ್ ವಲಯದಲ್ಲಿ ಹಣದ ವಂಚನೆ, ಖಾತೆಗಳ ಹ್ಯಾಕಿಂಗ್, ಮತ್ತು ವೈಯಕ್ತಿಕ ಮಾಹಿತಿಯನ್ನು ಕಳವು ಮಾಡುವ ಪ್ರಕರಣಗಳು ದಿನನಿತ್ಯವೂ ವರದಿ ಆಗುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ, ಕ್ರೆಡಿಟ್ ಕಾರ್ಡ್ (Credit Card) ಮೂಲಕ ಆನ್ಲೈನ್ ಶಾಪಿಂಗ್ ಮಾಡುವಾಗ ಎಚ್ಚರಿಕೆ ತಾಳುವುದು ಅತ್ಯಂತ ಮುಖ್ಯ. ಒಂದು ಸಣ್ಣ ಲೋಪವೂ ನಿಮ್ಮ ಹಣ ಕಳೆದುಕೊಳ್ಳಲು ಕಾರಣವಾಗುತ್ತದೆ.
ನಂಬಿಕಸ್ತ ವೆಬ್ಸೈಟ್ಗಳಿಂದ ಮಾತ್ರ ಶಾಪಿಂಗ್ ಮಾಡಿ
ನಂಬಿಕಸ್ತ ವೆಬ್ಸೈಟ್ಗಳಿಂದ ಮಾತ್ರ ಖರೀದಿ ಮಾಡಬೇಕು. ಸೈಬರ್ ಮೋಸಗಾರರು ನಕಲಿ ವೆಬ್ಸೈಟ್ಗಳನ್ನು ತಯಾರಿಸಿ ಜನರನ್ನು ಸೆಳೆಯುತ್ತಿದ್ದಾರೆ. ಹೀಗಾಗಿ ಶಾಪಿಂಗ್ ಮೊದಲು ಆ ವೆಬ್ಸೈಟ್ ವಿಮರ್ಶೆ ಓದಿ ಖಾತರಿಪಡಿಸಿಕೊಳ್ಳಿ. ಪ್ರತಿಕೂಲ ವಿಮರ್ಶೆಗಳಿದ್ದರೆ ಆ ವೆಬ್ಸೈಟ್ ಬಳಕೆ ಮಾಡಬೇಡಿ.
ಡಬಲ್ ಫ್ಯಾಕ್ಟರ್ ಪ್ರಾಮಾಣೀಕರಣ ಬಳಸುವುದು
ಬಹುತೇಕ ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳು ಡಬಲ್ ಫ್ಯಾಕ್ಟರ್ ಪ್ರಾಮಾಣೀಕರಣ (2FA) ನೀಡುತ್ತವೆ. ಇದರಿಂದ ನಿಮ್ಮ ಪಾಸ್ವರ್ಡ್ ಬಹಿರಂಗವಾದರೂ, ನಿಮ್ಮ ಖಾತೆ ಸೈಬರ್ ಕಳ್ಳರಿಂದ ಸುರಕ್ಷಿತವಾಗಿರುತ್ತದೆ. ಸಂದೇಶ ಅಥವಾ ಇಮೇಲ್ ಮೂಲಕ ಸಿಗುವ ದೃಢೀಕರಣ ಕೋಡ್ ಇರದವರೆಗೆ ಯಾರೂ ಖಾತೆ ಪ್ರವೇಶಿಸಲು ಸಾಧ್ಯವಿಲ್ಲ.
ವರ್ಚುವಲ್ / ಡಿಸ್ಪೋಜಬಲ್ ಕ್ರೆಡಿಟ್ ಕಾರ್ಡ್ ಬಳಕೆ
ಆರ್ಥಿಕ ಸಂಸ್ಥೆಗಳು ವರ್ಚುವಲ್ ಅಥವಾ ಡಿಸ್ಪೋಜಬಲ್ Credit Card ಸೇವೆಗಳನ್ನು ನೀಡುತ್ತಿರುವುದು ಜನಪ್ರಿಯವಾಗಿದೆ. ಈ ಕಾರ್ಡ್ಗಳು ನಿಮ್ಮ ಮುಖ್ಯ ಖಾತೆಗೆ ತಾತ್ಕಾಲಿಕವಾಗಿ ಲಿಂಕ್ ಆಗಿ, ನಿಗದಿತ ಸಮಯದ ಬಳಿಕ ಸ್ವಯಂಚಾಲಿತವಾಗಿ ನಿಷ್ಕ್ರಿಯವಾಗುತ್ತವೆ. ಈ ಮೂಲಕ ನಿಜವಾದ ಕ್ರೆಡಿಟ್ ಕಾರ್ಡ್ ಮಾಹಿತಿ ಸುರಕ್ಷಿತವಾಗಿರುತ್ತದೆ.
ಖಾತೆ ಮೇಲೆ ನಿರಂತರ ನಿಗಾ
ನಿರಂತರವಾಗಿ ನಿಮ್ಮ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ಲೆಕ್ಕಗಳನ್ನು ಪರಿಶೀಲಿಸಿ. ಯಾವುದಾದರೂ ಅನುಮಾನಿತ ವಹಿವಾಟುಗಳು ಇದ್ದರೆ ತಕ್ಷಣವೇ ಬ್ಯಾಂಕಿಗೆ ತಿಳಿಸಿ. ಇದರಿಂದ ವಂಚನೆಕಾರರು ನಿಮ್ಮ ಖಾತೆ ದುರುಪಯೋಗ ಮಾಡುವುದು ತಡೆಯಬಹುದು.



