ATM ಬಳಕೆದಾರರಿಗೆ ಮತ್ತೊಂದು ಹೊಸ ನಿಯಮ ತಂದ RBI! ಇನ್ಮುಂದೆ ಹುಷಾರಾಗಿರಿ
ಡೆಬಿಟ್ ಕಾರ್ಡ್ ಮತ್ತು ಕ್ರಿಡಿಟ್ ಕಾರ್ಡ್ ಬಳಸುವ ಎಲ್ಲರೂ ಅದರ ನಿಮಗಳನ್ನು ತಿಳಿದುಕೊಳ್ಳಬೇಕು, ಈಗ ಆರ್.ಬಿ.ಐ ಹೊಸ ನಿಯಮ ತಂದಿದೆ.
ಈಗ ಬಹುತೇಕ ಎಲ್ಲಾ ಜನರ ಬಳಿ ಬ್ಯಾಂಕ್ ಖಾತೆ (Bank Account), ಅದರ ಜೊತೆಗೊಂದು ಡೆಬಿಟ್ ಕಾರ್ಡ್ (Debit Card) ಇದ್ದೆ ಇರುತ್ತದೆ. ಇನ್ನು ಹಲವರು ಕ್ರೆಡಿಟ್ ಕಾರ್ಡ್ (Credit Card) ಸಹ ಬಳಸುತ್ತಾರೆ. ಹಣದ ವಹಿವಾಟು ನಡೆಸಲು, ನಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಬ್ಯಾಂಕ್ ಅಕೌಂಟ್ ಬಹಳ ಮುಖ್ಯ.
ಹಾಗೆಯೇ ಹಣದ ಟ್ರಾನ್ಸಾಕ್ಷನ್ ಮಾಡಬೇಕಾಗಿ ಬಂದಾಗ ಬ್ಯಾಂಕ್ ಗೆ ಹೋಗದೆ ಎಟಿಎಂ (ATM) ಮೂಲಕ ಕ್ಯಾಶ್ ಪಡೆಯಲು ಡೆಬಿಟ್ ಕಾರ್ಡ್ ಬೇಕೇ ಬೇಕು. ಇನ್ನು ಬಿಲ್ ಪಾವತಿ (Bill Payment), ಯುಐಪಿ (UPI Transactions) ಬಳಕೆ ಇದೆಲ್ಲದಕ್ಕೂ ಡೆಬಿಟ್ ಕಾರ್ಡ್ ಅತ್ಯಾವಶ್ಯಕ. ಇನ್ನಷ್ಟು ಜನರಿಗೆ ಕ್ರೆಡಿಟ್ ಕಾರ್ಡ್ ಕೂಡ ಬಹಳ ಮುಖ್ಯವಾಗಿರುತ್ತದೆ.
ಹೀಗಿರುವಾಗ ಡೆಬಿಟ್ ಕಾರ್ಡ್ ಮತ್ತು ಕ್ರಿಡಿಟ್ ಕಾರ್ಡ್ ಬಳಸುವ ಎಲ್ಲರೂ ಕೂಡ ಅವುಗಳಿಗೆ ಸಂಬಂಧಿಸಿದ ಹಾಗೆ ಇರುವ ಕೆಲವು ನಿಮಗಳನ್ನು ತಿಳಿದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಹಾಗೆ RBI ಆಗಾಗ ನಿಯಮಗಳಲ್ಲಿ ಬದಲಾವಣೆ ಮಾಡುತ್ತದೆ. ಇದೀಗ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ ತಂದಿದ್ದು, ಆ ನಿಯಮ ಏನು ಎಂದು ತಿಳಿಸುತೇವೆ ನೋಡಿ..
ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಜನರಿಗೆ ಎಷ್ಟು ಸುಲಭವಾದ ಆಯ್ಕೆಯನ್ನು ನೀಡುತ್ತಿದೆಯೋ ಅದೇ ರೀತಿ ಇದರಿಂದ ವಂಚನೆ, ಆನ್ಲೈನ್ ಸ್ಕ್ಯಾಮ್ (Online Scam), ಮೋಸ ಇವುಗಳು ಕೂಡ ನಡೆಯುತ್ತಿದೆ. ಇದೆಲ್ಲವು ಕಡಿಮೆ ಆಗಬೇಕು, ಗ್ರಾಹಕರು ಮೋಸಕ್ಕೆ ಒಳಗಾಗಬಾರದು ಎಂದು RBI ಈಗ ಹೊಸ ನಿಯಮವನ್ನು ತಂದಿದೆ.
ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಕೆಗೆ ಎರಡು ಹಂತದ ಪರಿಶೀಲನೆ ಅಂದರೆ ಟು ಸ್ಟೆಪ್ ವೆರಿಫಿಕೇಶನ್ ಇರಲಿದೆ. ಈ ಪರಿಶೀಲನೆ ನಡೆಸುವುದಕ್ಕೆ ಆರ್.ಬಿ.ಐ (RBI) ಈಗ ಪಿನ್ ನಂಬರ್ (Pin Number) ಅಥವಾ ಒನ್ ಟೈಮ್ ಪಾಸ್ ವಾರ್ಡ್ (OTP) ಒಳಗೊಂಡಿರುತ್ತದೆ ಎಂದು ತಿಳಿಸಿದೆ. ಜನರಿಗೆ ಮೋಸವಾಗಬಾರದು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದರ ಜೊತೆಗೆ ಸಂಪರ್ಕವಿಲ್ಲದೆ ಹಣದ ವಹಿವಾಟು ನಡೆಸುವ ಬಗ್ಗೆ ಕೂಡ ಆರ್.ಬಿ.ಐ ತಿಳಿಸಿದೆ. ಈಗಿನಿಂದ ಡೆಬಿಟ್ ಕಾರ್ಡ್ ಬಳಸುವವರು ಕಾರ್ಡ್ ಸಂಪರ್ಕ ಇಲ್ಲದೆಯೇ ಒಂದು ವಹಿವಾಟಿನಲ್ಲಿ ₹5000 ರೂಪಾಯಿವರೆಗು ಹಣ ಪಡೆದುಕೊಳ್ಳಬಹುದು. ಮತ್ತೊಂದು ವಿಚಾರ ಏನು ಎಂದರೆ, ಅಂತಾರಾಷ್ಟ್ರೀಯ ವಹಿವಾಟುಗಳಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಲು ನಿಮ್ಮ ಕಾರ್ಡ್ ಗಳನ್ನು ಆಕ್ಟಿವೇಟ್ ಮಾಡಿಸಬೇಕು ಅಥವಾ ಡೀಆಕ್ಟಿವೇಟ್ ಮಾಡಿಸಬೇಕಾಗುತ್ತದೆ.
ಇನ್ನುಮುಂದೆ ನಿಮ್ಮ ಕಾರ್ಡ್ ಬಳಕೆಯ ಪ್ರತಿ ಟ್ರಾನ್ಸಾಕ್ಷನ್ ಗು SMS ಮತ್ತು Email ಎರಡು ಬರುವುದನ್ನು RBI ಸ್ಟ್ರಿಕ್ಟ್ ಆಗಿ ಫಾಲೋ ಮಾಡಲು ಸೂಚನೆ ನೀಡಿದೆ. ಒಂದು ವೇಳೆ ನಿಮ್ಮ ಬ್ಯಾಂಕ್ ವಹಿವಾಟು ಫೇಲ್ ಆದರೆ, ಬ್ಯಾಂಕ್ ಅಥವಾ ಆ ಫೈನಾನ್ಸ್ ಸಂಸ್ಥೆಯು ಗ್ರಾಹಕರಿಗೆ ಹಣ ಕೊಡಬೇಕಾಗುತ್ತದೆ. ಈ ನಿಯಮಗಳನ್ನು ತಿಳಿದು ನೀವು ಹುಷಾರಾಗಿರಿ.
RBI new rules for debit card
Follow us On
Google News |