ಕೇವಲ ₹50 ರೂಪಾಯಿ ಕೊಟ್ಟರೆ ಹೊಸ ಪ್ಯಾನ್ ಕಾರ್ಡ್‌ ಮನೆ ಬಾಗಿಲಿಗೆ! ಹೊಸ ಸೌಲಭ್ಯ - PAN Card Reprint

PAN Card Reprint: ಪ್ಯಾನ್ ಕಾರ್ಡ್ ಕಳೆದುಹೋದ್ರೆ ಗಾಬರಿಯಾಗ್ಬೇಡಿ. ಕೇವಲ ₹50 ರೂಪಾಯಿ ಕೊಟ್ಟರೆ ಹೊಸ ಪ್ಯಾನ್ ಕಾರ್ಡ್‌ನ್ನು ಮನೆಯ ಬಾಗಿಲಿಗೇ ತಲುಪಿಸುವ ಸೌಲಭ್ಯ ಈಗ ಲಭ್ಯ. ಆನ್‌ಲೈನ್ ಪ್ರೋಸೆಸ್ ಸರಳವಾಗಿದೆ.

PAN Card Reprint : ಪ್ಯಾನ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು ಎಂಬ ಗೊಂದಲ ಸಾಮಾನ್ಯ. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಕೇವಲ ರೂ.50 ಕ್ಕೆ ಹೊಸ ಪ್ಯಾನ್ ಕಾರ್ಡ್‍ನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸುತ್ತಾರೆ. ಇಷ್ಟೇ ಸಿಂಪಲ್ ಸೌಲಭ್ಯವಾಗಿದ್ದರೂ, ಇನ್ನೂ ಹಲವರಿಗೆ ತಿಳಿದಿಲ್ಲ.

ಈ ಹಿಂದೆ ಪ್ಯಾನ್ ಕಾರ್ಡ್ ಮಿಸ್ ಆದ್ರೆ, ಯಾರಾದರೂ ದುರುಪಯೋಗ ಮಾಡಬಹುದೆಂಬ ಭಯ ಎಲ್ಲರಲ್ಲಿರ್ತಿತ್ತು. ಅದಕ್ಕಾಗಿ ಮೊದಲಿಗೆ ಹತ್ತಿರದ ಪೊಲೀಸ್‌ ಸ್ಟೇಷನ್‌ಗೆ ಹೋಗಿ FIR ಅಥವಾ ಕಂಪ್ಲೈಂಟ್ ಕೊಡೋದು ಮುಖ್ಯ. ಇದರಿಂದ ಕಾರ್ಡ್‌ ಅನ್ನು ಬೇರೆ ಯಾರಾದರೂ ತಪ್ಪಾಗಿ ಬಳಕೆ ಮಾಡಿದರೆ ನಿಮ್ಮ ಮೇಲೆ ಹೊಣೆ ಬಾರದಂತೆ ರಕ್ಷಣೆ ಲಭಿಸುತ್ತದೆ.

ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಪೂರ್ಣವಾಗಿ ಆನ್‌ಲೈನ್ ಆಗಿದೆ. ಪ್ರೋಟಿಯನ್ (Protean) ವೆಬ್‌ಸೈಟ್ ಗೆ ಹೋಗಿ ‘Reprint PAN’ ಆಯ್ಕೆಮಾಡಬೇಕು. ನಂತರ ನಿಮ್ಮ PAN ಸಂಖ್ಯೆ, ಆಧಾರ್ ಸಂಖ್ಯೆ, ಜನ್ಮ ದಿನಾಂಕ ಹಾಕಿ ಇನ್‌ಸ್ಟ್ರಕ್ಷನ್‌ಗಳಿಗೆ ಟಿಕ್ ಮಾಡಿ ಕ್ಯಾಪ್ಚಾ ಸಬ್ಮಿಟ್ ಮಾಡಬೇಕು.

ನಂತರ ನಿಮ್ಮ ವಿಳಾಸ–ಪಿನ್‌ಕೋಡ್ ಸರಿಯಾಗಿದೆಯೇ ನೋಡಿ OTP ಮೂಲಕ ವೆರಿಫೈ ಮಾಡಿದರೆ ಸಾಕು. ಶುಲ್ಕವನ್ನು ಪಾವತಿಸಿದ ತಕ್ಷಣ ಟ್ರಾಕಿಂಗ್ ನಂಬರ್ ಕೂಡ ಬರುತ್ತದೆ.

ಇದನ್ನೂ ಓದಿ: ಇನ್ಮುಂದೆ ಪತಿಯ ಬ್ಯಾಂಕ್‌ ಖಾತೆಯಿಂದ ಪತ್ನಿಯೂ ಯುಪಿಐ ಪಾವತಿ ಮಾಡಬಹುದು

ಹೊಸ ಕಾರ್ಡ್ ಸಾಮಾನ್ಯವಾಗಿ ಕೆಲವೇ ದಿನಗಳಲ್ಲಿ ಮನೆಗೆ ತಲುಪುತ್ತದೆ. ಭಾರತದಲ್ಲೇ ಡೆಲಿವರಿ ಬೇಕಿದ್ದರೆ ಕೇವಲ ₹50 ಮಾತ್ರ. ಆದರೆ ವಿದೇಶಕ್ಕೆ ಕಳಿಸಬೇಕಾದರೆ ₹959 (ಟ್ಯಾಕ್ಸ್ ಸೇರಿ) ಶುಲ್ಕ ನಿಗದಿಯಿದೆ. ಕಾರ್ಡ್ ಅನ್ನು ಇನ್‌ಕಮ್ ಟ್ಯಾಕ್ಸ್ ಇಲಾಖೆಯ ದಾಖಲೆಗಳಲ್ಲಿರುವ ಇತ್ತೀಚಿನ ವಿಳಾಸಕ್ಕೆ ಕಳಿಸುತ್ತಾರೆ. ವಿಳಾಸ ಬದಲಾವಣೆ ಬೇಕಿದ್ದರೆ ಅದು ಬೇರೆ ಪ್ರಾಸೆಸ್.

ಪ್ಯಾನ್ ಕಾರ್ಡ್ ಆರ್ಥಿಕ ಜೀವನದ ಮೂಲ ಗುರುತು. ಬ್ಯಾಂಕ್ ಖಾತೆ ತೆರೆದುಕೊಳ್ಳೋದು, ಫಿಕ್ಸ್‌ಡ್ ಡಿಪಾಸಿಟ್‌ಗಳಲ್ಲಿ TDS ಕಡಿಮೆ ಮಾಡಿಸುವುದು, ವಿವಿಧ ಇನ್ವೆಸ್ಟ್‌ಮೆಂಟ್‌ಗಳು, ITR ಫೈಲ್ ಮಾಡುವುದು, ಮನೆ–ಜಮೀನು–ವಾಹನ ರಿಜಿಸ್ಟ್ರೇಷನ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಎಲ್ಲದಕ್ಕೂ ಪ್ಯಾನ್ ಕಾರ್ಡ್ ಬೇಕು. ಹೀಗಾಗಿ ಕಾರ್ಡ್ ಕಳೆದುಹೋದರೆ ತಕ್ಷಣವೇ ರಿಪ್ರಿಂಟ್ ಮಾಡಿಸಿಕೊಂಡರೆ ಉತ್ತಮ.

ಅಪ್ಲೈ ಮಾಡಿದ ಕೆಲವೇ ದಿನಗಳಲ್ಲಿ ಕಾರ್ಡ್ ನಿಮ್ಮ ಮನೆಗೆ ತಲುಪುತ್ತದೆ. ಟ್ರಾಕಿಂಗ್ ಸೌಲಭ್ಯ, ಕಡಿಮೆ ವೆಚ್ಚ, ಸುಲಭ ಆನ್‌ಲೈನ್ ಪ್ರಕ್ರಿಯೆ–ಇವೆಲ್ಲ ಸೇರಿ, ಈ ಸೇವೆ ಈಗ ಎಲ್ಲರಿಗೂ ದೊಡ್ಡ ಸಹಾಯವಾಗುತ್ತಿದೆ.

PAN Card Reprint for Just 50 with Home Delivery

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories