ಫೋನ್‌ಪೇನಲ್ಲಿ ಅಮೌಂಟ್ ಇಲ್ವಾ? ಪರವಾಗಿಲ್ಲ, ಫೋನ್‌ಪೇ ಮೂಲಕವೇ ಪಡೆಯಿರಿ ಲೋನ್

ಫೋನ್‌ಪೇ ಈಗಾಗಲೇ ಕಾರು ವಿಮೆ (Car Insurance), ಆರೋಗ್ಯ ವಿಮೆ (Health Insurance) ಮೊದಲಾದ ಸೌಲಭ್ಯಗಳನ್ನು ಒದಗಿಸುತ್ತಿದೆ.

ಡಿಜಿಟಲ್ ಯುಗದಲ್ಲಿ (digital life) ಇರುವ ನಾವು ಯಾವುದೇ ರೀತಿಯ ಪೇಮೆಂಟ್ ಗಾಗಿ ಯುಪಿಐ (UPI payment) ಬಳಸುವುದು ಸರ್ವೇಸಾಮಾನ್ಯವಾಗಿದೆ. ಇಂದು ಪ್ರತಿಯೊಬ್ಬರು ಕೂಡ ಯುಪಿಐ ಮೂಲಕವೇ ಎಲ್ಲ ರೀತಿಯ ಹಣಕಾಸಿನ ವ್ಯವಹಾರ ಮಾಡುತ್ತಾರೆ

ಒಂದು ಮಿತಿಯ ಆಧಾರದ ಮೇಲೆ ದಿನದ 24 ಗಂಟೆಗಳ ಕಾಲ ಕೂಡ ಮೊಬೈಲ್ ನಲ್ಲಿಯೇ ಯುಪಿಐ ಹಣ ಪಾವತಿ ಮಾಡಬಹುದು. ಇನ್ನು ಯುಪಿಐ ಪಾವತಿಗಾಗಿ ನಾವು ಬೇರೆ ಬೇರೆ ರೀತಿಯ ಹಣಕಾಸಿನ ಅಪ್ಲಿಕೇಶನ್ಗಳನ್ನು (third party applications) ಬಳಸುತ್ತೇವೆ, ಅವುಗಳಲ್ಲಿ ಅತ್ಯಂತ ಫೇಮಸ್ ಆಗಿರುವ ಹಾಗೂ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಅಪ್ಲಿಕೇಶನ್ ಅಂದ್ರೆ ಅದು ಫೋನ್‌ಪೇ.

ಹೊಸ ಎಲೆಕ್ಟ್ರಿಕ್ ಬೈಕ್ ಬಂತು, 221 ಕಿ.ಮೀ ಮೈಲೇಜ್! ಕೇವಲ 10,000ಕ್ಕೆ ಮನೆಗೆ ತನ್ನಿ

ಫೋನ್‌ಪೇನಲ್ಲಿ ಅಮೌಂಟ್ ಇಲ್ವಾ? ಪರವಾಗಿಲ್ಲ, ಫೋನ್‌ಪೇ ಮೂಲಕವೇ ಪಡೆಯಿರಿ ಲೋನ್ - Kannada News

ಫೋನ್‌ಪೇನಲ್ಲಿ ಹೆಚ್ಚುತ್ತಿದೆ ಗ್ರಾಹಕರ ಸಂಖ್ಯೆ! (Phonepe users increased)

ನಮ್ಮ ದೇಶದಲ್ಲಿ ಫೋನ್‌ಪೇ ಬಳಕೆದಾರರ ಸಂಖ್ಯೆ 50 ಕೋಟಿಗೂ ಮೀರಿದ್ದು. ಇವುಗಳಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಸುಮಾರು 3.7 ಕೋಟಿ ಬಳಕೆದಾರರು ಎನ್ನಬಹುದು. ಇದೀಗ phonpe ತನ್ನ ಗ್ರಾಹಕರನ್ನು ಇನ್ನಷ್ಟು ಸೆಳೆದುಕೊಳ್ಳಲು ಬೇರೆ ಬೇರೆ ರೀತಿಯ ಸೇವೆಗಳನ್ನು ಕೂಡ ಆರಂಭಿಸುತ್ತಿದೆ.

ವಿಮಾ ಸೇವೆ (insurance), ಸಾಲ ಸೌಲಭ್ಯ (Loan facility), ಕ್ರೆಡಿಟ್ ಕಾರ್ಡ್ (credit card) ವಿತರಣೆ ಸೇರಿದಂತೆ ಬೇರೆ ಬೇರೆ ರೀತಿಯ ಹೊಸ ಸೇವೆಗಳನ್ನು ನೀಡಲು ಫೋನ್‌ಪೇ ಮುಂದಾಗಿದೆ.

55 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್! ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ, ರಿಜಿಸ್ಟ್ರೇಷನ್ ಅಗತ್ಯವಿಲ್ಲ

ಫೋನ್‌ಪೇನಲ್ಲಿಯೇ ಪಡೆಯಬಹುದು ಸಾಲ (Get loan by phonepe)

Phonepe Loanಇನ್ನು ಮುಂದೆ phonepe ಅಪ್ಲಿಕೇಶನ್ ನಿಂದ ಹಣಕಾಸಿನ ವಹಿವಾಟು ಮಾಡುವುದು ಮಾತ್ರವಲ್ಲದೆ ಸಾಲ ಸೌಲಭ್ಯವನ್ನು (Loan) ಕೂಡ ಪಡೆದುಕೊಳ್ಳಬಹುದು, ಇದಕ್ಕಾಗಿ ಫೋನ್‌ಪೇ ಈಗಾಗಲೇ ಐದು ಬ್ಯಾಂಕ್ಗಳ ಜೊತೆಗೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ಜೊತೆಗೆ ಚರ್ಚೆ ನಡೆಸಿದೆ ಎನ್ನಲಾಗಿದೆ.

ಮುಂಬರುವ ಜನವರಿ ಒಂದರಿಂದ ಫೋನ್‌ಪೇ ಮೂಲಕ ಸಾಲ ಸೌಲಭ್ಯ ಒದಗಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಫೋನ್‌ಪೇಯಲ್ಲಿ ವಿಮಾ ಸೌಲಭ್ಯ! (Insurance)

ಫೋನ್ ಪೇ ವಾಲ್ ಮಾರ್ಟ್ (Walmart ownership) ಮಾಲಿಕತ್ವದ ಹಣಕಾಸು ವ್ಯವಹಾರಕ್ಕೆ ಮೀಸಲಾಗಿರುವ ಅಪ್ಲಿಕೇಶನ್ ಆಗಿದೆ. ಇದೀಗ ಫೋನ್ 50 ಕೋಟಿಗೂ ಹೆಚ್ಚು ಬಳಕೆದಾರರ ಭರವಸೆ ಉಳಿಸಿಕೊಳ್ಳಲು ಕೆಲವು ಪ್ರಮುಖ ಸೇವೆಗಳನ್ನು ಆರಂಭಿಸುತ್ತಿದೆ

ಅವುಗಳಲ್ಲಿ ವಿಮಾ ಸೌಲಭ್ಯ ಕೂಡ ಒಂದು. ಕೆಲವು ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಫೋನ್‌ಪೇ ಈಗಾಗಲೇ ಕಾರು ವಿಮೆ (Car Insurance), ಆರೋಗ್ಯ ವಿಮೆ (Health Insurance) ಮೊದಲಾದ ಸೌಲಭ್ಯಗಳನ್ನು ಒದಗಿಸುತ್ತಿದೆ.

ತಿಂಗಳ EMI ಮೂಲಕ ವಿಮಾ ಸೌಲಭ್ಯಕ್ಕಾಗಿ ಹಣ ಪಾವತಿ ಮಾಡಬಹುದು, ಫೋನ್ ಪೇ ಈಗಾಗಲೇ ಸುಮಾರು 56 ಲಕ್ಷ ಪಾಲಿಸಿ ಮಾರಾಟ ಮಾಡಿ ನಂಬಿಕಾರ್ಹ ಅಪ್ಲಿಕೇಶನ್ ಎನಿಸಿದೆ.

ಈ 5 ಆದಾಯ ಮೂಲಗಳಿಗೆ ಇನ್ಮುಂದೆ ಟ್ಯಾಕ್ಸ್ ಪಾವತಿ ಮಾಡೋದೇ ಬೇಡ! ಹೊಸ ರೂಲ್ಸ್

ಫೋನ್‌ಪೇಯಿಂದ ಸಿಗಲಿದೆ ಕ್ರೆಡಿಟ್ ಕಾರ್ಡ್ ಕ್ರೆಡಿಟ್ ಲೈನ್ ಸೌಲಭ್ಯ! (Get credit card by phonepe)

ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಆಕ್ಸಿಸ್ ಬ್ಯಾಂಕ್ (Axis Bank) ಜೊತೆಗೆ ಮಾತುಕತೆ ನಡೆಸಿರುವ ಫೋನ್‌ಪೇ ಸದ್ಯದಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಕೂಡ ಗ್ರಾಹಕರಿಗೆ ನೀಡಲಿದೆ. ಇದರಿಂದ ಕ್ರೆಡಿಟ್ ಲೈನ್ (credit line) ಸೌಲಭ್ಯ ಆರಂಭವಾಗಲಿದ್ದು ಹಣ ಪಾವತಿ ಮಾಡದೆ ವಸ್ತು ಖರೀದಿ ಮಾಡಲು ಸಾಧ್ಯವಿದೆ.

ಅಷ್ಟೇ ಅಲ್ಲದೆ ಷೇರ್ ಮಾರ್ಕೆಟಿಂಗ್ (share market) ನಲ್ಲಿಯೂ ಕೂಡ ಫೋನ್ ಪೇ ಪಾದಾರ್ಪಣೆ ಮಾಡಿದ್ದು, ಷೇರ್ ಮಾರ್ಕೆಟ್ ಎನ್ನುವ ಹೆಸರಿನ ಕಂಪನಿ ಕೂಡ ಆರಂಭಿಸಿತ್ತು. ಒಟ್ಟಿನಲ್ಲಿ ಮುಂಬರುವ ಜನವರಿ 2024ರ ಹೊತ್ತಿಗೆ ಫೋನ್ ಪೇ ಇಂದ ಗ್ರಾಹಕರಿಗೆ ಹಣ ವರ್ಗಾವಣೆ ಮಾಡುವುದು ಮಾತ್ರವಲ್ಲದೆ ಇನ್ನೂ ಹತ್ತು ಹಲವು ಸೌಲಭ್ಯಗಳು ಸಿಗಲಿವೆ. ಜನರ ಲೈಫ್ ಅನ್ನು ಇನ್ನಷ್ಟು ಈಜಿ (easy life) ಮಾಡಲು ಹೊರಟಿದೆ ಫೋನ್‌ಪೇ.

Phonepe App to Start Disbursing Loan Soon

Follow us On

FaceBook Google News

Phonepe App to Start Disbursing Loan Soon