Business News

ಸಾಲಗಾರರಿಗೆ ಬಿಗ್ ರಿಲೀಫ್! ಯಾವುದೇ ಬ್ಯಾಂಕ್ ನಲ್ಲಿ ಸಾಲ ಕಟ್ಟುತ್ತಿರುವವರಿಗೆ ಹೊಸ ನಿಯಮ

RBI ಆಗಾಗ ತಮ್ಮ ನಿಯಮಗಳಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳು RBI ನಿಯಮಗಳನ್ನ ಪಾಲಿಸುತ್ತಿಲ್ಲ ಎನ್ನುವ ಮಾಹಿತಿ ಕೂಡ ಸಿಕ್ಕಿದ್ದು, ಇದಕ್ಕೆ ಸಂಬಂಧಿಸಿದ ಹಾಗೆ RBI ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಹಾಗೆಯೇ ತಮ್ಮ ನಿಯಮಗಳನ್ನು ಪಾಲಿಸದ ಬ್ಯಾಂಕ್ ಗಳ (Banks) ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಇನ್ನುಮುಂದೆ ಎಲ್ಲಾ ಬ್ಯಾಂಕ್ ಗಳು RBI ನಿಯಮದ ಅನುಸಾರ ಎಲ್ಲಾ ವಹಿವಾಟುಗಳನ್ನು ಕೈಗೊಳ್ಳಬೇಕಿದೆ.

Big update for those who are taking loan in bank and paying EMI

ಬ್ಯಾಂಕ್ ವಿಚಾರಕ್ಕೆ ಮಾತ್ರವಲ್ಲದೆ, RBI ಈಗ ಗ್ರಾಹಕರ ಭದ್ರತೆಯ ಮೇಲೆ ಕೂಡ ಹೆಚ್ಚು ಗಮನ ಕೊಡುತ್ತಿದೆ. ಎಲ್ಲಾ ಬ್ಯಾಂಕ್ ಗಳಿಗೆ ಈಗ RBI ಇಂದ ಹೊಸ ನಿಯಮ ಜಾರಿಗೆ ಬಂದಿದೆ. ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆದರೆ, ಎಲ್ಲಾ ಗ್ರಾಹಕರು ಕೂಡ ನಿರ್ದಿಷ್ಟ ಸಮಯಕ್ಕೆ ಸಾಲವನ್ನು ಪಾವತಿ (Loan Re Payment) ಮಾಡಬೇಕಾಗುತ್ತದೆ.

ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿಲ್ಲ ಎಂದರೆ, ಗ್ರಾಹಕರಿಂದ ದಂಡ ವಸೂಲಿ ಮಾಡಲಾಗುತ್ತಿತ್ತು, ಹೀಗೆ ಬ್ಯಾಂಕ್ ನಲ್ಲಿ ಸಾಲ ಕಟ್ಟುತ್ತಿರುವವರಿಗೆ RBI ಇಂದ ಒಂದು ಸಿಹಿ ಸುದ್ದಿ ಸಿಕ್ಕಿದೆ.

ಚಿನ್ನದ ಭಾಗ್ಯ! ಮತ್ತಷ್ಟು ಇಳಿಕೆ ಕಂಡ ಚಿನ್ನದ ಬೆಲೆ, ಇನ್ನಷ್ಟು ಇಳಿಕೆಯಾಗಲಿದೆ ಎಂದ ತಜ್ಞರು! ಯಾಕೆ ಗೊತ್ತಾ?

ಅನಿವಾರ್ಯ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಸಾಲದ ಹಣ ಕಟ್ಟಲು ಸಾಧ್ಯ ಆಗುತ್ತಿಲ್ಲ ಎಂದು ಬ್ಯಾಂಕ್ ಗ್ರಾಹಕರು ಚಿಂತೆಗೆ ಒಳಗಾಗುವ ಅಗತ್ಯವಿಲ್ಲ. ಜನರಿಗೆ ಸಾಲ ಕೊಡುವ ನಮ್ಮ ದೇಶದ ಎಲ್ಲಾ ಪ್ರಮುಖ ಬ್ಯಾಂಕ್ ಗಳಿಗೆ ಸಾಲ ಕೊಡುತ್ತಿರುವ ಬ್ಯಾಂಕ್ ಗಳಿಗೆ ಈಗ RBI ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆದಿರುವ ಗ್ರಾಹಕರ ಹೊರೆ ಕಡಿಮೆ ಆಗಲಿದೆ.

ಸಾಮಾನ್ಯವಾಗಿ ಒಂದು ಬ್ಯಾಂಕ್ ಇಂದ ಸಾಲ ಪಡೆಯುವುದಕ್ಕಿಂತ ಮೊದಲು ಬ್ಯಾಂಕ್ ಗಳು ಗ್ರಾಹಕರಿಗೆ ನಿರ್ಧಿಷ್ಟ ನಿಯಮಗಳನ್ನ ತಿಳಿಸುತ್ತದೆ, ಆ ಎಲ್ಲಾ ನಿಯಮಗಳನ್ನು ಪಾಲಿಸಿ ಸಾಲ ಪಡೆಯಬಹುದು. ಸಾಲ ಪಡೆದ ನಂತರ ಕೂಡ ನಿರ್ದಿಷ್ಟ ಸಮಯದಲ್ಲಿ ಸಾಲ ಮರುಪಾವತಿ ಮಾಡಬೇಕು.

Bank Loanಒಂದು ವೇಳೆ ಸಾಲ ಕಟ್ಟದೆ ಹೋದರೆ ಗ್ರಾಹಕರ ಮೇಲೆ ದಂಡ ಹೊರೆಸಲಾಗುತ್ತದೆ. ಹೀಗೆ ಸಾಲಗಾರರ ಮೇಲೆ ಬ್ಯಾಂಕ್ ಗಳು ದಂಡ ಹಾಕುವ ವಿಚಾರಕ್ಕೆ RBI ಇಂದ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರಿಂದ ಸಾಲ ಪಡೆದಿರುವ ಎಲ್ಲರಿಗೂ ಒಳ್ಳೆಯ ಸುದ್ದಿ ಎಂದು ಹೇಳಬಹುದು.

ಕೇವಲ 3 ಲಕ್ಷಕ್ಕೆ ಹೊಸ ಕಾರ್ ಲಾಂಚ್ ಮಾಡಿದ ಮಾರುತಿ ಸಂಸ್ಥೆ, ಒಂದೇ ದಿನದಲ್ಲಿ ದಾಖಲೆಯ ಬುಕಿಂಗ್

ಬ್ಯಾಂಕ್ ನಿಗದಿ ಮಾಡಿರುವ ಸಮಯದ ಒಳಗೆ ಸಾಲದ ಹಣವನ್ನು ಪಾವತಿ ಮಾಡದೆ ಹೋದರೆ ಬ್ಯಾಂಕ್ ಗಳು ಮತ್ತು ಸಾಲ ಕೊಡುವ ಹಣಕಾಸು ಸಂಸ್ಥೆಗಳು ಸಾಲದ ಮೇಲೆ ಇರುವ ಬಡ್ಡಿದರದ (Loan Interest) ಜೊತೆಗೆ ಹೆಚ್ಚುವರಿಯಾಗಿ ದಂಡ ವಿಧಿಸುತ್ತಿದ್ದವು.. ಆದರೆ ಈಗ RBI ಸಾಲಗಾರರಿಗೆ ದಂಡ ವಿಧಿಸುವ ಬಗ್ಗೆ ಇನ್ನೂ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.

ಸಾಲದ ಅಕೌಂಟ್ ಗೆ ಸಂಬಂಧ ಪಟ್ಟ ಹಾಗೆ ದಂಡ ವಿಧಿಸಬೇಕು, ಒಟ್ಟು ಬಡ್ಡಿದರದ ಮೇಲೆ ಬಡ್ಡಿಯ ಜೊತೆಗೇ ದಂಡವನ್ನು ವಿಧಿಸಬಾರದು ಎಂದು RBI ಈಗ ಸ್ಪಷ್ಟನೆ ನೀಡಿದೆ.

ಈ ರೀತಿ ಗ್ರಾಹಕರ ಮೇಲೆ ಹೆಚ್ಚು ದಂಡ ವಿಧಿಸಿ, ಆ ಮೂಲಕ ಬ್ಯಾಂಕ್ ಗಳು ತಮ್ಮ ಆದಾಯವನ್ನು ಜಾಸ್ತಿ ಮಾಡಿಕೊಳ್ಳಬಾರದು, ಈ ರೀತಿ ಮಾಡುವುದು ದಂಡದ ಬಗ್ಗೆ ಇರುವ ಸೂಚನೆಯನ್ನೇ ದುರ್ಬಳಕೆ ಮಾಡಿಕೊಂಡ ಹಾಗೆ ಎಂದು RBI ನಿಯಮವನ್ನು ಜಾರಿಗೆ ತಂದಿದೆ.

ಕೇವಲ 7 ಸಾವಿರಕ್ಕೆ ಬೆಂಕಿ ಮೈಲೇಜ್, ಮಾಸಿಕ ಕಂತು 1200 ರೂಪಾಯಿಗೆ ಈ ಬೈಕ್ ನಿಮ್ಮದಾಗಿಸಿಕೊಳ್ಳಿ

ಸಾಲದ ಕಂತು ಎಷ್ಟಿದೆ ಅದಕ್ಕೆ ತಕ್ಕ ಹಾಗೆ ದಂಡ ಹಾಕಬೇಕು, ಸಾಲಕ್ಕೆ ಚಕ್ರಬಡ್ಡಿ ವಿಧಿಸಬಾರದು ಎಂದು RBI ಇಂದ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ. ಲೋನ್ ಅಕೌಂಟ್ ಮೇಲೆ ದಂಡ ಹಾಕಬಾರದು ಎಂದು ಸೂಚನೆ ನೀಡಲಾಗಿದೆ. ಇದು ಎಲ್ಲಾ ಸಾಲಗಾರರಿಗೆ ಗುಡ್ ನ್ಯೂಸ್ ಆಗಿದೆ.

RBI Key Decision on Bank Loan Interest

Our Whatsapp Channel is Live Now 👇

Whatsapp Channel

Related Stories