ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಬೇರೆಯವರು ಸಾಲ ಪಡೆದಿರಬಹುದು! ಚೆಕ್ ಮಾಡಿ
ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಇತರರು ಸಾಲ ತೆಗೆದುಕೊಳ್ಳುತ್ತಿದ್ದಾರೆ ಎಂಬ ಶಂಕೆಯಿದೆಯೇ? ಕೇವಲ 2 ನಿಮಿಷಗಳಲ್ಲಿ ಇದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬಹುದು.

- ಪ್ಯಾನ್ ಕಾರ್ಡ್ ಬಳಸಿ ಸಾಲ ತೆಗೆದುಕೊಳ್ಳುವ ಮೋಸದ ಜಾಲ
- ಇದರಿಂದ CIBIL ಸ್ಕೋರ್ ಕುಸಿದು, ಭವಿಷ್ಯದಲ್ಲಿ ಸಾಲ ಪಡೆಯುವುದು ಕಷ್ಟ
- ಸೈಬರ್ ಕ್ರೈಂ ನಂಟು ಕಂಡುಬಂದರೆ ತಕ್ಷಣ FIR ಸಲ್ಲಿಸುವುದು ಅಗತ್ಯ
PAN misuse alert: ಇತ್ತೀಚೆಗೆ ಡಿಜಿಟಲ್ ಯುಗದೊಂದಿಗೆ ಹಣಕಾಸು ಮೋಸದ ಹಾವಳಿ ಹೆಚ್ಚಾಗಿದೆ. ನಿಮ್ಮ ಕಾರ್ಡ್ ಬಳಸಿ, ನಿಮ್ಮ ಮಾಹಿತಿಯೊಂದಿಗೆ ಯಾರೋ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ (PAN Card) ನ್ನು ಬಳಸಿಕೊಂಡು ಪರ್ಸನಲ್ ಲೋನ್ (personal loan) ತೆಗೆದುಕೊಂಡಿರಬಹುದು. ಈ ವಿಷಯ ನಿಮಗೆ ಗೊತ್ತಾಗುವುದು ಮಾತ್ರ ದೀರ್ಘವೇಳೆಯ ಬಳಿಕ. ಅಂದು ಬ್ಯಾಂಕ್ ನಿಂದ ಬಂದ ನೋಟಿಸ್ ನೋಡಿ ಬೆಚ್ಚಿಬೀಳ್ತೀರಿ.
ಇಂತಹ ಸಂದರ್ಭಗಳಲ್ಲಿ ನಿಮ್ಮ ಸಿಬಿಲ್ ಸ್ಕೋರ್ (CIBIL score) ತೀವ್ರವಾಗಿ ಕುಸಿಯುತ್ತದೆ. ನಿಮ್ಮ ಹೆಸರು ನಕಲಿ ಸಾಲದ ದಾಖಲೆಗಳಲ್ಲಿ ಬರೆಯಲ್ಪಟ್ಟಿರಬಹುದು. ಇದರಿಂದಾಗಿ ಭವಿಷ್ಯದಲ್ಲಿ ನೀವು ಯಾವುದೇ ರೀತಿಯ ಕಮರ್ಷಿಯಲ್ ಲೋನ್ ಅಥವಾ ಹೌಸ್ ಲೋನ್ (Home Loan) ಪಡೆಯಲಾಗದು.
ಇದನ್ನೂ ಓದಿ: ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಪಶುಪಾಲನಾ ಯೋಜನೆ 2025ಕ್ಕೆ ಅರ್ಜಿ ಸಲ್ಲಿಸಿ
ಈ ರೀತಿ ಮೋಸ ಹೇಗೆ ಸಂಭವಿಸುತ್ತದೆ?
ಬ್ಯಾಂಕ್ ಗಳು ಸಾಲ ನೀಡುವ ಮೊದಲು ಹಲವು ಪ್ರಮಾಣಪತ್ರಗಳ ಪರಿಶೀಲನೆ ಮಾಡುತ್ತವೆ. ಆದರೂ ಕೆಲವು ಸಣ್ಣ ಸಾಲ ನೀಡುವ ಫಿನ್ಟೆಕ್ (fintech) ಸಂಸ್ಥೆಗಳು ಅತಿ ಕಡಿಮೆ ಪ್ರಮಾಣಪತ್ರಗಳೊಂದಿಗೆ ಸಾಲ ನೀಡುತ್ತವೆ.
ಇಂಥ ಕಂಪನಿಗಳನ್ನು ಟಾರ್ಗೆಟ್ ಮಾಡುವುದು ಮೋಸಗಾರರ ತಂತ್ರ. ಪ್ಯಾನ್ ಕಾರ್ಡ್ ಡೇಟಾ ಬಳಸಿ ಅವರು ಆನ್ಲೈನ್ನಲ್ಲಿ EMI (equated monthly installment) ಲೋನ್ ಪಡೆದುಯುತ್ತಾರೆ.
ಚೆಕ್ ಮಾಡಿಕೊಳ್ಳುವುದು ಹೇಗೆ?
CIBIL ನ ಅಧಿಕೃತ ವೆಬ್ಸೈಟ್ಗೆ (www.cibil.com) ಹೋಗಿ, ‘Get Your CIBIL Score’ ಎಂಬ ಆಯ್ಕೆಗೆ ಕ್ಲಿಕ್ ಮಾಡಿ. ನಿಮ್ಮ ಇಮೇಲ್, ಮೊಬೈಲ್ ನಂಬರ್, ಪ್ಯಾನ್ ನಂಬರ್ ಇತ್ಯಾದಿ ವಿವರ ನೀಡಿ ಲಾಗಿನ್ ಮಾಡಿ. ನಂತರ ಕ್ರೆಡಿಟ್ ವಿವರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರೆ, ನೀವು ಸಿಬಿಲ್ ಡ್ಯಾಶ್ಬೋರ್ಡ್ನ್ನು ನೋಡಬಹುದು.
ಅಲ್ಲಿ ‘Accounts’ ಅಥವಾ ‘Enquiries’ ವಿಭಾಗಗಳಲ್ಲಿ ನಿಮ್ಮ ಹೆಸರಿನಲ್ಲಿ ಎಲ್ಲ ಸಾಲದ ದಾಖಲೆಗಳು ಇರುತ್ತವೆ. ನೀವು ತೆಗೆದುಕೊಳ್ಳದ ಸಾಲ/ಕ್ರೆಡಿಟ್ ಕಾರ್ಡ್ ಇದ್ದರೆ, ನೀವು ಮೋಸಕ್ಕೊಳಗಾಗಿದ್ದೀರಿ ಎಂದು ಅರಿಯಬಹುದು.
ಇದನ್ನೂ ಓದಿ: 1 ಲಕ್ಷಕ್ಕೆ ಬಡ್ಡಿಯೇ 22,419 ರೂಪಾಯಿ ಸಿಗುವ ಎಸ್ಬಿಐ ಬ್ಯಾಂಕ್ ಯೋಜನೆ ಇದು
ಸಿಬಿಲ್ ರಿಪೋರ್ಟ್ ಪಡೆಯಲು ಇತರ ಆಯ್ಕೆಗಳು
Experian, Equifax, CRIF High Mark ವೆಬ್ಸೈಟ್ಗಳಲ್ಲಿಯೂ ಫ್ರೀ ಕ್ರೆಡಿಟ್ ರಿಪೋರ್ಟ್ ದೊರೆಯುತ್ತದೆ.
Paytm, BankBazaar ತರಹದ ಆಪ್ಗಳಲ್ಲೂ ಈ ಸೇವೆ ಲಭ್ಯ.
ಮೋಸ ಉಂಟಾದರೆ ತಕ್ಷಣ ಏನು ಮಾಡಬೇಕು?
- ಕ್ರೆಡಿಟ್ ಬ್ಯೂರೋಗೆ ದೂರು ನೀಡಬೇಕು.
- ಸಂಬಂಧಿತ ಬ್ಯಾಂಕ್/ಫಿನ್ಟೆಕ್ ಕಂಪನಿಗೆ ಮಾಹಿತಿ ನೀಡಬೇಕು.
- ಸೈಬರ್ ಕ್ರೈಂ ದೂರು ಸಲ್ಲಿಸಿ – www.cybercrime.gov.in ಅಥವಾ 1930 ಗೆ ಕರೆ ಮಾಡಿ FIR ದಾಖಲಿಸಬಹುದು.
ಇದನ್ನೂ ಓದಿ: ಕೇವಲ 10 ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಪಡೆಯಿರಿ! ಇಲ್ಲಿದೆ ಸರಳ ಪ್ರಕ್ರಿಯೆ
ಪ್ಯಾನ್ ಕಾರ್ಡ್ನ್ನು ಸುರಕ್ಷಿತವಾಗಿ ಬಳಸಿ
ನಿಮ್ಮ ಪ್ಯಾನ್ ಡಿಟೇಲ್ಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ. ಕೆಲವೊಮ್ಮೆ ಕಾನೂನಾತ್ಮಕ ದಾಖಲೆಗಳಿಗೆ ಹಂಚಿದರೂ, ಪಿಯರ್ ಟು ಪಿಯರ್ (peer-to-peer) apps ಅಥವಾ ಸಣ್ಣ ಸಾಲ ಸಂಸ್ಥೆಗಳಿಗೆ ಮಾಹಿತಿ ಹಂಚುವುದರಲ್ಲಿ ಎಚ್ಚರಿಕೆಯಿಂದಿರಿ.
PAN misuse alert, Loan fraud check in 2 minutes






