ಆಧಾರ್ ಕಾರ್ಡ್ ಇದ್ರೆ ಸಾಕು! ಸಣ್ಣ ವ್ಯಾಪಾರಿಗಳಿಗೆ ಸಿಗುತ್ತೆ ₹90,000 ವರೆಗೆ ಸಾಲ ಸೌಲಭ್ಯ
ಕೇವಲ ಆಧಾರ್ ಕಾರ್ಡ್ ಸಾಕು ಎಂಬ ಸೌಲಭ್ಯದಿಂದ ಸರಕಾರವು ಸ್ವನಿಧಿ ಯೋಜನೆಯಲ್ಲಿ ಸಣ್ಣ ವ್ಯಾಪಾರಿಗಳಿಗೆ ₹90,000 ವರೆಗೆ ಹಂತ ಹಂತವಾಗಿ ಸಾಲ ನೀಡುತ್ತಿದೆ. ಗ್ಯಾರಂಟಿ ಬೇಡ, ಪ್ರಕ್ರಿಯೆ ಸುಲಭ.

Loan Scheme: ಕಳೆದ ಕೆಲವು ವರ್ಷಗಳಲ್ಲಿ ಸಣ್ಣ ವ್ಯಾಪಾರಿಗಳು ಎದುರಿಸಿದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಆರಂಭಿಸಿದ ಪಿಎಂ ಸ್ವನಿಧಿ ಯೋಜನೆ ಮತ್ತಷ್ಟು ಬಲ ಪಡೆಯುತ್ತಿದೆ. ವಿಶೇಷವಾಗಿ ಕೊರೋನಾ ಸಮಯದಲ್ಲಿ ಜೀವನೋಪಾಯ ಕಳೆದುಕೊಂಡ ರಸ್ತೆ ಬದಿ ವ್ಯಾಪಾರಿಗಳಿಗೆ ಈ ಯೋಜನೆ ಜೀವದಾನವಾಗಿ ಪರಿಣಮಿಸಿದೆ.
ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಯಾವುದೇ ಪಾವತಿ ಗ್ಯಾರಂಟಿ ಬೇಡ. ಕೇವಲ ಆಧಾರ್ ಕಾರ್ಡ್ ಸಾಕು; ದೊಡ್ಡ ದೊಡ್ಡ ದಾಖಲೆಗಳ ಜಂಜಾಟವೂ ಇಲ್ಲ. ಬ್ಯಾಂಕ್ನಲ್ಲಿ ನಿಮ್ಮ ಅರ್ಜಿ ಪರಿಶೀಲನೆಯಾದ ನಂತರ ನೇರವಾಗಿ ಹಣವನ್ನು ನಿಮ್ಮ ಖಾತೆಗೆ (Bank Account) ಜಮೆ ಮಾಡಲಾಗುತ್ತದೆ. EMI ಮೂಲಕ ಪಾವತಿ ಮಾಡುವ ಅವಕಾಶವೂ ಇದೆ.
ಸರಕಾರ ಈ ಯೋಜನೆಯನ್ನು 2030ರವರೆಗೆ ವಿಸ್ತರಿಸಿದ ಬಳಿಕ, ಸಣ್ಣ ವ್ಯವಹಾರಗಳಿಗೆ ದೊರೆಯುವ ಸಹಾಯದ ವ್ಯಾಪ್ತಿ ಕೂಡ ಹೆಚ್ಚಿದೆ. ಈಗ ಒಟ್ಟು ₹90,000 ಸಾಲ ಮಂಜೂರು ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ₹15,000, ನಂತರ ₹25,000 ಹಾಗೂ ಅಂತಿಮವಾಗಿ ₹50,000 ಮಂಜೂರಾಗುತ್ತದೆ. ಪ್ರತಿಯೊಂದು ಹಂತದ ಸಾಲವನ್ನು (Bank Loan) ಸಮಯಕ್ಕೆ ಸರಿಯಾಗಿ ಪಾವತಿಸಿದಾಗ ಮುಂದಿನ ಹಂತಕ್ಕೆ ಅರ್ಹತೆ ಸಿಗುತ್ತದೆ.
ಇದನ್ನೂ ಓದಿ: ಮಹಿಳೆಯ ಹೆಸರಿನಲ್ಲಿ ಕಾರ್ ಲೋನ್ ತೆಗೆದುಕೊಂಡರೆ ಭಾರೀ ಬೆನಿಫಿಟ್! ಡಬಲ್ ಧಮಾಕ
ಈ ಯೋಜನೆಗೆ ಅರ್ಜಿ ಹಾಕುವ ಪ್ರಕ್ರಿಯೆಯೂ ಸುಲಭ. ನೀವು ಯಾವುದೇ ಸರ್ಕಾರಿ ಬ್ಯಾಂಕ್ಗೆ ಹೋಗಿ PM Swanidhi ಫಾರ್ಮ್ ಪಡೆದು, ವಿವರಗಳನ್ನು ಭರ್ತಿ ಮಾಡಿ, ಅದರೊಂದಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಸೇರಿಸಿದರೆ ಸಾಕು. ಬ್ಯಾಂಕ್ ಪರಿಶೀಲನೆ ಮಾಡಿದ ಬಳಿಕ ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತದೆ.
ಸರ್ಕಾರದ ಇತ್ತೀಚಿನ ಅಂಕಿಅಂಶ ವೀಕ್ಷಿಸಿದರೆ, ಈ ಯೋಜನೆ ದೇಶದ ಲಕ್ಷಾಂತರ ಜನರಿಗೆ ನೆರವಾಗಿದೆ ಎಂಬುದು ಸ್ಪಷ್ಟ. 2025 ಜುಲೈ 30ರವರೆಗೆ 6.8 ಮಿಲಿಯನ್ ಜನರು ಇದರಿಂದ ಪ್ರಯೋಜನ ಪಡೆದಿದ್ದು, ₹13,797 ಕೋಟಿಗೂ ಹೆಚ್ಚು ಮೊತ್ತ ವಿತರಿಸಲಾಗಿದೆ. ಇದೀಗ ಸಾಲ ಮಿತಿ ಹೆಚ್ಚಳದಿಂದ 11.5 ಮಿಲಿಯನ್ ರಸ್ತೆ ಬದಿ ವ್ಯಾಪಾರಿಗಳಿಗೆ ಸಹಾಯ ಲಭ್ಯವಾಗುವ ನಿರೀಕ್ಷೆ ಇದೆ.
PM Svanidhi Scheme Offers Loan Without Guarantee



