ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ ಇಎಂಐ ಕಟ್ಟುತ್ತಿರುವವರಿಗೆ ಗುಡ್ ನ್ಯೂಸ್
ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಮುಖ ಘೋಷಣೆ ಹೊರಡಿಸಿದೆ. ಸುಮಾರು ಐದು ವರ್ಷಗಳ ನಂತರ ಮೊದಲ ಬಾರಿಗೆ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.
- ರೆಪೋ ದರವು 6.50% ನಿಂದ 6.25% ಕ್ಕೆ ಇಳಿಮುಖ.
- ಸಾಲದ ಬಡ್ಡಿದರ ಕಡಿತದಿಂದ ಸಾಲಗಾರರಿಗೆ ತಗ್ಗಿದ ಆರ್ಥಿಕ ಭಾರ.
- ಮಾನಿಟರಿ ಪಾಲಿಸಿ ಸಮಿತಿಯ 5-1 ತೀರ್ಮಾನದ ಮೂಲಕ ಈ ನಿರ್ಧಾರ.
ಆರ್‌ಬಿಐ ಬಹುಕಾಲದ ಬಳಿಕ ರೆಪೋ ದರವನ್ನು ಕಡಿತಗೊಳಿಸುವ ಮೂಲಕ ಸಾಲಗಾರರಿಗೆ ಸ್ವಲ್ಪ ನೆಮ್ಮದಿಯ ಸಂದೇಶವನ್ನು ನೀಡಿದೆ. ದಿಟ್ಟ ಬಜೆಟ್ ಘೋಷಣೆಗಳ ಬೆನ್ನಲ್ಲೇ, ಕೇಂದ್ರ ಬ್ಯಾಂಕ್ ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಪ್ರಗತಿಯನ್ನು ಮನನ ಮಾಡಿಕೊಳ್ಳುತ್ತಾ ಈ ನಿರ್ಧಾರ ಕೈಗೊಂಡಿದೆ.
ಚಿನ್ನದ ಮೇಲೆ 7.50 ಲಕ್ಷ ರೂ.ಗಳವರೆಗೆ ಸಾಲ, ಸಿಗಲಿದೆ ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್
ಸಾಲಗಾರರಿಗೆ ಗುಡ್ ನ್ಯೂಸ್!
ರೆಪೋ ದರವು 6.50% ನಿಂದ 6.25% ಗೆ ಇಳಿದಿದೆ, ಅಂದರೆ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನಿಂದ ಕಡಿಮೆ ಬಡ್ಡಿದರದಲ್ಲಿ ಹಣವನ್ನು ಪಡೆಯಬಹುದಾಗಿದೆ. ಇದರಿಂದ ಪರ್ಸನಲ್ ಲೋನ್ (Personal Loan), ಹೌಸಿಂಗ್ ಲೋನ್ (Housing Loan), ಕಾರ್ ಲೋನ್ ಗಳ (Car Loan) ಬಡ್ಡಿದರವೂ ಸ್ವಲ್ಪ ಮಟ್ಟಿಗೆ ಇಳಿಯುವ ಸಾಧ್ಯತೆ ಇದೆ.
ವಾಸ್ತವವಾಗಿ, ಕಳೆದ 11 ಸಭೆಗಳಲ್ಲಿ ಮಾನಿಟರಿ ಪಾಲಿಸಿ ಸಮಿತಿ ರೆಪೋ ದರವನ್ನು ಬದಲಾಯಿಸಿರಲಿಲ್ಲ. ಆದರೆ, ಈಗ 5-1 ಬಹುಮತದೊಂದಿಗೆ ದರ ಕಡಿತವನ್ನು ಘೋಷಿಸಲಾಗಿದೆ.
ನಿಮ್ಮ ಹಣಕ್ಕೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳು ಇವು! ಹಿರಿಯ ನಾಗರಿಕರಿಗಂತೂ ಬಂಪರ್
ಇದು ಜನಸಾಮಾನ್ಯರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಬಡ್ಡಿದರ ಕಡಿತದಿಂದ ಗೃಹ (Home Loan) ಮತ್ತು ವಾಹನ ಸಾಲಗಾರರಿಗೆ (Vehicle Loan) ನಿರೀಕ್ಷಿತ ಲಾಭವಾಗಬಹುದು. ಜನರು ಕಡಿಮೆ ಬಡ್ಡಿದರದಲ್ಲಿ ಹೊಸ ಸಾಲಗಳನ್ನು (Bank Loan) ಪಡೆಯಬಹುದು. ಈ ನಿರ್ಧಾರ ಬ್ಯಾಂಕುಗಳ ಮೇಲೂ ಪರಿಣಾಮ ಬೀರುತ್ತದೆ, ಏಕೆಂದರೆ ಹೊಸ ಸಾಲ ನೀಡುವ ಸಾಧ್ಯತೆಗಳು ಹೆಚ್ಚಾಗಲಿವೆ. ಈ ನಿರ್ಧಾರದಿಂದ ಬಂಡವಾಳ ಮಾರುಕಟ್ಟೆಗಳಿಗೂ ಸಹ ಪೂರಕವಾಗಲಿದೆ.
RBI Cuts Repo Rate, A Relief for Loan Borrowers
Our Whatsapp Channel is Live Now 👇