ಪೋಸ್ಟ್ ಆಫೀಸ್ ಸ್ಕೀಮ್! ಕೇವಲ ₹5000 ಹೂಡಿಕೆಗೆ ಕೆಲವೇ ದಿನಗಳಲ್ಲಿ ಸಿಗುತ್ತೆ ₹8.5 ಲಕ್ಷ ರೂಪಾಯಿ

ಆರ್ ಡಿ ಯ ಮತ್ತೊಂದು ಬೆನಿಫಿಟ್ ಅಂದ್ರೆ ನೀವು 12 ತಿಂಗಳ ವರೆಗೆ ಹಣ ಪಾವತಿ ಮಾಡಿದ್ದರೆ ನೀವು ಹಣ ಪಾವತಿ ಮಾಡಿದ್ದಕ್ಕೆ 50% ನಷ್ಟು ಸಾಲ (Loan) ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.

ನೀವು ಸಣ್ಣ ಉಳಿತಾಯ (small savings plan) ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದೀರಾ? ಹೆಚ್ಚು ನಂಬಿಕೆ ಹಾಗೂ ವಿಶ್ವಾಸಾರ್ಹ ಹೂಡಿಕೆ ಗಾಗಿ ಹುಡುಕುತ್ತಿದ್ದೀರಾ? ಹಾಗಾದ್ರೆ ಅಂಚೆ ಕಚೇರಿಯ (post office) ಈ ಯೋಜನೆಗಿಂತ ಬೆಸ್ಟ್ ಪ್ಲಾನ್ ಮತ್ತೊಂದು ಇಲ್ಲ.

ಅಂಚೆ ಕಚೇರಿ ತನ್ನ ಮರುಕಳಿಸುವ ಠೇವಣಿಯ (PORD) ಬಡ್ಡಿ ದರವನ್ನು ಹೆಚ್ಚಿಸಿದ್ದು ನೀವು ತಕ್ಷಣವೇ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು.

ಗ್ರಾಮೀಣ ವಸತಿ ಯೋಜನೆ; ಸ್ವಂತ ಮನೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಗೆ ಅರ್ಜಿ ಹಾಕಿ

ಪೋಸ್ಟ್ ಆಫೀಸ್ ಸ್ಕೀಮ್! ಕೇವಲ ₹5000 ಹೂಡಿಕೆಗೆ ಕೆಲವೇ ದಿನಗಳಲ್ಲಿ ಸಿಗುತ್ತೆ ₹8.5 ಲಕ್ಷ ರೂಪಾಯಿ - Kannada News

ಪೋಸ್ಟ್ ಆಫೀಸ್ ಸ್ಕೀಮ್ (post office scheme)

ಪೋಸ್ಟ್ ಆಫೀಸ್ ನಲ್ಲಿ ದೀರ್ಘಾವಧಿಯ ಹೂಡಿಕೆಯನ್ನು ಕೂಡ ಯಾವುದೇ ಅಡಚಣೆ ಇಲ್ಲದೆ ಅಥವಾ ಯಾವುದೇ ಹಣ ಕಳೆದುಕೊಳ್ಳುವ ಭಯ ಇಲ್ಲದೆ ಹೂಡಿಕೆ ಮಾಡಬಹುದು. 2023 ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಮರುಕಳಿಸುವ ಠೇವಣಿಯ ಮೇಲೆ ಪೋಸ್ಟ್ ಆಫೀಸ್ ಬಡ್ಡಿ ದರವನ್ನು ಹೆಚ್ಚಿಸಿದೆ. 20 ಬೇಸಿಸ್ ಪಾಯಿಂಟ್ (basis point) ಗಳಿಗೆ ಆರ್‌ಡಿ ಬಡ್ಡಿ ದರ ಹೆಚ್ಚಳವಾಗಿದೆ.

ಮರುಕಳಿಸುವ ಠೇವಣಿ ಮೇಲಿನ ಬಡ್ಡಿದರ ಹೆಚ್ಚಿಸಿದ ಪೋಸ್ಟ್ ಆಫೀಸ್! (RD interest increased)

ಮೂರು ತಿಂಗಳ ಅವಧಿಗೆ ಅಂದರೆ ಅಕ್ಟೋಬರ್ ಒಂದರಿಂದ ಡಿಸೆಂಬರ್ 31 2023ರ ವರೆಗೆ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿಯ ಬೇಸಿಸ್ ಪಾಯಿಂಟ್ ಹೆಚ್ಚಳ ಆಗುವುದರ ಬಗ್ಗೆ ಹಣಕಾಸು ಸಚಿವಾಲಯ ಮಾಹಿತಿ ನೀಡಿತ್ತು. ಆರ್ ಡಿ ಮೇಲಿನ ವಾರ್ಷಿಕ ಬಡ್ಡಿ (yearly interest) 6.5% ನಿಂದ 6.7% ಗೆ ಹೆಚ್ಚಳವಾಗಿದೆ. ಯೋಜನೆಯಲ್ಲಿ ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿ ವಿತರಣೆ ಮಾಡಲಾಗುವುದು.

ಆಸ್ತಿ ಖರೀದಿಗೂ ಇದೆ ಮಿತಿ; ಅಷ್ಟಕ್ಕೂ ಒಬ್ಬ ವ್ಯಕ್ತಿ ಎಷ್ಟು ಭೂಮಿ ಖರೀದಿ ಮಾಡಬಹುದು ಗೊತ್ತಾ?

5,000 ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ ಸಿಗುತ್ತೆ ಗೊತ್ತಾ?

Post office Schemeಸಣ್ಣ ಉಳಿತಾಯ ಮಾಡಲು ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಅಂಚೆ ಕಚೇರಿಯ ಮರುಕಳಿಸುವ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಕೆಲವು ವರ್ಷಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ.

ಪೋಸ್ಟ್ ಆಫೀಸ್ನ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಕನಿಷ್ಠ 100 ರೂಪಾಯಿಗಳಿಂದ ಆರಂಭಿಸಬಹುದು. ಇದಕ್ಕೆ ಗರಿಷ್ಠ ಮಿತಿ ಇಲ್ಲ. ನಿಮ್ಮ ಬಳಿ ಸಾಧ್ಯವಿರುವಷ್ಟು ಹಣವನ್ನು ಹೂಡಿಕೆ ಮಾಡಬಹುದು ಆದರೆ ಈ ಯೋಜನೆಯಲ್ಲಿ ಹತ್ತು ಗುಣಕಗಳ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಬೇಕು.

ಪೋಸ್ಟ್ ಆಫೀಸ್ನ ಆರ್‌ಡಿ ಯಲ್ಲಿ 5000ಗಳನ್ನು ಹೂಡಿಕೆ ಮಾಡಿದಿರಿ ಎಂದು ಭಾವಿಸಿ, ಕೇವಲ ಐದು ವರ್ಷಗಳಲ್ಲಿ 5,000 ಹೂಡಿಕೆಗೆ 3,56,830 ರೂಪಾಯಿಗಳನ್ನು ಪಡೆಯಬಹುದು. ಇದರಲ್ಲಿ ನಿಮ್ಮ ಹೂಡಿಕೆ ಮೂರು ಲಕ್ಷ ರೂಪಾಯಿ ಆಗಿದ್ದರೆ 56,830 ರೂಪಾಯಿಗಳನ್ನು ಪೋಸ್ಟ್ ಆಫೀಸ್ನ ಬಡ್ಡಿ ಆಗಿ ಸ್ವೀಕರಿಸುತ್ತೀರಿ.

ಇನ್ನು ನೀವು ಐದು ವರ್ಷಗಳ ಮೆಚ್ಚುರಿಟಿ ಸಮಯ ಮುಗಿದ ನಂತರ ಮತ್ತೆ ಐದು ವರ್ಷಗಳವರೆಗೆ ಈ ಠೇವಣಿಯನ್ನು ಮುಂದುವರಿಸಬಹುದು. ಆಗ ನಿಮಗೆ ಹತ್ತು ವರ್ಷಗಳ ಅವಧಿಗೆ 8,54,272 ರೂ. ಸಿಗುತ್ತದೆ. ಇದರಲ್ಲಿ ಬಡ್ಡಿಯಿಂದ ಸಿಗುವ ಹಣ 2,54,272 ರೂ.

ನಿರುದ್ಯೋಗಿಗಳಿಗೂ ಬ್ಯಾಂಕ್‌ಗಳಿಂದ ಹೋಮ್ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ

ಆರ್ ಡಿ ಇತರ ಪ್ರಯೋಜನಗಳು!

ಕನಿಷ್ಠ 5 ವರ್ಷಗಳ ಮರುಕಳಿಸುವ ಠೇವಣಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಬಹುದು, ಇಲ್ಲಿ ನೂರು ರೂಪಾಯಿಗಳಿಂದ ಹೂಡಿಕೆ ಆರಂಭವಾಗುತ್ತದೆ. ಒಬ್ಬ ವ್ಯಕ್ತಿ ಎಷ್ಟು ಖಾತೆಯನ್ನು ಬೇಕಾದರೂ ತೆರೆಯಲು ಅವಕಾಶವಿದೆ

ವೈಯಕ್ತಿಕ ಖಾತೆ ಮಾತ್ರವಲ್ಲದೆ ಮೂರು ಜನ ಸೇರಿ ಜಂಟಿ ಖಾತೆಯನ್ನು (joint account) ತೆರೆಯಬಹುದು ಹಾಗೂ ಅಪ್ರಪ್ತ ವಯಸ್ಸಿನ ಮಕ್ಕಳಿಗೆ ಗಾರ್ಡಿಯನ್ ಆಗಿ ನಿಮ್ಮ ಹೆಸರಿನಲ್ಲಿ ಖಾತೆ ಆರಂಭಿಸಬಹುದು.

ಲೋನ್ ಕೂಡ ಸಿಗುತ್ತದೆ – Loan

ಇನ್ನು ಒಂದು ವೇಳೆ ನೀವು ಉಳಿತಾಯ ಖಾತೆಯನ್ನು ಮುಚ್ಚಲು ಬಯಸಿದರೆ ಮೂರು ವರ್ಷಗಳ ಅವಧಿಗೆ ಪ್ರೀ ಕ್ಲೋಸರ್ (pre closure) ಅವಕಾಶ ಇರುತ್ತದೆ. ಆರ್ ಡಿ ಯ ಮತ್ತೊಂದು ಬೆನಿಫಿಟ್ ಅಂದ್ರೆ ನೀವು 12 ತಿಂಗಳ ವರೆಗೆ ಹಣ ಪಾವತಿ ಮಾಡಿದ್ದರೆ ನೀವು ಹಣ ಪಾವತಿ ಮಾಡಿದ್ದಕ್ಕೆ 50% ನಷ್ಟು ಸಾಲ (Loan) ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.

ಈ ಬ್ಯಾಂಕ್‌ಗಳು ಕಡಿಮೆ ಬಡ್ಡಿಗೆ ಕಾರ್ ಲೋನ್ ಗಳನ್ನು ನೀಡುತ್ತಿವೆ, ಜೀರೋ ಪ್ರೊಸೆಸಿಂಗ್ ಶುಲ್ಕ ಕೂಡ

ಸಾಲವನ್ನು ಕಂತುಗಳಲ್ಲಿ ಮರುಪಾವತಿ ಮಾಡಬಹುದು, ಆದರೆ ನಿಮಗೆ ಠೇವಣಿ ಇಟ್ಟರೆ ಸಿಗುವ ಬಡ್ಡಿಗಿಂತ 2% ನಷ್ಟು ಸಾಲಕ್ಕೆ (Loan) ಬಡ್ಡಿ ಜಾಸ್ತಿ ಎಂಬುದನ್ನು ನೆನಪಿಡಿ.

ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಯಾವುದೇ ರೀತಿಯ ಅಪಾಯವು ಆಗುವುದಿಲ್ಲ ನೀವು ಹೂಡಿಕೆ ಮಾಡಿದ ಹಣ ಸೇಫ್ ಆದ ರೂಪದಲ್ಲಿ ನಿಮ್ಮ ಕೈ ಸೇರುತ್ತದೆ. ಹಾಗಾಗಿ ಸಣ್ಣ ಉಳಿತಾಯ ಮಾಡಲು ಯೋಚಿಸಿದ್ದರೆ ಕೂಡಲೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ!

An investment of just 5000 will get you 8 lakh in this Post Office Scheme

Follow us On

FaceBook Google News

An investment of just 5000 will get you 8 lakh in this Post Office Scheme