ಇದರ ಮೊಟ್ಟೆಗೆ ಚಿನ್ನದ ಬೆಲೆ; ಈ ಕಾಡು ಕೋಳಿ ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ

ಇತ್ತೀಚಿನ ದಿನಗಳಲ್ಲಿ ಕೋಳಿ ಫಾರ್ಮಿಂಗ್ (poultry business) ಎನ್ನುವುದು ಬಹಳ ಹೆಚ್ಚಿನ ಮಹತ್ವ ಪಡೆದುಕೊಂಡಿದೆ, ಇದಕ್ಕೆ ಮುಖ್ಯ ಕಾರಣ ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆಗೆ ಹೆಚ್ಚುತ್ತಿರುವ ಬೆಲೆ.

ನಾಟಿ ಕೋಳಿಯ ಮಾಂಸ ಹಾಗೂ ಮೊಟ್ಟೆ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುತ್ತದೆ ಎನ್ನುವ ಕಾರಣಕ್ಕೆ ಜನರು ಹೆಚ್ಚಾಗಿ ಇದನ್ನು ಸೇವಿಸಲು ಇಷ್ಟಪಡುತ್ತಾರೆ, ಆ ಕಾರಣಕ್ಕೆ ಕೋಳಿ ಫಾರ್ಮಿಂಗ್ (poultry Farming) ಬಹಳ ಫೇಮಸ್ ಆಗಿದೆ.

ಆದರೆ ಇದಕ್ಕಿಂತಲೂ ಅತಿ ಹೆಚ್ಚು ಲಾಭ ಹಾಗೂ ಕಡಿಮೆ ವೆಚ್ಚದಲ್ಲಿ ನೀವು ಆರಂಭಿಸಬಹುದಾದ ಮತ್ತೊಂದು ಉದ್ಯಮ (Own Business) ಅಂದ್ರೆ ಈ ಒಂದು ಪುಟ್ಟ ಹಕ್ಕಿಯ ಸಾಕಾಣಿಕೆ, ಅದುವೇ ಫೆಸೆಂಟ್ ಹಕ್ಕಿ (pheasant bird business) ಅಥವಾ ಗೌಜಿಗನ ಹಕ್ಕಿ.

ದೇಶದಲ್ಲೇ ಮೊದಲ ಬಜಾಜ್ ಸಿಎನ್‌ಜಿ ಬೈಕ್ ಬರಲಿದೆ, ಪವರ್ ಫುಲ್ 110ಸಿಸಿ ಎಂಜಿನ್‌ ಕೂಡ!

ಫೆಸೆಂಟ್ ಹಕ್ಕಿ;

ನಮ್ಮ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ (Karnataka) ಈ ಹಕ್ಕಿಯ ಕೃಷಿ ಸ್ವಲ್ಪ ಕಡಿಮೆ ಇರಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯಗಳಲ್ಲಿಯೂ ಕೂಡ ಪೇಸೆಂಟ್ ನ ಉತ್ತಮ ತಳಿಗಳ ಸಾಕಾಣಿಕೆ ಆರಂಭವಾಗಿದೆ. ಇದು ಒಂದು ಕಾಡು ಪಕ್ಷಿ ಆಗಿದ್ದು ಇದರ ಮಾಂಸಕ್ಕೆ ಇರುವ ಬೆಲೆ ಹಾಗೂ ಬೇಡಿಕೆ ಹೆಚ್ಚು.

ಫೇಸೆಂಟ್ ಹಕ್ಕಿ ಬಹಳ ಪುಟ್ಟದಾಗಿರುವ ಹಕ್ಕಿ ಇದನ್ನ ನವಿಲು ಜಾತಿಗೆ ಸೇರಿದ ಹಕ್ಕಿ ಎಂದು ಹೇಳಲಾಗುತ್ತದೆ. ಈ ಹಕ್ಕಿ ಕಾಡು ಹಕ್ಕಿ ಆಗಿದ್ದು ಕೋಳಿ ಸಾಕಾಣಿಕೆಯಂತೆ ಪರವಾನಗಿ (permission) ಇಲ್ಲದೆ ಸಾಕಾಣಿಕೆ ಮಾಡಲು ಸಾಧ್ಯವಿಲ್ಲ, ಪೇಸೆಂಟ್ ಹಾಕಿ ಸಾಕಾಣಿಕೆಗೆ ನೀವು ಸಂಬಂಧ ಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳಬೇಕು.

ಓಲಾದಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ, ಒಮ್ಮೆ ಚಾರ್ಜ್ ಮಾಡಿದ್ರೆ 151 ಕಿ.ಮೀ ಪಕ್ಕಾ ಮೈಲೇಜ್

ಫೇಸೆಂಟ್ ಹಕ್ಕಿ ಸಾಕಾಣಿಕೆ ಹೇಗೆ?

pheasant bird eggಈ ಹಕ್ಕಿಯ ಸಾಕಾಣಿಕೆ ಬಹಳ ಸುಲಭ, ನಿರ್ವಹಣಾ ವೆಚ್ಚವು (maintenance) ಕಡಿಮೆ ಹಾಗಾಗಿ ನೀವು ಹೆಚ್ಚು ಬಂಡವಾಳ (investment) ಹೂಡಿಕೆ ಮಾಡುವ ಅಗತ್ಯವಲ್ಲ. ಒಂದು ಸಾವಿರ ಹಕ್ಕಿಗಳನ್ನು ಸಾಕಿದರೆ ಕೇವಲ ಒಂದು ವರ್ಷಗಳಲ್ಲಿ ನೀವು ಲಕ್ಷಾಧಿಪತಿಗಳಾಗಬಹುದು.

ಫೆಸಂಟ್ ಹಕ್ಕಿ ಕೇವಲ ಎರಡು ಚದರ ಅಡಿಗಳಲ್ಲಿ ಸಾಕಾಣಿಕೆಗೆ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಈ ಹಕ್ಕಿ ಸಾಕಾಣಿಕೆ ಮಾಡಿದರೆ ನಂತರದ ದಿನಗಳಲ್ಲಿ ನಿಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬಹುದು.

ವರ್ಷಕ್ಕೆ 300 ಮೊಟ್ಟೆ ಇಡುವ ಚಿನ್ನದ ಹಕ್ಕಿ!

ಯಾಕೆ ನಾವು ಚಿನ್ನದ ಮೊಟ್ಟೆ ಇಡುವ ಹಕ್ಕಿ ಎಂದು ಹೇಳಬಹುದು? ಯಾಕೆಂದ್ರೆ ವರ್ಷಕ್ಕೆ 250ರಿಂದ 300 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಈ ಪುಟ್ಟ ಹಕ್ಕಿಗೆ ಇದೆ. ನೆಲದ ಮೇಲೆ ಮೊಟ್ಟೆಗಳನ್ನು ಇಡಬಲ್ಲ ಹಕ್ಕಿ ಇದು. ಹಾಗಾಗಿ ನೀವು ಮನೆಯಲ್ಲಿಯೇ ಒಂದು ಸಣ್ಣ ಶೆಡ್ ಮಾಡಿ ಅದರಲ್ಲಿ ಹಾಕಿ ಸಾಕಾಣಿಕೆ ಮಾಡಬಹುದು.

ನೀವು ಸುಮಾರು ಸಾವಿರ ಹಕ್ಕಿಗಳನ್ನು ಸಾಕೋದಾದ್ರೆ 25 ರಿಂದ 30 ಸಾವಿರ ರೂಪಾಯಿಗಳ ವೆಚ್ಚ ಇರುತ್ತದೆ. ಇದಕ್ಕೆ ಕೊಡಬೇಕಾಗಿರುವ ಆಹಾರವು ಕಡಿಮೆ, ದಿನದಲ್ಲಿ ಎರಡು ಬಾರಿ 100ರಿಂದ 200 ಗ್ರಾಂ ಗಿಂತಲೂ ಕಡಿಮೆ ಆಹಾರ ಕೊಟ್ಟರೆ ಸಾಕು. ಪ್ರತಿಯೊಂದು ಹಕ್ಕಿಯು 2 ಕೆ.ಜಿಗಳಿಗಿಂತಲೂ ಕಡಿಮೆ ತೂಕ ಹೊಂದಿರುತ್ತದೆ.

ಪೋಸ್ಟ್ ಆಫೀಸ್ ಸ್ಕೀಮ್! ಕೇವಲ ₹5000 ಹೂಡಿಕೆಗೆ ಕೆಲವೇ ದಿನಗಳಲ್ಲಿ ಸಿಗುತ್ತೆ ₹8.5 ಲಕ್ಷ ರೂಪಾಯಿ

ಮಾಂಸ ಹಾಗೂ ಮೊಟ್ಟೆಯ ಬೆಲೆ!

ಫೇಸೆಂಟ್ ಹಕ್ಕಿಯ ಮಾಂಸ ಹಾಗೂ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಇದೆ ಇದಕ್ಕೆ ಮುಖ್ಯವಾದ ಕಾರಣ ಈ ಹಕ್ಕಿಯ ಮಾಂಸದಲ್ಲಿ ಇರುವ ಪೌಷ್ಟಿಕಾಂಶ ಗುಣ. ಮಧುಮೇಹ, ಅಸ್ತಮಾ, ಹೃದ್ರೋಗಗಳಿಗೆ ಈ ಹಕ್ಕಿಯ ಮಾಂಸ ರಾಮಬಾಣ ಎಂದು ಸಂಶೋಧನೆಗಳ ಮೂಲಕ ತಿಳಿದು ಬಂದಿದೆ.

ಕೊಬ್ಬು, ಪ್ರೋಟೀನ್ ಕಾರ್ಬೋಹೈಡ್ರೇಟ್ಸ್, ಮೊದಲಾದ ಪೌಷ್ಟಿಕಾಂಶಗಳನ್ನು ಈ ಪುಟ್ಟ ಹಕ್ಕಿಯ ಮಾಂಸದಲ್ಲಿ ಇದೆ. ಇನ್ನು ಬೆಲೆ ನೋಡುವುದಾದರೆ ಒಂದು ಕೆಜಿ ಮಾಂಸಕ್ಕೆ 80 ರಿಂದ 100 ರೂಪಾಯಿಗಳು. ಹಾಗೂ ನೀವು ಮೊಟ್ಟೆಗಳನ್ನು ಹೋಲ್ ಸೇಲ್ ನಲ್ಲಿ ಮಾರಾಟ ಮಾಡುವುದಾದರೆ, ಒಂದು ಮೊಟ್ಟೆಗೆ 40 ರಿಂದ 50 ರೂಪಾಯಿಗಳ ವರೆಗೂ ಮಾರಾಟ ಮಾಡಬಹುದು.

ಫೇಸೆಂಟ್ ಹಕ್ಕಿಯ ಮಾಂಸ ಹಾಗೂ ಮೊಟ್ಟೆಯ ಬೇಡಿಕೆ ಕೆಲವು ಸಮಯದಲ್ಲಿ ಅತಿ ಹೆಚ್ಚು ಇರುತ್ತದೆ, ಇತ್ತೀಚಿನ ದಿನಗಳಲ್ಲಿ ಕೋಳಿ ಅಂಗಡಿಗಳಲ್ಲಿ ಈ ಹಕ್ಕಿಯ ಮಾಂಸವನ್ನು ಕೂಡ ಮಾರಾಟ ಮಾಡಲಾಗುತ್ತದೆ. ಹಾಗಾಗಿ ನೀವು ಕೇವಲ ಸಾವಿರ ಹಕ್ಕಿಗಳನ್ನು ಇಟ್ಟುಕೊಂಡು ಉದ್ಯಮ ಆರಂಭಿಸುವುದಾದರೆ ಒಂದರಿಂದ ಒಂದೂವರೆ ಲಕ್ಷ ಆದಾಯವನ್ನು ಪ್ರತಿ ತಿಂಗಳು ಗಳಿಸಬಹುದು. ಇದು ಕಾಡು ಹಕ್ಕಿ ಆಗಿರುವುದರಿಂದ ಸಾಕಾಣಿಕೆಗೆ ಪರವಾನಿಗೆ ಅಗತ್ಯ ಎಂಬುದು ನೆನಪಿರಲಿ.

pheasant bird Farming business Idea

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories