ರೈತರಿಗೆ ಡಬಲ್ ಧಮಾಕಾ! ಇಂತಹ ರೈತರ ಬ್ಯಾಂಕ್ ಖಾತೆಗೆ 9,500 ರೂಪಾಯಿ ಜಮಾ
PM Kisan Yojana : ದೇಶದಾದ್ಯಂತ ರೈತರ ಜೊತೆಗೆ, ಕರ್ನಾಟಕ ರೈತರೂ ಸಹ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತುಗಾಗಿ ಕಾಯುತ್ತಿದ್ದಾರೆ.
PM Kisan Yojana : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಇದನ್ನು ಪಿಎಂ ಕಿಸಾನ್ ಯೋಜನೆ ಎಂದೂ ಕರೆಯುತ್ತಾರೆ. ಇದು 2019 ರಲ್ಲಿ ಭಾರತ ಸರ್ಕಾರವು ಪ್ರಾರಂಭಿಸಿದ ಯೋಜನೆಯಾಗಿದೆ.
ದೇಶದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವುದು, ಕೃಷಿ ಚಟುವಟಿಕೆಗಳನ್ನು ಮುಂದುವರಿಸುವುದು ಮತ್ತು ಅವರ ಜೀವನೋಪಾಯವನ್ನು ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ವಾ? ಉಚಿತ ನವೀಕರಣಕ್ಕೆ ಇದುವೇ ಲಾಸ್ಟ್ ಡೇಟ್
ದೇಶದಾದ್ಯಂತ ರೈತರ ಜೊತೆಗೆ, ಕರ್ನಾಟಕ ರೈತರೂ ಸಹ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತುಗಾಗಿ ಕಾಯುತ್ತಿದ್ದಾರೆ. ಹಿಂದಿನ ಭಾಗ ಅಂದರೆ 16ನೇ ಕಂತಿನ ಫೆಬ್ರವರಿ 2024 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಯೋಜನೆಯ ಕಂತನ್ನು ಪ್ರತಿ 4 ತಿಂಗಳಿಗೊಮ್ಮೆ ರೈತರ ಖಾತೆಗೆ (Bank Account) ನೇರವಾಗಿ ಕಳುಹಿಸಲಾಗುತ್ತದೆ.
ಅಂದರೆ ಪ್ರತಿ ಕಂತಿಗೆ ರೂ.2 ಸಾವಿರದಂತೆ ಮೂರು ಕಂತುಗಳಲ್ಲಿ ರೂ.6 ಸಾವಿರ ರೈತರ ಖಾತೆಗೆ ಜಮೆಯಾಗಲಿದೆ. ಪಿಎಂ ಕಿಸಾನ್ ಹಣದ 17 ನೇ ಕಂತು ಮೇ 2024 ರ ಅಂತ್ಯದ ವೇಳೆಗೆ ಅಥವಾ ಜೂನ್ 2024 ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕಡಿಮೆ ಬಂಡವಾಳದಲ್ಲಿ ಮಾಡಿ ವ್ಯಾಪಾರ! ನಷ್ಟವೇ ಇಲ್ಲ; ಪ್ರತಿ ತಿಂಗಳು 30 ಸಾವಿರ ಆದಾಯ
ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಇದುವರೆಗೆ 16 ಕಂತುಗಳು ಬಿಡುಗಡೆಯಾಗಿವೆ. 17 ನೇ ಕಂತಿಗಾಗಿ ಇ-ಕೆವೈಸಿ ಪಡೆಯುವುದು ಅವಶ್ಯಕ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರಕಾರ ರೈತರಿಗೆ ವಾರ್ಷಿಕ 6000 ರೂ. ಬಿಡುಗಡೆ ಮಾಡುತ್ತದೆ.
ಈ ನಡುವೆ ರೈತರಿಗೆ ಏಕಕಾಲದಲ್ಲಿ ಹೂಡಿಕೆ ಸಹಾಯದಡಿ 9500 ರೂ. ಜಮಾ ಆಗಲಿದೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ pmkisan.gov.in ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ರೈತರು ಮುಂಬರುವ ಕಂತಿನ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲ! ಇಲ್ಲಿದೆ ಡೀಟೇಲ್ಸ್
ಇದಲ್ಲದೆ, ಹೆಚ್ಚಿನ ಮಾಹಿತಿಯನ್ನು ಕೃಷಿ ಸಚಿವಾಲಯದ ವೆಬ್ಸೈಟ್, ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಹಾಯವಾಣಿ ಸಂಖ್ಯೆ 1800-945-8955 ನಿಂದ ಪಡೆಯಬಹುದು. ಈ KYC ಗೆ ಒಳಗಾಗದೇ ಇರುವವರು ಈ ಬಾರಿ 17 ನೇ ಕಂತು ಪಡೆಯುವ ಮುಂಚೆ ಮಾಡಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಬೇಕು.
PM Kisan Yojana New Update on Deposit of Money to Bank Account