ಇನ್ಮುಂದೆ ಯುಪಿಐಗೆ ಬ್ಯಾಂಕ್ ಖಾತೆ ಅಗತ್ಯವಿಲ್ಲ! ಆರ್‌ಬಿಐನ ಹೊಸ ನಿಯಮ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿಯಿಂದ ಜೂನಿಯೋ ಪೇಮೆಂಟ್ಸ್ ಸಂಸ್ಥೆ ಮಕ್ಕಳಿಗಾಗಿ ಬ್ಯಾಂಕ್ ಖಾತೆ ಇಲ್ಲದೇ UPI ವಾಲೆಟ್‌ ಸೇವೆ ಆರಂಭಿಸಿದೆ. ಮಕ್ಕಳಿಗಾಗಿ ವಿಶೇಷ ವಾಲೆಟ್‌ ಸೇವೆ ಆರಂಭವಾಗಿದೆ.

UPI Payment: ಭಾರತದಲ್ಲಿ ಡಿಜಿಟಲ್ ಪಾವತಿಗಳ ಬಳಕೆ ದಿನೇದಿನೇ ಹೆಚ್ಚುತ್ತಿದೆ. ಈಗ ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮೌಲ್ಸ್‌ಗಳವರೆಗೂ ಎಲ್ಲೆಡೆ QR ಕೋಡ್‌ ಪಾವತಿಗಳು ಸಾಮಾನ್ಯವಾಗಿವೆ. ಆದರೆ ಇದುವರೆಗೆ ಇಂತಹ ಪಾವತಿಗೆ ಬ್ಯಾಂಕ್ ಖಾತೆ ಅಗತ್ಯವಿತ್ತು. ಈ ಸವಾಲನ್ನು ಗುರುತಿಸಿದ RBI ಈಗ ಹೊಸ ಮಾರ್ಗವನ್ನು ತೆರೆಯುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿಯಿಂದ Junio Payments Private Limited ಹೊಸ ಡಿಜಿಟಲ್ ವಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಇದರ ಮೂಲಕ ಬ್ಯಾಂಕ್ ಖಾತೆ ಇಲ್ಲದ ಮಕ್ಕಳು ಸಹ ಸುಲಭವಾಗಿ UPI ಮೂಲಕ ಪಾವತಿಗಳನ್ನು ಮಾಡಬಹುದು.

ಇದನ್ನೂ ಓದಿ: ಕೇವಲ 26 ರೂಪಾಯಿಗೆ ಹೊಸ ಜಿಯೋ ಡೇಟಾ ಪ್ಲಾನ್‌! ಗ್ರಾಹಕರಿಗೆ ಭರ್ಜರಿ ಆಫರ್

ಈ ಯೋಜನೆಯ ಮುಖ್ಯ ಉದ್ದೇಶ ಯುವಜನರಲ್ಲಿ ಆರ್ಥಿಕ ಅಕ್ಷರಾಸ್ಯತೆ ಹೆಚ್ಚಿಸುವುದು ಹಾಗೂ ಹಣದ ಹೊಣೆಗಾರಿಕೆಯನ್ನು ಕಲಿಸುವುದು.

ಈ ಸೇವೆಯನ್ನು ಅಂಕಿತ್ ಗೇರಾ ಮತ್ತು ಶಂಕರ್ ನಾಥ್ ಜೂನಿಯೋ ಆಪ್ ಮೂಲಕ ಪ್ರಾರಂಭಿಸಿದ್ದಾರೆ. ಪೋಷಕರು ತಮ್ಮ ಮಕ್ಕಳ ಖರ್ಚಿನ ಮಿತಿಯನ್ನು ನಿಗದಿಪಡಿಸಲು ಹಾಗೂ ಪ್ರತಿಯೊಂದು ವ್ಯವಹಾರವನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಈ ಆಪ್‌ನಲ್ಲಿ ‘ಟಾಸ್ಕ್ ರಿವಾರ್ಡ್‌ಗಳು’, ‘ಸೆವಿಂಗ್ ಗೋಲ್ಸ್’ ಮುಂತಾದ ಆಕರ್ಷಕ ವೈಶಿಷ್ಟ್ಯಗಳಿವೆ.

ಇದನ್ನೂ ಓದಿ: ಜನಧನ್ ಯೋಜನೆಯಡಿ ₹10,000 ಹಣಕಾಸು ನೆರವು! ಸರ್ಕಾರದ ಹೊಸ ಘೋಷಣೆ

ಇದರಲ್ಲಿ ಪ್ರಮುಖವಾದದ್ದು, ಬ್ಯಾಂಕ್ ಖಾತೆ ಇಲ್ಲದೇ ಕೂಡ ಮಕ್ಕಳು QR ಕೋಡ್ ಸ್ಕ್ಯಾನ್ ಮಾಡಿ ಪಾವತಿಗಳನ್ನು ಮಾಡಬಹುದು. ಈ ವೈಶಿಷ್ಟ್ಯವನ್ನು NPCI UPI Circle Initiative ಗೆ ಲಿಂಕ್ ಮಾಡಲಾಗಿದೆ. ಪೋಷಕರು ತಮ್ಮ UPI ಖಾತೆಯನ್ನು ಮಕ್ಕಳ ವಾಲೆಟ್‌ಗೆ ಸಂಪರ್ಕಿಸಿ ಹಣ ವರ್ಗಾವಣೆ ಮಾಡಬಹುದು.

ಪ್ರಸ್ತುತ ಎರಡು ಮಿಲಿಯನ್‌ಗಿಂತ ಹೆಚ್ಚು ಮಕ್ಕಳು ಜೂನಿಯೋ ಪೇಮೆಂಟ್ಸ್ ಆಪ್ ಅನ್ನು ಬಳಸುತ್ತಿದ್ದಾರೆ. ಈ ವ್ಯವಸ್ಥೆ ಮಕ್ಕಳಲ್ಲಿ ಹಣದ ನಿರ್ವಹಣೆಯ ಅರಿವು ಬೆಳೆಸುವ ಹೊಸ ಹೆಜ್ಜೆಯಾಗಿದೆ.

RBI Allows UPI Payments Without Bank Account

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories