ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬಡ್ಡಿಯೇ 5 ಲಕ್ಷ ಸಿಗುತ್ತೆ! ಖಾತೆ ತೆರೆಯಲು ಮುಗಿಬಿದ್ದ ಜನ
ಪೋಸ್ಟ್ ಆಫೀಸ್ನ ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಹೂಡಿಕೆಯಲ್ಲಿ ಸರ್ಕಾರದ ಭರವಸೆ, 7.7% ಸ್ಥಿರ ಬಡ್ಡಿದರ, ಐದು ವರ್ಷ ಬಳಿಕ ಲಕ್ಷಾಂತರ ಲಾಭ ದೊರಕುವ ಸುರಕ್ಷಿತ ಆಯ್ಕೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
Image Source: Via TV9 Telugu
Post Office Scheme: ಪೋಸ್ಟ್ ಆಫೀಸ್ ನೀಡುವ ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) ಮತ್ತೆ ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಬಡ್ಡಿದರ ಸ್ಥಿರವಾಗಿರುವುದರಿಂದ ಹಾಗೂ ಸರ್ಕಾರವೇ ಗ್ಯಾರಂಟಿ ನೀಡಿರುವುದರಿಂದ, ಸುರಕ್ಷಿತ ಹೂಡಿಕೆಯನ್ನು ಬಯಸುವವರಿಗೆ ಇದು ಸೂಕ್ತ ಆಯ್ಕೆ ಎಂದು ತಜ್ಞರು ಸೂಚಿಸುತ್ತಿದ್ದಾರೆ.
ಐದು ವರ್ಷದ ಲಾಕ್–ಇನ್ ಅವಧಿ ಇರುವ ಈ ಯೋಜನೆ, ಮಧ್ಯಂತರದಲ್ಲಿ ಹಣವನ್ನು ಹಿಂತೆಗೆದುಕೊಳ್ಳುವವರಿಗೆ ಅನಾನುಕೂಲವಾಗಬಹುದು. ಐದು ವರ್ಷ ಪೂರ್ಣವಾದರೆ ಮಾತ್ರ ಬಡ್ಡಿಯೊಂದಿಗೆ ಸಂಪೂರ್ಣ ಮೊತ್ತ ನಿಮ್ಮ ಖಾತೆಗೆ ಜಮೆಯಾಗುತ್ತದೆ. ಅವಧಿ ಮುಗಿಯುವ ಮುನ್ನ ಹಣ ಬೇಕಾದರೆ, ಕೇವಲ ಮೂಲಧನವನ್ನೇ ಪಡೆಯುವ ಅವಕಾಶ ಇದೆ.
ಇದನ್ನೂ ಓದಿ: ಜಿಯೋ ಪ್ರೀಪೇಯ್ಡ್ ಪ್ಲಾನ್ಗಳು, 3GB ಡೇಟಾ + ಅನ್ಲಿಮಿಟೆಡ್ ಕಾಲಿಂಗ್! ಮಸ್ತ್ ಆಫರ್ಗಳು ಉಚಿತ
ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ 7.7% ವಾರ್ಷಿಕ ಚಕ್ರೀಯ ಬಡ್ಡಿದರ. ಇದರ ಪರಿಣಾಮವಾಗಿ ಒಂದು ಸಾರಿ ಮಾಡಿದ ಹೂಡಿಕೆ ಐದು ವರ್ಷಗಳ ನಂತರ ಲಕ್ಷಾಂತರ ರೂಪಾಯಿಗಳಾಗಿ ಮರಳುತ್ತದೆ. ಬಡ್ಡಿ ಸಂಪೂರ್ಣವಾಗಿ ಮ್ಯಾಚುರಿಟಿ ಸಮಯದಲ್ಲೇ ಲಭ್ಯವಾಗುತ್ತದೆ.
ಹೂಡಿಕೆದಾರರು 11,00,000 ರೂಪಾಯಿ NSCಗೆ ಹಾಕಿದರೆ, ಐದು ವರ್ಷಗಳ ಬಳಿಕ ಸುಮಾರು 15,93,937 ರೂ. ವರೆಗೆ ಮೊತ್ತ ವಾಪಸು ಸಿಗುತ್ತದೆ. ಇದರಲ್ಲಿ ಸುಮಾರು 4,93,937 ರೂ. ಸಂಪೂರ್ಣ ಬಡ್ಡಿ ರೂಪದಲ್ಲೇ ಲಾಭವಾಗುತ್ತದೆ. ಅಂದರೆ ಯಾವುದೇ ರಿಸ್ಕ್ ಇಲ್ಲದೆ 5 ಲಕ್ಷದಷ್ಟು ಲಾಭ.
NSCಗೆ ಕನಿಷ್ಠ 1,000 ರೂ. ಮೊದಲ ಹೂಡಿಕೆ ಸಾಕು. ಗರಿಷ್ಠ ಮಿತಿ ನಿಗದಿಪಡಿಸಲಾಗಿಲ್ಲ. ಇದಲ್ಲದೇ, ಈ ಯೋಜನೆ ಆದಾಯ ತೆರಿಗೆ ಕಾಯ್ದೆಯ 80C ಸೆಕ್ಷನ್ ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂ.ವರೆಗೆ ತೆರಿಗೆ ಸವಲತ್ತು ನೀಡುತ್ತದೆ. ಅದರಿಂದ ಹೂಡಿಕೆ ಮತ್ತು ತೆರಿಗೆ ಉಳಿತಾಯ ಎರಡೂ ಒಂದೇ ಯೋಜನೆಯಲ್ಲಿ ಸಾಧ್ಯವಾಗುತ್ತದೆ.




