ಪ್ರತಿ ತಿಂಗಳು 20 ಸಾವಿರ ಗಳಿಸಬಹುದಾದ ಪೋಸ್ಟ್ ಆಫೀಸ್ ಸ್ಕೀಮ್ ಇದು
- SCSS ಯೋಜನೆಯಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ ಸಿಗುತ್ತೆ 20,000 ರೂಪಾಯಿಗಳು
- ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ವಾರ್ಷಿಕ 8.2% ಬಡ್ಡಿ
- ಅಂಚೆ ಕಚೇರಿಗೆ ಭೇಟಿ ನೀಡಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿ
Post Office Scheme : ಈಗೇನೋ ಸಣ್ಣ ವಯಸ್ಸು ದುಡಿಯುತ್ತೇವೆ, ಸುಲಭವಾಗಿ ಖರ್ಚು ಮಾಡುತ್ತೇವೆ. ಆದರೆ ವಯಸ್ಸಾದ ಮೇಲೆ, ವೃದ್ಧಾಪ್ಯ ನಮ್ಮನ್ನ ಆವರಿಸಿದ ಮೇಲೆ ಆರ್ಥಿಕವಾಗಿ ಅವಲಂಬಿತರಾಗಬೇಕಾಗುತ್ತದೆ.
ಹೌದು, ದುಡಿಯುವ ವಯಸ್ಸಿನಲ್ಲಿ ಮುತುವರ್ಜಿಯಿಂದ ಹಣ ಉಳಿತಾಯ (Savings) ಮಾಡದೇ ಇದ್ದರೆ ವಯಸ್ಸಾದ ನಂತರ ಇನ್ನೊಬ್ಬರ ಮುಂದೆ ಹಣಕ್ಕಾಗಿ ಕೈ ಚಾಚುವ ಪರಿಸ್ಥಿತಿ ಬರುತ್ತದೆ. ಹೀಗಾಗಿ ಕೈಯಲ್ಲಿ ಹಣ ಇರುವಾಗ ಅದನ್ನು ಉತ್ತಮ ಆದಾಯ ಬರುವ ಕಡೆ ಹೂಡಿಕೆ ಮಾಡುವುದು ಒಳ್ಳೆಯದು.
ಹಿರಿಯ ನಾಗರಿಕರಿಗಾಗಿಯೇ ಅಂಚೆ ಕಚೇರಿಯ ಈ ಸ್ಕೀಮ್ ಬಿಡುಗಡೆ!
ಹಿರಿಯ ನಾಗರಿಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವನ ನಡೆಸಲು ಭಾರತೀಯ ಅಂಚೆ ಕಚೇರಿ ಉತ್ತಮ ಯೋಜನೆಯೊಂದನ್ನು ಪರಿಚಯಿಸಿದೆ. ಇಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ ಅತಿ ಉತ್ತಮ ಬಡ್ಡಿ ದರದಲ್ಲಿ ಉತ್ತಮ ಆದಾಯವನ್ನು ಗಳಿಸಿಕೊಳ್ಳಬಹುದು.
ಒಂದು ವೇಳೆ ದುಡಿಯುವ ವಯಸ್ಸಿನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದೇ ಇದ್ದರೂ ಹಿರಿಯ ನಾಗರಿಕರಾದ ನಂತರ ಅಥವಾ ನಿವೃತ್ತಿ ಹೊಂದಿದ ನಂತರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಪ್ರಧಾನಿ ಮೋದಿ ಅವರಿಗೆ ಯೂಟ್ಯೂಬ್ ಚಾನೆಲ್ ನಿಂದ ಎಷ್ಟು ಹಣ ಬರುತ್ತೆ ಗೊತ್ತಾ?
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS):
60 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಒಂಟಿಯಾಗಿ ಅಥವಾ ತನ್ನ ಸಂಗಾತಿಯ ಜೊತೆಗೆ ಜಂಟಿಯಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಕೇವಲ ಒಂದು ಸಾವಿರ ರೂಪಾಯಿಗಳಿಂದ 30 ಲಕ್ಷ ರೂಪಾಯಿಗಳವರೆಗೆ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಹಿರಿಯ ನಾಗರಿಕರಿಗೆ 8.2% ದರದಲ್ಲಿ ಉಳಿತಾಯ ಯೋಜನೆಯನ್ನು ಪರಿಚಯಿಸಲಾಗಿದೆ. ಇನ್ನು ಆದಾಯ ತೆರಿಗೆ 80 c ಅಡಿಯಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿ ಕೂಡ ನೀಡಲಾಗುವುದು.
ಯೋಜನೆ ಮುಕ್ತಾಯವಾಗುವುದು ಯಾವಾಗ!
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಐದು ವರ್ಷಗಳ ಅವಧಿಯ ಯೋಜನೆಯಾಗಿದೆ. ಹೂಡಿಕೆದಾರರು ಅವರಿಗಿಂತ ಮೊದಲು ಖಾತೆಯನ್ನು ಕ್ಲೋಸ್ ಮಾಡಿದ್ರೆ ದಂಡಪಾವತಿಸಬೇಕಾಗುತ್ತದೆ. ಇನ್ನು ರಕ್ಷಣಾ ವಿಭಾಗದ ನಿವೃತ್ತ ಉದ್ಯೋಗಿಗಳು ಹಾಗೂ ವಿ ಆರ್ ಎಸ್ ತೆಗೆದುಕೊಳ್ಳುವವರಿಗೆ ವಿಶೇಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಹಿರಿಯ ನಾಗರಿಕರ ಉಳಿತಾಯ ಖಾತೆಯನ್ನು ಆರಂಭಿಸಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ಫಾರಂ ಭರ್ತಿ ಮಾಡಿ, ಅಗತ್ಯ ಇರುವ ದಾಖಲೆಗಳನ್ನು ನೀಡಿ ಖಾತೆಯನ್ನು ಆರಂಭಿಸಬಹುದು ಈ ಯೋಜನೆಯ ಬಗ್ಗೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಆನ್ಲೈನ್ ನಲ್ಲಿ ಭಾರತೀಯ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
post office scheme where you can earn 20 thousand every month