ಕೋಳಿ ಫಾರ್ಮ್ ಮಾಡೋಕೆ ಬೇಕಿರುವ ಪರವಾನಿಗೆ ಹಾಗೂ ಸರ್ಕಾರದ ಸಹಾಯಧನ ಮಾಹಿತಿ
Poultry Farming Business : ಬದಲಾಗುತ್ತಿರುವ ವಾತಾವರಣದ ಹಿನ್ನೆಲೆಯಲ್ಲಿ ಕೃಷಿಕರು ಏಕ ಆದಾಯವನ್ನು (single income) ಅವಲಂಬಿಸುವುದು ಸರಿಯಲ್ಲ. ಈ ಕಾರಣದಿಂದ ಕೃಷಿಕರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯುವುದರ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮೊದಲದ ಉಪಕಸುಬುಗಳನ್ನು ಕೂಡ ಮಾಡಿಕೊಳ್ಳುತ್ತಾರೆ. ಇದರಿಂದ ಆದಾಯವು ಕೂಡ ಹೆಚ್ಚು ಬರುತ್ತಿದೆ.
ಕೋಳಿ ಸಾಕಾಣಿಕೆಗೆ ಹೆಚ್ಚಿದ ಮಹತ್ವ (Poultry farming)
ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಾಣಿಕೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಯಾಕೆಂದರೆ ಕೋಳಿ ಸಾಕಾಣಿಕೆಯಿಂದ ಹೆಚ್ಚಿನ ಲಾಭವನ್ನ ಗಳಿಸಬಹುದು. ಇತ್ತೀಚಿಗೆ ಯುವಕರು ಕೂಡ ಕೋಳಿ ಫಾರಂ ಮಾಡಲು ಆಸಕ್ತರಾಗಿದ್ದಾರೆ ಎನ್ನಬಹುದು.
ಆದರೆ ಕೋಳಿ ಫಾರಂ ಅನ್ನು ಯಾರೂ ಕೂಡ ಸುಖಾ ಸುಮ್ಮನೆ ಆರಂಭಿಸಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಪ್ರಮುಖ ಕಚೇರಿ ಪರವಾನಗಿ ಕೂಡ ಬೇಕಾಗುತ್ತದೆ, ಇದಕ್ಕೆ ನೀವು ಯಾರಿಂದ ಪರವಾನಿಗೆ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಲು ಸರ್ಕಾರದಿಂದ 1.5 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
ಕೋಳಿ ಸಾಕಾಣಿಕೆಗೆ ಭೂ ಪರಿವರ್ತನೆ ಅಗತ್ಯವಿದೆಯೇ?
ಭೂ ಸುಧಾರಣಾ ಕಾಯ್ದೆ 1961 (bhoo sudharana act) ಅಡಿಯಲ್ಲಿ ಕೋಳಿ ಸಾಕಾಣಿಕೆಯನ್ನು ಕೃಷಿಕ ಉಪಕಸುಬು ಎಂದು ಪರಿಗಣಿಸಲಾಗಿದೆ ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ (Gram Panchayat) ವ್ಯಾಪ್ತಿಯಲ್ಲಿ ಕೋಳಿ ಸಾಕಾಣಿಕೆಗಾಗಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ರೀತಿಯ ಭೂ ಪರಿವರ್ತನೆಯ ಅಗತ್ಯ ಇರುವುದಿಲ್ಲ.
ಕಟ್ಟಡ ಪರವಾನಿಗೆ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು ಇವು! (Documents needed)
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಪೇಕ್ಷಣ ಪತ್ರ ಎನ್ ಒ ಸಿ (NOC) ಪಡೆದುಕೊಳ್ಳಬೇಕು.
ಚೆಕ್ ಮೂಲಕ ಹಣದ ವ್ಯವಹಾರ ಮಾಡುವವರಿಗೆ ಹೊಸ ನಿಯಮ! ಬಂತು ಹೊಸ ರೂಲ್ಸ್
ಕೋಳಿ ಫಾರಂ ನಿರ್ಮಾಣಕ್ಕೆ ಈ ಪ್ರಾಧಿಕಾರದ ಪರವಾನಿಗೆ ಬೇಕು!
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಪಂಚಾಯತಿ ವರಮಾನಿಗೆ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 64 ರಲ್ಲಿ ಹೇಳಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶು ಸಂಗೋಪನ ಇಲಾಖೆ ವಿಧಿಸಿರುವ ಶರತ್ತುಗಳ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕೋಳಿ ಫಾರಂ ಆರಂಭಿಸಬಹುದು.
ಕೋಳಿ ಸಾಕಾಣಿಕೆಗೆ ಸಿಗುವ ಸರ್ಕಾರದ ಬೆನಿಫಿಟ್ಸ್,!
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ! (Pashu Kisan credit card scheme)
ಈ ಯೋಜನೆಯ ಅಡಿಯಲ್ಲಿ ಸಣ್ಣ ಸಾಕಾಣಿಕೆ ಆರಂಭಿಸುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Loan) ನೀಡಲಾಗುತ್ತದೆ. ತಾಲೂಕು ಪಶು ಸಂಗೋಪನ ಇಲಾಖಾ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.
ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ ₹8,000 ಹಣ
ನ್ಯಾಷನಲ್ ಲೈವ್ ಸ್ಟಾಕ್ ಮಿಷನ್! (National livestock mission)
ಈ ಯೋಜನೆಯ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಮಾಡುವವರಿಗೆ 50% ನಷ್ಟು ಬ್ಯಾಂಕ್ ಸಾಲದ (Bank Loan) ಮೇಲೆ ಸಬ್ಸಿಡಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ https://nlm.udyamimitra.in/
ಇದಲ್ಲದೆ ಅಗ್ರಿ ಬ್ಯುಸಿನೆಸ್ (Agri business scheme) ಯೋಜನೆಯ ಅಡಿಯಲ್ಲಿ ಯುವಕರು ಕೋಳಿ ಸಾಕಾಣಿಕೆ ಆರಂಭಿಸಲು ಎರಡು ತಿಂಗಳ ತರಬೇತಿ ಹಾಗೂ 44% ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ (Loan Facility) ಪಡೆದುಕೊಳ್ಳಬಹುದಾಗಿದೆ.
Permit and government subsidy Loan for poultry farm Business