ಬೆಲೆ ದುಬಾರಿ ಅಂತ ಬೇಜಾರಾಗಬೇಡಿ! ಈಗ ರಾಯಲ್ ಎನ್‌ಫೀಲ್ಡ್ ಬುಲೆಟ್ ಬಾಡಿಗೆಗೂ ಕೂಡ ಸಿಗುತ್ತೆ

Royal Enfield Bike Rental : ರಾಯಲ್ ಎನ್‌ಫೀಲ್ಡ್  ಬುಲೆಟ್ ವತಿಯಿಂದ ಹೊಸದೊಂದು ಸೇವೆ ಶುರು ಮಾಡಿದೆ, ಇದು ರಾಯಲ್ ಎನ್‌ಫೀಲ್ಡ್  ಬುಲೆಟ್ ಬೈಕ್ ಗಳನ್ನು ಬಾಡಿಗೆಗೆ ಪಡೆಯುವ ಸೇವೆ ಆಗಿದೆ.

Royal Enfield Bike Rental : ರಾಯಲ್ ಎನ್‌ಫೀಲ್ಡ್  ಇದು ಎಲ್ಲಾ ಹುಡುಗರ ಮೆಚ್ಚಿನ ಬೈಕ್ ಎಂದು ಹೇಳಬಹುದು. ಈ ಬೈಕ್ ನ ಬೆಲೆ ದುಬಾರಿ, ಆದರೆ ಎಲ್ಲಾ ಹುಡುಗರು ಈ ಬೈಕ್ ಖರೀದಿ ಮಾಡಬೇಕು ಓಡಿಸಬೇಕು ಎಂದು ಆಸೆ ಪಡುತ್ತಾರೆ.

ಆದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಬೈಕ್ (Bike) ಅನ್ನು ಎಲ್ಲರಿಂದಲೂ ಖರೀದಿ ಮಾಡಲು ಸಾಧ್ಯವಿಲ್ಲ. ಅಂಥವರಿಗಾಗಿ ರಾಯಲ್ ಎನ್‌ಫೀಲ್ಡ್  ಬುಲೆಟ್ ವತಿಯಿಂದ ಹೊಸದೊಂದು ಸೇವೆ ಶುರು ಮಾಡಿದೆ, ಇದು ರಾಯಲ್ ಎನ್‌ಫೀಲ್ಡ್  ಬುಲೆಟ್ ಬೈಕ್ ಗಳನ್ನು (Royal Enfield Bike Rental) ಬಾಡಿಗೆಗೆ ಪಡೆಯುವ ಸೇವೆ ಆಗಿದೆ.

ಈ ಸೇವೆ ಈಗಾಗಲೇ 25 ನಗರಗಳಲ್ಲಿ ಶುರುವಾಗಿದ್ದು ಯಾರಾದರೂ ಕೂಡ ಈ ಸೇವೆಯನ್ನು ಪಡೆದುಕೊಳ್ಳಬಹುದು. ಈಗ 300 ಮೋಟರ್ ಸೈಕಲ್ ಗಳು ಬಾಡಿಗೆಗೆ ಹೋಗಲು ಸಿದ್ಧವಾಗಿವೆ.

ಬೆಲೆ ದುಬಾರಿ ಅಂತ ಬೇಜಾರಾಗಬೇಡಿ! ಈಗ ರಾಯಲ್ ಎನ್‌ಫೀಲ್ಡ್ ಬುಲೆಟ್ ಬಾಡಿಗೆಗೂ ಕೂಡ ಸಿಗುತ್ತೆ - Kannada News

ಹಬ್ಬದ ಸೀಸನ್‌ ಸೇಲ್​ಗೆ ರೆಡಿಯಾಗಿ! ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಅರ್ಧಕ್ಕೆ ಅರ್ಧದಷ್ಟು ಡಿಸ್ಕೌಂಟ್

ಪ್ರಸ್ತುತ ರಾಯಲ್ ಎನ್‌ಫೀಲ್ಡ್  ಬುಲೆಟ್ (Royal Enfield) ಸಂಸ್ಥೆಯು 40 ಬೈಕ್ ಗಳ ಸಮ್ಮುಖದಲ್ಲಿ ಈ ಸೇವೆ ಶುರುವಾಗಲಿದೆ. ಪ್ರಸ್ತುತ ನಮ್ಮ ದೇಶದ 25 ನಗರಗಳಲ್ಲಿ ನಿಮಗೆ ರಾಯಲ್ ಎನ್‌ಫೀಲ್ಡ್  ಬುಲೆಟ್ ಬೈಕ್ ಅನ್ನು ಬಾಡಿಗೆಗೆ ನೀಡುವ ಸೇವೆ ಶುರುವಾಗಿದೆ..

ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಊರುಗಳಲ್ಲಿ ಈ ಸೇವೆ ಶುರುಮಾಡುವುದಕ್ಕೆ ಸಂಸ್ಥೆ ಪ್ಲಾನ್ ಮಾಡಿಕೊಂಡಿದೆ. ಈಗ
ಹೈದರಾಬಾದ್, ವಿಶಾಖಪಟ್ಟಣಂ, ಚಂಡೀಗಢ, ಲೇಹ್, ಮನಾಲಿ, ಅಹಮದಾಬಾದ್, ಮುಂಬೈ, ಗುಜರಾತ್, ಧರ್ಮಶಾಲಾ, ಹರಿದ್ವಾರ, ಋಷಿಕೇಶ, ಕೊಚ್ಚಿ, ಭುವನೇಶ್ವರ, ಶಿಮ್ಲಾ, ನೈನಿತಾಲ್, ಗೋವಾ, ತಿರುವನಂತಪುರಂ, ದೆಹಲಿ, ಬಿರ್ ಬಿಲ್ಲಿಂಗ್, ಉದಯಪುರ, ಜೈಪುರ, ಜೈಸಲ್ಮೇರ್, ಚೆನ್ನೈ, ಬೆಂಗಳೂರು, ಸಿಲಿಗುರಿ, ಡೆಹ್ರಾಡೂನ್‌ ಈ ಊರುಗಳಲ್ಲಿ ಈಗ ಬೈಕ್ ರೆಂಟಲ್ ಸೇವೆ ಲಭ್ಯವಿದೆ.

ನಿನ್ನೆಯೇ ಖರೀದಿಸಬೇಕಿತ್ತು! ಚಿನ್ನದ ಬೆಲೆ ಕಡಿಮೆಯಾಯ್ತು ಅಂತ ಸಂತಸ ಪಡುವ ಮುನ್ನವೇ ದಿಢೀರ್ ಏರಿಕೆ

Royal Enfield Bike Rentalರಾಯಲ್ ಎನ್ಫೀಲ್ಡ್ ಬುಲೆಟ್ ಬಾಡಿಗೆ ಸೇವೆಗಳನ್ನು ಗ್ರಾಹಕರು ರೋಡ್ ಟ್ರಿಪ್, ಸೋಲೋ ರೈಡ್ ಮತ್ತು ಇನ್ನಿತರ ಕಾರಣಗಳಿಗೆ ಬಳಸಬಹುದು. ಬಾಡಿಗೆಗೆ ತೆಗೆದುಕೊಂಡ ಬೈಕ್ ಇಂದ ಎಲ್ಲಿಗೆ ಬೇಕಾದರು ಹೋಗಬಹುದು.

ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ನ ರೆಂಟಲ್ ಪ್ರಾಜೆಕ್ಟ್ ಸೇವೆ ಇಂದ ರೈಡರ್ ಗಳು ನಮ್ಮ ದೇಶದ ಎಲ್ಲಿಯಾದರೂ ಬೈಕ್ ಗಳನ್ನು ಬಾಡಿಗೆಗೆ ಪಡೆಯಬಹುದು. ರೈಡರ್ ಗಳು ನಮ್ಮ ದೇಶದ ಯಾವುದೇ ಟೂರಿಸ್ಟ್ ಸ್ಪಾಟ್ ಗಳಿಗೆ ಭೇಟಿ ನೀಡಬಹುದು.

ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು ಇಲ್ಲಿದೆ ಸುಲಭ ಮಾರ್ಗ! ನಿಮ್ಮ ಬಳಿ ಹಣ ಇಲ್ಲದೆ ಇದ್ರೂ ಪರವಾಗಿಲ್ಲ

ರೆಂಟಲ್ ಪಡೆಯುವುದಕ್ಕೆ ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ನೀಡಿ, ಬೈಕ್ ರೆಂಟಲ್ ಅನ್ನು ಆಯ್ಕೆ ಮಾಡಿ, ಅಲ್ಲಿ ನಿಮ್ಮ ನಗರ ಯಾವುದು ಎನ್ನುವುದನ್ನು ಆಯ್ಕೆ ಮಾಡಬೇಕು. ನಂತರ ಬೈಕ್ ಬಗ್ಗೆ ಪೂರ್ತಿ ಮಾಹಿತಿ ನೀಡಲಾಗುತ್ತದೆ. ನಿರ್ವಾಹಕರನ್ನು ನೀವು ಕಾಂಟ್ಯಾಕ್ಟ್ ಮಾಡಿ ಬೈಕ್ ಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು.

ರಾಯಲ್ ಎನ್ಫೀಲ್ಡ್ ಬುಲೆಟ್ ಕ್ಲಾಸಿಕ್ 350 ಮಾಡೆಲ್ ಬೈಕ್ ದಿನಕ್ಕೆ ₹1000 ರೂಪಾಯಿಯ ಬಾಡಿಗೆಗೆ ಸಿಗುತ್ತದೆ. ಥಂಡರ್ ಬರ್ಡ್ 500 ಎಕ್ಸ್ ಬೈಕ್ ಬಾಡಿಗೆ ದಿನಕ್ಕೆ ₹1499 ರೂಪಾಯಿ ಆಗುತ್ತದೆ. ಥಂಡರ್ ಬರ್ಡ್ 350 ಎಕ್ಸ್ ಬೈಕ್ ಬಾಡಿಗೆ ದಿನಕ್ಕೆ ₹1199 ರೂಪಾಯಿಗಳು. ಥಂಡರ್ ಬರ್ಡ್ 350 ಬೈಕ್ ಬೆಲೆ ದಿನಕ್ಕೆ ₹1199 ರೂಪಾಯಿ ಆಗಿರುತ್ತದೆ. ನೀವು ಕೂಡ ಈ ಬೈಕ್ ಅನ್ನು ಬಾಡಿಗೆಗೆ ನೀಡಬಹುದು.

ಏನೇ ತಗೋಳಿ ಡಿಸ್ಕೌಂಟ್! ಗ್ರೇಟ್ ಇಂಡಿಯನ್ ಸೇಲ್‌ಗೆ ಅಮೆಜಾನ್ ಸಜ್ಜು, ಭರ್ಜರಿ ಆಫರ್‌ಗಳು

Royal Enfield Bike Rental Program Introduced in Bengaluru

Follow us On

FaceBook Google News

Royal Enfield Bike Rental Program Introduced in Bengaluru