ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟ ಗ್ರಾಹಕರಿಗೆ ಗುಡ್ ನ್ಯೂಸ್! ಇದು ಓದಲೇಬೇಕಾದ ಸುದ್ದಿ
ಬ್ಯಾಂಕ್‌ನಲ್ಲಿ ಅಡ ಇಟ್ಟ ಬಂಗಾರದ ಬಗ್ಗೆ ಸುಪ್ರೀಂಕೋರ್ಟ್ ಹೊಸ ತೀರ್ಪು ನೀಡಿದೆ. ಗೋಲ್ಡ್ ಲೋನ್ ವಿಚಾರದಲ್ಲಿ ಗ್ರಾಹಕರಿಗೆ ಇದು ಮಹತ್ವದ ನ್ಯೂಸ್ ಆಗಿದೆ.
Publisher: Kannada News Today (Digital Media)
- ಗೋಲ್ಡ್ ಲೋನ್ ತೆಗೆದುಕೊಂಡ ಬಳಿಕ ಗ್ರಾಹಕ–ಬ್ಯಾಂಕ್ ನಡುವೆ ವಿವಾದ
- ಸುಪ್ರೀಂಕೋರ್ಟ್ ಮಹತ್ವದ ತೀರ್ಪು – ರೀ ಎವಾಲ್ಯುಯೇಷನ್ ನಿಷಿದ್ಧ
- ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ಮುಂದುವರಿಯಲಿದೆ
ಚಿನ್ನ ಅಡ ಇಟ್ಟು ಗೋಲ್ಡ್ ಲೋನ್ (gold loan) ಪಡೆದಿದ್ದ ಗ್ರಾಹಕರಿಗೆ ಮಹತ್ವದ ಸುದ್ದಿ. ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಈ ವಿಚಾರದಲ್ಲಿ ಮಹತ್ವದ್ದಾಗಿದ್ದು, ಬ್ಯಾಂಕ್ ಅಧಿಕಾರಿಗಳ ನಡವಳಿಕೆಗೆ ಚಾಟಿ ಬೀಸಿದೆ
ಬಿಹಾರದ ಮೋತಿಜೀಲ್ ಬ್ರಾಂಚ್‌ನ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯೊಂದರಿಂದ 2020ರಲ್ಲಿ ಸುಮಾರು ₹7.7 ಲಕ್ಷ ಗೋಲ್ಡ್ ಲೋನ್ ಪಡೆದ ಅಭಿಷೇಕ್ ಸಿಂಗ್ ಎಂಬ ವ್ಯಕ್ತಿಯ ಪ್ರಕರಣದ ವಿಚಾರ ಇದು.

ಇದನ್ನೂ ಓದಿ: ₹100, ₹200 ರೂಪಾಯಿ ನೋಟುಗಳ ಬಗ್ಗೆ ಬಿಗ್ ಅಪ್ಡೇಟ್! ಮಹತ್ವದ ನಿರ್ಧಾರ
254 ಗ್ರಾಂ 22 ಕ್ಯಾರಟ್ ಬಂಗಾರವನ್ನು ಅವರು ಅಡವಿಟ್ಟಿದ್ದರು (Gold Loan). ಆದರೆ 2023ರ ಮಾರ್ಚ್‌ನಲ್ಲಿ ಲೋನ್ ಕ್ಲಿಯರ್ ಮಾಡಿದ್ರು, ಆದರೆ ಬ್ಯಾಂಕ್ ಅವರ ಬಂಗಾರ ಹಿಂದಿರುಗಿಸಲಿಲ್ಲ.
ಬದಲಿಗೆ, ಬ್ಯಾಂಕ್ ಅಧಿಕೃತವಾಗಿ ಬಂಗಾರವನ್ನು ಮತ್ತೆ ಮೌಲ್ಯಮಾಪನ (re-evaluation) ಮಾಡಲಾಗಿದ್ದು, ಅದನ್ನು ನಕಲಿ ಎಂದು ಘೋಷಿಸಿ, ಲಾಭಕ್ಕಾಗಿ ಅದನ್ನು ಹರಾಜು ಹಾಕಲಾಗಿದೆ ಎಂದು ಆರೋಪಿಸಿದ ಅಭಿಷೇಕ್ ನ್ಯಾಯಾಲಯದ ಮೊರೆಹೋದರು.
ಇದನ್ನೂ ಓದಿ: ಕಾರ್ ಇನ್ಸೂರೆನ್ಸ್ ಎಷ್ಟು ಬಾರಿ ಕ್ಲೈಮ್ ಮಾಡಬಹುದು? 99% ಜನಕ್ಕೆ ಇದು ಗೊತ್ತಿಲ್ಲ
ಹೈಕೋರ್ಟ್ ಈ ಹಿಂದೆ ಅಭಿಷೇಕ್ ನೀಡಿದ ಎಫ್‌ಐಆರ್ ಅನ್ನು ರದ್ದುಪಡಿಸಿದ್ದರೂ, ಸುಪ್ರೀಂಕೋರ್ಟ್ ಅದನ್ನು ಮರುಸ್ಥಾಪಿಸಿದೆ. ನ್ಯಾಯಮೂರ್ತಿಗಳು ಈ ತೀರ್ಪಿನಲ್ಲಿ ಬ್ಯಾಂಕ್ ಅಧಿಕಾರಿಗಳು ಬಂಗಾರದ ಮೌಲ್ಯಮಾಪನ ಮಾಡಲು ಅಥವಾ ಬಂಗಾರವನ್ನು ಮಾರಾಟ ಮಾಡಲಿಕ್ಕೆ (auction) ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ ನುಡಿದಂತೆ, “ಬ್ಯಾಂಕ್ ಒಂದು ಸಲ ಗೋಲ್ಡ್ ಲೋನ್ ನೀಡಿದ ಮೇಲೆ, ಲೋನ್ ಪಾವತಿಯಾದ ಬಳಿಕ ಬಂಗಾರದ ಹಕ್ಕು ಗ್ರಾಹಕರದೇ. ಅದನ್ನು ಮೌಲ್ಯಮಾಪನ ಮಾಡುವ ಅಥವಾ ಮಾರಾಟ ಮಾಡುವ ಯಾವ ಅಧಿಕಾರವೂ ಬ್ಯಾಂಕ್‌ಗೆ ಇರದು.” ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಪ್ಯಾನ್ ಕಾರ್ಡ್ ಇರೋರಿಗೆ ಬಿಗ್ ಅಲರ್ಟ್, ಹೀಗೆ ಮಾಡಿದ್ರೆ 10,000 ದಂಡ! ಹುಷಾರ್
ಇದರಿಂದ ಗೋಲ್ಡ್ ಲೋನ್ ಪಡೆದ ಗ್ರಾಹಕರು ಇನ್ನು ಮುಂದೆ ತಮ್ಮ ಹಕ್ಕುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂಬುದು ಖಚಿತ. ಇದೇ ವೇಳೆ, ಬ್ಯಾಂಕುಗಳು ಸಹ ಗ್ರಾಹಕರ ಅಡವಿಟ್ಟ ಬಂಗಾರದ ಬಗ್ಗೆ ಕಾನೂನು ಮೀರದಂತೆ ನಡೆಯಬೇಕೆಂಬ ಎಚ್ಚರಿಕೆಯ ಸಂದೇಶ ನೀಡಿದೆ ಈ ತೀರ್ಪು.
Supreme Court’s Big Verdict on Gold Loan Disputes