ಆಸ್ತಿ ಖರೀದಿಗೂ ಇದೆ ಮಿತಿ; ಅಷ್ಟಕ್ಕೂ ಒಬ್ಬ ವ್ಯಕ್ತಿ ಎಷ್ಟು ಭೂಮಿ ಖರೀದಿ ಮಾಡಬಹುದು ಗೊತ್ತಾ?
ಕೆಲವರು ಬ್ಯಾಂಕ್ಗಳಲ್ಲಿ ಎಫ್ ಡಿ (Fixed Deposit) ಇಡುವುದು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ (Mutual Fund) ಹೂಡಿಕೆ ಮಾಡುವುದು ಹಾಗೆಯೇ ಚಿನ್ನದ ಮೇಲೆ (Gold Investment) ಹೂಡಿಕೆ ಹೀಗೆ ಹಣ ಉಳಿತಾಯ ಮಾಡುವುದಕ್ಕೆ ಬೇರೆ ಬೇರೆ ವಿಧಾನವನ್ನು ಆಯ್ತು ಕೊಡುತ್ತಾರೆ
ಸಾಮಾನ್ಯವಾಗಿ ನಮ್ಮ ಹತ್ರ ಹಣ ಇದ್ರೆ ಒಂದಷ್ಟು ಹಣವನ್ನು ಉಳಿತಾಯ ಮಾಡುವುದಕ್ಕಾಗಿ ಒಂದಲ್ಲ ಒಂದು ಕಡೆ ಹೂಡಿಕೆ (investment) ಮಾಡಲು ಬಯಸುತ್ತೇವೆ, ಕೆಲವರು ಬ್ಯಾಂಕ್ಗಳಲ್ಲಿ ಎಫ್ ಡಿ (Fixed Deposit) ಇಡುವುದು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ (Mutual Fund) ಹೂಡಿಕೆ ಮಾಡುವುದು ಹಾಗೆಯೇ ಚಿನ್ನದ ಮೇಲೆ (Gold Investment) ಹೂಡಿಕೆ ಹೀಗೆ ಹಣ ಉಳಿತಾಯ ಮಾಡುವುದಕ್ಕೆ ಬೇರೆ ಬೇರೆ ವಿಧಾನವನ್ನು ಆಯ್ತು ಕೊಡುತ್ತಾರೆ
ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮಲ್ಲಿ ಇರುವ ಹಣವನ್ನ ಭೂಮಿ ಖರೀದಿಗೆ (Land Purchase) ಅಥವಾ ಜಮೀನು ಖರೀದಿ (Property Purchase) ಮಾಡಲು ವಿನಿಯೋಗಿಸುತ್ತಾರೆ.
ಹಾಗೆ ನೋಡಿದ್ರೆ ಬೇರೆ ಎಲ್ಲಾ ಹೂಡಿಕೆಗಳಿಗಿಂತ ಜಮೀನು ಖರೀದಿ ಮಾಡುವುದು ಹೆಚ್ಚು ಲಾಭದಾಯಕವಾಗಿದೆ, ಯಾಕೆಂದರೆ ಜಮೀನಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ, ನೀವು ದೇಶದ ಯಾವುದೇ ಭಾಗದಲ್ಲಿ ಜಮೀನು ಖರೀದಿ ಮಾಡಿದರು ಅದಕ್ಕೆ ಒಂದೇ ಒಂದು ವರ್ಷಗಳಲ್ಲಿ ನೀವು ಖರೀದಿಸಿದ ಬೆಲೆ ಎರಡು ಪಟ್ಟು ಜಾಸ್ತಿ ಬೆಲೆಗೆ ಮಾರಾಟ ಮಾಡಬಹುದು, ಅಷ್ಟರಮಟ್ಟಿಗೆ ಜಮೀನಿಗೆ ಬೆಲೆ ಇದೆ.
ನಿರುದ್ಯೋಗಿಗಳಿಗೂ ಬ್ಯಾಂಕ್‌ಗಳಿಂದ ಹೋಮ್ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ
ಅದರಲ್ಲೂ ಕೃಷಿ ಜಮೀನು (Agriculture Land) ಖರೀದಿ ಮಾಡಿದ್ರೆ ಅದಕ್ಕೆ ಇನ್ನಷ್ಟು ವ್ಯಾಲ್ಯೂ ಜಾಸ್ತಿ. ಆದರೆ ನಿಮಗೆ ಗೊತ್ತಾ ನಾವು ಖರೀದಿಸುವ ಅದರದ್ದೇ ಆದ ನಿಯಮಗಳು ಇವೆ.
ನೀವೆಷ್ಟು ಭೂಮಿ ಖರೀದಿ ಮಾಡಬಹುದು ಎಂಬುದಕ್ಕೂ ಮಿತಿ ಇದೆ. ದೇಶದಲ್ಲಿ ಯಾವ ಭಾಗದಲ್ಲಿ ಎಷ್ಟು ಜಮೀನು ತೆಗೆದುಕೊಳ್ಳಬಹುದು. ಎಷ್ಟು ಮಿತಿ ಇದೆ ಎಂಬುದನ್ನು ನೋಡೋಣ.
ಈ ಕೆಲವು ರಾಜ್ಯಗಳಲ್ಲಿ ಭೂಮಿ ಖರೀದಿ ಮಾಡಲು ಇರುವ ಮಿತಿ ನೋಡುವುದಾದರೆ; ಕೇರಳದಲ್ಲಿ ಒಬ್ಬ ಅವಿವಾಹಿತ ವ್ಯಕ್ತಿ ತನ್ನ ಹೆಸರಿನಲ್ಲಿ 7.5 ಎಕರೆ ಭೂಮಿಯನ್ನು ಖರೀದಿಸಬಹುದು, ಇನ್ನು ಒಂದು ಕುಟುಂಬದಲ್ಲಿ ಐದು ಜನ ಸದಸ್ಯರಿದ್ದಾರೆ ಎಂದು ಭಾವಿಸಿದರೆ ಒಟ್ಟಾರೆಯಾಗಿ 15 ಎಕರೆ ಜಮೀನನ್ನು ಖರೀದಿಸಲು (agriculture land purchase) ಅವಕಾಶವಿದೆ.
ಈ ಬ್ಯಾಂಕ್‌ಗಳು ಕಡಿಮೆ ಬಡ್ಡಿಗೆ ಕಾರ್ ಲೋನ್ ಗಳನ್ನು ನೀಡುತ್ತಿವೆ, ಜೀರೋ ಪ್ರೊಸೆಸಿಂಗ್ ಶುಲ್ಕ ಕೂಡ
ಇನ್ನು ಮಹಾರಾಷ್ಟ್ರದಲ್ಲಿ ನೋಡುವುದಾದರೆ ಇಲ್ಲಿ ಕೃಷಿ ಭೂಮಿಯನ್ನು ರೈತರು ಮಾತ್ರ ಖರೀದಿಸಬೇಕು. ಬೇರೆಯವರು ಕೃಷಿ ಭೂಮಿಯನ್ನು ಖರೀದಿಸುವಂತಿಲ್ಲ, ಒಬ್ಬ ರೈತ 54 ಎಕರೆ ಕೃಷಿ ಭೂಮಿಯನ್ನು ಖರೀದಿಸಬಹುದಾಗಿದೆ.
ಇನ್ನು ಕರ್ನಾಟಕದಲ್ಲಿ (Karnataka) ನೋಡುವುದಾದರೆ 54 ಎಕರೆ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶವಿದೆ. ಪಶ್ಚಿಮ ಬಂಗಾಳದಲ್ಲಿ 24.5 ಎಕರೆ ಜಮೀನು ಖರೀದಿಸಬಹುದಾಗಿದ್ದರೆ ಹಿಮಾಚಲ ಪ್ರದೇಶದಲ್ಲಿ 32 ಎಕರೆ ಜಮೀನನ್ನು ಖರೀದಿಸಬಹುದು.
ಆದರೆ ಉತ್ತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿ 12.5 ಎಕರೆ ಜಮೀನನ್ನು ಮಾತ್ರ ಖರೀದಿಸಲು ಅವಕಾಶವಿದೆ. ಗುಜರಾತಿನಲ್ಲಿಯೂ (Gujarat) ಅಷ್ಟೇ.. ಕೃಷಿಯಲ್ಲಿ ತೊಡಗಿರುವವರು ಮಾತ್ರ ಕೃಷಿ ಭೂಮಿ ಖರೀದಿಸಬಹುದುದು. ಬೇರೆಯವರಿಗೆ ಖರೀದಿಸಲು ಅವಕಾಶವಿಲ್ಲ. ಆದರೆ ಕೃಷಿಯೇತರ ಭೂಮಿಯಾದರೆ ಖರೀದಿಸಬಹುದು.
ಈ ಬ್ಯಾಂಕ್ ಅಕೌಂಟ್ ಇರೋರಿಗೆ FD ಮೇಲೆ ಬಂಪರ್ ಬಡ್ಡಿ, ಅಕ್ಟೋಬರ್ 31 ರವರೆಗೆ ಅವಕಾಶ
ಕೃಷಿ ಭೂಮಿಯನ್ನು ಯಾರು ಖರೀದಿಸಲು ಸಾಧ್ಯವಿಲ್ಲ?
ಅನಿವಾಸಿ ಭಾರತೀಯರು ಕೃಷಿ ಭೂಮಿಯನ್ನು ಖರೀದಿಸುವಂತಿಲ್ಲ. ಕೃಷಿ ಯೋಗ್ಯವಾಗಿರುವ ತೋಟ ಜಮೀನುಗಳನ್ನು ಅವರು ಸ್ವಂತವಾಗಿ ಖರೀದಿಸುವಂತಿಲ್ಲ ಅದರ ಬದಲು ಬೇರೆಯವರು ಅವರಿಗೆ ಜಮೀನು ಕೊಡಬಹುದು ಅಷ್ಟೇ.
There is also a limit to the purchase of property, know how much land a person can buy