PM Kisan Scheme: 19ನೇ ಕಂತಿನ ಪಿಎಂ ಕಿಸಾನ್ ಯೋಜನೆ ಅಪ್ಡೇಟ್! ಅವಿವಾಹಿತ ರೈತರ ಕಥೆ ಏನು?
PM Kisan Scheme: ತಲಾ 2000 ಗಳ ರೀತಿಯಲ್ಲಿ ಒಟ್ಟಾರೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರ ಖಾತೆಗೆ ನೇರವಾಗಿ ಹಣವನ್ನ ವರ್ಗಾವಣೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
- ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ರೈತರಿಗೆ ಆರ್ಥಿಕ ನೆರವು
- ವರ್ಷಕ್ಕೆ ₹6,000 ನೇರವಾಗಿ ರೈತರ ಖಾತೆಗೆ ಜಮಾ
- 19ನೇ ಕಂತಿನ ಹಣವನ್ನು 2025ರ ಜನವರಿಯಲ್ಲಿ ಬಿಡುಗಡೆ ನಿರೀಕ್ಷೆ
PM Kisan Scheme: ಕೇಂದ್ರ ಸರ್ಕಾರ ರೈತರ ಆರ್ಥಿಕ ಭದ್ರತೆಯನ್ನು ಗಮನಿಸಿ ಅವರಿಗಾಗಿಯೇ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರುವ ಕೆಲಸವನ್ನು ಮಾಡಿದೆ. ಮೂರು ಕಂತುಗಳಲ್ಲಿ ತಲಾ 2000 ಗಳ ರೀತಿಯಲ್ಲಿ ಒಟ್ಟಾರೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರ ಖಾತೆಗೆ ನೇರವಾಗಿ ಹಣವನ್ನ ವರ್ಗಾವಣೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
ಅವಿವಾಹಿತ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸಿಗುತ್ತಾ?
ಗೂಗಲ್ ನಲ್ಲಿ ಹಾಗೂ ಅಧಿಕಾರಿಗಳ ಬಳಿ ಇತ್ತೀಚಿನ ದಿನಗಳಲ್ಲಿ ಅವಿವಾಹಿತ ರೈತರಿಗೆ ಕೇಂದ್ರ ಸರ್ಕಾರದಿಂದ ಕೊಡ ಮಾಡುವಂತಹ ಪಿಎನ್ ಕಿಸಾನ್ ಯೋಜನೆಯ ಹಣ ಸಿಗುತ್ತಾ ಇಲ್ವಾ ಎನ್ನುವುದರ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿವೆ.
ಎಷ್ಟೇ ಭೂಮಿ ಇದ್ರೂ 2019ರ ಒಳಗೆ ಕಟ್ಟಾ ಪಾಸ್ ಬುಕ್ ಹೊಂದಿರುವಂತಹ ರೈತರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಲಾಭವನ್ನು ಪಡೆದುಕೊಳ್ಳುವ ಅವಕಾಶವಿದ್ದು, 2019 ರ ನಂತರದ ರೈತರಿಗೆ ಈ ಯೋಜನೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ.
ಈ ನಿಯಮದ ಅಡಿಯಲ್ಲಿ ವಿವಾಹಿತ ಹಾಗೂ ಅವಿವಾಹಿತ ರೈತರೇ ಆಗಿರಲಿ ಅವರಿಗೆ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗುವಂತಹ ಅವಕಾಶವಿದೆ. ಒಂದು ಕುಟುಂಬದಲ್ಲಿ ಕೇವಲ ಒಬ್ಬರಿಗೆ ಮಾತ್ರ ಈ ಯೋಜನೆಯ ಧನ ಸಹಾಯವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ವಿಶೇಷವಾಗಿ ಸಣ್ಣ ಹಾಗೂ ಅತಿ ಸಣ್ಣ ವರ್ಗದ ರೈತರಿಗೆ ವಾರ್ಷಿಕವಾಗಿ ದೊರಕುವಂತಹ ಈ 6 ಸಾವಿರ ರೂಪಾಯಿಗಳ ಈ ಸಹಾಯನಿಧಿ ಸಾಕಷ್ಟು ವಿಧದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಸಹಾಯ ಮಾಡಿಕೊಂಡು ಬಂದಿದೆ.
ನಿಮ್ಮ ಹೆಂಡತಿ ಹೆಸರಲ್ಲಿ ಇಲ್ಲಿ ಹೂಡಿಕೆ ಮಾಡಿ ಸಾಕು, ಒನ್ ಟು ಡಬಲ್ ಆದಾಯ
19ನೇ ಕಂತಿನ ಹಣ ಯಾವಾಗ ಸಿಗುತ್ತೆ?
ನಿರೀಕ್ಷೆಯ ಪ್ರಕಾರ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು 2025 ರ ಮೊದಲ ವಾರದಲ್ಲಿ ಪಡೆದುಕೊಳ್ಳುವಂತಹ ನಿರೀಕ್ಷೆಯಿದ್ದು ಇದರ ಬಗ್ಗೆ ಸರ್ಕಾರ ಯಾವುದೇ ರೀತಿಯಲ್ಲಿ ಅಧಿಕೃತವಾದ ಮಾಹಿತಿಯನ್ನು ಹೊರಹಾಕಿಲ್ಲ. ಈ ಹಿಂದಿನ ಕಂತನ್ನು ಅಕ್ಟೋಬರ್ 5 ನೇ ತಾರೀಖಿನಂದು ಬಿಡುಗಡೆ ಮಾಡಲಾಗಿತ್ತು.
ಇದಕ್ಕಾಗಿ ನಿಮ್ಮ ಖಾತೆಯ ಇ ಕೆವೈಸಿ ಮಾಡಿಕೊಳ್ಳುವುದು ಅತ್ಯಂತ ಕಡ್ಡಾಯವಾಗಿದೆ. ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಿಕೊಳ್ಳಬೇಕು. ಹಾಗೂ ನಿಮ್ಮ ಭೂಮಿಯ ಪರಿಶೀಲನೆಯ ಸರ್ಟಿಫಿಕೇಟ್ ಅನ್ನು ಕೂಡ ಸಲ್ಲಿಕೆ ಮಾಡಬೇಕಾಗಿದೆ.
* ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಯಾವಾಗ ಸಿಗುತ್ತೆ?
* ಅವಿವಾಹಿತರ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ಸಿಗುತ್ತಾ?
* ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ರೈತರ ಅರ್ಹತೆಗಳು.
PM Kisan Scheme, Financial Aid for Farmers by the Central Government