ದಿಢೀರ್ ಪ್ಯಾನ್ ಕಾರ್ಡ್ ನಿಯಮ ಬದಲಾವಣೆ, ಏಪ್ರಿಲ್ 1ರಿಂದ ಹೊಸ ರೂಲ್ಸ್
PAN Card Rules: ಪ್ಯಾನ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಗುಡ್‌ನ್ಯೂಸ್, ಬ್ಯಾಂಕ್ ನಗದು ಠೇವಣಿ ಮಿತಿ ಹೆಚ್ಚಳ, ಮೀಲ್ ಅಲವಾನ್ಸ್ ಏರಿಕೆ, ವಾಹನ ಖರೀದಿ ಹಾಗೂ ಹೋಟೆಲ್ ಬಿಲ್ ನಿಯಮ ಸಡಿಲಿಕೆ, ಐಟಿಆರ್ ಫೈಲಿಂಗ್ ಸರಳ ಕ್ರಮಗಳು ಜಾರಿಗೆ ಬರಲಿವೆ.

PAN Card Rules: ದಿನನಿತ್ಯ ಬ್ಯಾಂಕ್ ವ್ಯವಹಾರ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಸಂಬಂಧಿತ ಹಲವು ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಜನರಿಗೆ ಅನಗತ್ಯ ದಾಖಲೆ ಕಷ್ಟ ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿದೆ. ಏಪ್ರಿಲ್ 1ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿವೆ.
ನಗದು ಠೇವಣಿ ಮಿತಿ ಹೆಚ್ಚಳ
ಇಲ್ಲಿಯವರೆಗೆ ಒಂದು ದಿನದಲ್ಲಿ ₹50 ಸಾವಿರಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಬೇಕಾದರೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿತ್ತು. ಇದೀಗ ಈ ಮಿತಿಯನ್ನು ₹1 ಲಕ್ಷಕ್ಕೆ ಏರಿಸಲಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳು, ರೈತರು ಹಾಗೂ ಸಾಮಾನ್ಯ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ. ಕಡಿಮೆ ಮೊತ್ತದ ವ್ಯವಹಾರಗಳಿಗೆ ದಾಖಲೆ ಒತ್ತಡ ಕಡಿಮೆಯಾಗುತ್ತದೆ.
ಉದ್ಯೋಗಿಗಳಿಗೆ ಮೀಲ್ ಅಲವಾನ್ಸ್ ಲಾಭ
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಮತ್ತೊಂದು ಗುಡ್ ನ್ಯೂಸ್. ಉದ್ಯೋಗಿಗಳಿಗೆ ನೀಡುವ ಮೀಲ್ ಅಲವಾನ್ಸ್ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಹಿಂದಿನ ₹50 ಬದಲು ಈಗ ₹200 ನೀಡಲು ಅವಕಾಶ ಸಿಗಲಿದೆ. ಇಂದಿನ ದುಬಾರಿ ಜೀವನಶೈಲಿಯಲ್ಲಿ ಇದು ಉದ್ಯೋಗಿಗಳಿಗೆ ನಿಜವಾದ ನೆರವಾಗಲಿದೆ. ಮಕ್ಕಳ ಶಿಕ್ಷಣ ಹಾಗೂ ವೈಯಕ್ತಿಕ ವೆಚ್ಚಗಳ ಅಲವಾನ್ಸ್‌ಗಳಲ್ಲೂ ತಿದ್ದುಪಡಿ ಸಾಧ್ಯತೆ ಇದೆ.
ಐಟಿಆರ್ ಪ್ರಕ್ರಿಯೆ ಇನ್ನಷ್ಟು ಸುಲಭ
ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಕೂಡ ಸುಲಭಗೊಳ್ಳಲಿದೆ. ಈಗಾಗಲೇ ಪೂರ್ವಭರಿತ (Pre-filled) ಫಾರ್ಮ್‌ಗಳನ್ನು ತೆರಿಗೆದಾರರಿಗೆ ನೀಡಲಾಗುತ್ತದೆ. ವಿವರಗಳನ್ನು ಪರಿಶೀಲಿಸಿ ಒಪ್ಪಿದರೆ ಸಾಕು. ಇದರಿಂದ ಪೇಪರ್ ವರ್ಕ್ ಕಡಿಮೆಯಾಗಿದ್ದು, ಆನ್‌ಲೈನ್‌ನಲ್ಲಿ ತ್ವರಿತವಾಗಿ ಫೈಲ್ ಮಾಡಲು ಸಾಧ್ಯವಾಗುತ್ತದೆ.
ಯಾವ ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ?
ಹೊಸ ನಿಯಮಗಳ ಪ್ರಕಾರ, ₹5 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನ ಖರೀದಿಸಿದರೆ ಮಾತ್ರ ಪ್ಯಾನ್ ಅಗತ್ಯ. ಹೋಟೆಲ್, ರೆಸ್ಟೋರೆಂಟ್ ಅಥವಾ ದೊಡ್ಡ ಬಿಲ್‌ಗಳಿಗೆ ₹1 ಲಕ್ಷ ಮೀರಿದರೆ ಮಾತ್ರ ಪ್ಯಾನ್ ಕೇಳಲಾಗುತ್ತದೆ. ಇದುವರೆಗೆ ₹50 ಸಾವಿರ ಮಿತಿ ಇದ್ದುದರಿಂದ ಜನರಿಗೆ ತೊಂದರೆ ಆಗುತ್ತಿತ್ತು.



