ಪ್ಯಾನ್ ಕಾರ್ಡ್ ಇರೋರಿಗೆ ಬಿಗ್ ಅಲರ್ಟ್, ಹೀಗೆ ಮಾಡಿದ್ರೆ 10,000 ದಂಡ! ಹುಷಾರ್
ಪ್ಯಾನ್ ಕಾರ್ಡ್ (PAN card) ಅನ್ನು ಆಧಾರ್ ಕಾರ್ಡ್ (Aadhaar) ಗೆ ಲಿಂಕ್ ಮಾಡದೇ ಹಣಕಾಸು ವ್ಯವಹಾರ ಮಾಡಿದರೆ ₹10,000 ದಂಡ ಬೀಳಬಹುದು. ನಕಲಿ ಪ್ಯಾನ್, ಮಲ್ಟಿಪಲ್ ಕಾರ್ಡ್‌ಗಳಿಗೆ ಗಂಭೀರ ಕ್ರಮವಿದೆ.

- ಪ್ಯಾನ್ ಲಿಂಕ್ ಮಾಡದೇ ಟ್ರಾನ್ಸಕ್ಷನ್ ಮಾಡಿದರೆ ₹10,000 ದಂಡ
- ಮಲ್ಟಿಪಲ್ ಪ್ಯಾನ್ ಕಾರ್ಡ್ ಹೊಂದಿದ್ದರೆ ಕಾನೂನು ಉಲ್ಲಂಘನೆ
- ಇನ್‌ಆಪರೇಟಿವ್ ಪ್ಯಾನ್ ಬಳಕೆ ಮಾಡಿದರೆ ಐಟಿಆರ್ ನಿರಾಕರಣೆ ಸಾಧ್ಯ
ಆಧಾರ್ ಕಾರ್ಡ್ (Aadhaar) ಗೆ ಪ್ಯಾನ್ ಕಾರ್ಡ್ (PAN card) ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಈ ನಿಯಮ ಪಾಲನೆ ಮಾಡದೇ ಹಣಕಾಸು ವ್ಯವಹಾರ ನಡೆಸಿದರೆ ಗಂಭೀರ ಫಲಿತಾಂಶ ಎದುರಾಗಬಹುದು. ಕೇಂದ್ರ ಸರ್ಕಾರದ ಪ್ರಕಾರ, ಇನ್ನು ಮುಂದೆ ಲಿಂಕ್ ಆಗದ ಪ್ಯಾನ್ ಕಾರ್ಡ್ ಬಳಸಿದರೆ, ಅದು ಇನ್‌ಆಪರೇಟಿವ್ (inoperative PAN) ಆಗಿ ಪರಿಗಣಿಸಲಾಗುತ್ತದೆ.
ಇನ್‌ಆಪರೇಟಿವ್ ಪ್ಯಾನ್ ಬಳಸಿ ಬ್ಯಾಂಕ್ ಖಾತೆ ತೆರೆಯುವುದು, ಷೇರು ಖರೀದಿ, ಪ್ರಾಪರ್ಟಿ ಖರೀದಿ ಅಥವಾ ಲೋನ್ ಅಪ್ಲಿಕೇಶನ್ ಮಾಡಿದರೆ ₹10,000 ದಂಡ ಬೀಳಬಹುದು. ಈ ದಂಡ ಪ್ರತಿ ಟ್ರಾನ್ಸಕ್ಷನ್‌ಗೆ ವಿಧಿಸಲಾಗಬಹುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ: ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟ ಗ್ರಾಹಕರಿಗೆ ಗುಡ್ ನ್ಯೂಸ್! ಇದು ಓದಲೇಬೇಕಾದ ಸುದ್ದಿ
ಕೆಲವರು ನಕಲಿ ದಾಖಲೆಗಳಿಂದ ನಕಲಿ ಪ್ಯಾನ್ (fake PAN) ನಿರ್ಮಿಸಿ ಕಂಪನಿಗಳ ಹೆಸರಿನಲ್ಲಿ ನಕಲಿ ವ್ಯವಹಾರ ಮಾಡುತ್ತಿದ್ದಾರೆ. ಈ ರೀತಿಯ ಪ್ಯಾನ್ ದುರವಿನಿಯೋಗವನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ಆ್ಯರ್ಡಿಫಿಷಿಯಲ್ ಇಂಟೆಲಿಜೆನ್ಸ್ (AI), ಡೇಟಾ ಅನಾಲಿಟಿಕ್ಸ್ ಸೇರಿದಂತೆ (advanced tools) ಉಪಯೋಗಿಸುತ್ತಿದೆ.
AI ತಂತ್ರಜ್ಞಾನದಿಂದ ಇನ್‌ಆಪರೇಟಿವ್ ಪ್ಯಾನ್ ಬಳಸಿ ಮಾಡುವ ಹೈ ವ್ಯಾಲ್ಯೂ (high-value) ವ್ಯವಹಾರಗಳನ್ನು ಪತ್ತೆಹಚ್ಚಿ, ಪ್ಯಾನ್ ಕಾರ್ಡ್ ಸಸ್ಪೆಂಡ್ ಮಾಡುವುದು ಅಥವಾ ಬ್ಯಾಂಕ್ ಖಾತೆ ಫ್ರೀಜ್ ಮಾಡುವ ತನಕ ಕ್ರಮ ತೆಗೆದುಕೊಳ್ಳಬಹುದು.
ಇದನ್ನೂ ಓದಿ: ₹100, ₹200 ರೂಪಾಯಿ ನೋಟುಗಳ ಬಗ್ಗೆ ಬಿಗ್ ಅಪ್ಡೇಟ್! ಮಹತ್ವದ ನಿರ್ಧಾರ
ಇನ್ನುಳಿದಂತೆ, ಸೆಕ್ಷನ್ 272B ಪ್ರಕಾರ, ₹10,000 ದಂಡ ವಿಧಿಸುವ ಮೊದಲು ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ. ಆದರೆ ತಪ್ಪು ಉದ್ದೇಶಪೂರ್ವಕವಲ್ಲ ಎಂಬುದನ್ನು ಸಾಬೀತುಪಡಿಸಿದರೆ ಪಾರಾಗಲು ಅವಕಾಶವಿದೆ. ಆದರೆ ಉದ್ದೇಶಪೂರ್ವಕವಾಗಿ ಪ್ಯಾನ್ ದುರುಪಯೋಗಿಸಿದರೆ ಕಠಿಣ ಶಿಕ್ಷೆ ಸಾಧ್ಯ.
ಇದರಿಂದ, ಈಗಲೇ ನಿಮ್ಮ ಪ್ಯಾನ್ ಕಾರ್ಡ್ ಆಧಾರ್‌ಗೆ ಲಿಂಕ್ ಆಗಿದೆಯೇ ಎಂದು (PAN-Aadhaar status check) ಪರಿಶೀಲಿಸಿ. ತಡವಾದರೆ ಕೇವಲ ದಂಡವಲ್ಲ, ಫೈನಾನ್ಷಿಯಲ್ ಲಾಭಕ್ಕೂ ಬ್ರೇಕ್ ಬೀಳಬಹುದು!




