ಪೋಷಕರೇ, ನಿಮ್ಮ ಮಗಳಿಗೆ ಈ ಯೋಜನೆಯಡಿ ಸಿಗಲಿದೆ 6.5 ಲಕ್ಷ! ಮಿಸ್ ಮಾಡ್ಬೇಡಿ

ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳಿಗಾಗಿ ತಿಂಗಳಿಗೆ ₹1,000 ಉಳಿತಾಯ ಮಾಡಿದರೆ ಶೇ.8.2 ಬಡ್ಡಿದರದೊಂದಿಗೆ ₹6.5 ಲಕ್ಷ ಲಾಭದ ಅವಕಾಶ ಸಿಕ್ಕಿದೆ.

  • ಶೇ.8.2 ಬಡ್ಡಿದರದೊಂದಿಗೆ ಭದ್ರ ಉಳಿತಾಯ ಯೋಜನೆ
  • ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಅತ್ಯುತ್ತಮ ಹೂಡಿಕೆ
  • ತೆರಿಗೆ ವಿನಾಯಿತಿಯೊಂದಿಗೆ ಉತ್ತಮ ಲಾಭದ ಅವಕಾಶ

Post Office Savings Scheme : ಮೂಲತಃ ಹೆಣ್ಣು ಮಕ್ಕಳ ಭವಿಷ್ಯವನ್ನು ಹಣಕಾಸು ದೃಷ್ಟಿಯಿಂದ ಸುರಕ್ಷಿತಗೊಳಿಸಲು ಕೇಂದ್ರ ಸರ್ಕಾರ 2015 ರಲ್ಲಿ “ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme)”ಯನ್ನು ಆರಂಭಿಸಿತು.

ಈ ಯೋಜನೆಯು ಶಿಕ್ಷಣ ಹಾಗೂ ಮದುವೆಂತಹ ಮುಖ್ಯವಾದ ಹಂತಗಳಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.

ಈ ಯೋಜನೆಯಡಿ ಅರ್ಹತೆಯು 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಮಾತ್ರವೇ ಇರಲಿದೆ. ಪೋಷಕರು ಅಥವಾ ಕಾನೂನುಬದ್ಧ ಪಾಲಕರು ತಮ್ಮ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.

ಇದನ್ನೂ ಓದಿ: ಕೋಟ್ಯಂತರ ರೈತರಿಗೆ ಖುಷಿ ಸುದ್ದಿ ಕೊಟ್ಟ ಮೋದಿಜಿ! ಇಲ್ಲಿದೆ ಬಂಪರ್ ಕೊಡುಗೆ

ಒಂದು ಕುಟುಂಬದಲ್ಲಿ ಇಬ್ಬರಿಗೆ ಖಾತೆ ತೆರೆಯುವ ಅವಕಾಶವಿದೆ, ಕೆಲವೊಮ್ಮೆ ಮೂರನೇ ಮಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆ ಅಂಚೆ ಕಚೇರಿ (post office) ಅಥವಾ ಕೆಲವೊಂದು ಮಾನ್ಯತೆ ಪಡೆದ ಬ್ಯಾಂಕುಗಳಲ್ಲಿ (banks) ಲಭ್ಯವಿದೆ. ಖಾತೆ ತೆರೆಯಲು ಅರ್ಜಿದಾರರು ಹೆಣ್ಣು ಮಗುವಿನ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪೋಷಕರ ಐಡಿ ಹಾಗೂ ಮೊಬೈಲ್ ಸಂಖ್ಯೆ ಇತ್ಯಾದಿ ದಾಖಲಾತಿಗಳನ್ನು ನೀಡಬೇಕು.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಪಿಂಚಣಿ ಕುರಿತು ಸರ್ಕಾರ ಪ್ರಮುಖ ಘೋಷಣೆ

Sukanya Samriddhi Yojana

ಬಡ್ಡಿದರದ ವಿಷಯದಲ್ಲಿ, ಇತ್ತೀಚಿಗೆ ಈ ಯೋಜನೆಗೆ ಶೇ.8.2ರಷ್ಟು ಬಡ್ಡಿದರ ನಿಗದಿಯಾಗಿದ್ದು ಇದು ದೇಶದ ಅತ್ಯುತ್ತಮ ಬಡ್ಡಿದರದ (interest rate) ಸಣ್ಣ ಉಳಿತಾಯ ಯೋಜನೆಗಳಲ್ಲಿ (Savings Scheme) ಒಂದಾಗಿದೆ. ವರ್ಷಕ್ಕೆ ಕನಿಷ್ಠ ₹250ರಿಂದ ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದಾಗಿದೆ.

ಒಂದು ಉದಾಹರಣೆಯಂತೆ, ತಿಂಗಳಿಗೆ ₹1,000 ಹಣವನ್ನು ಹೂಡಿಕೆ ಮಾಡಿದರೆ ಶೇ.8.2 ಬಡ್ಡಿದರದ (compound interest) ಪ್ರಕಾರ 15 ವರ್ಷಗಳೊಳಗೆ ₹6.5 ಲಕ್ಷವರೆಗೆ ಮೊತ್ತ ಸಂಗ್ರಹವಾಗಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್‌ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ! ಇಲ್ಲಿದೆ ಲೆಕ್ಕಾಚಾರ

ಈ ಯೋಜನೆಯ ಮುಖ್ಯ ವಿಶೇಷತೆ ಎಂದರೆ ಇದು ತೆರಿಗೆ ವಿನಾಯಿತಿಯುಳ್ಳ (tax free investment) ಯೋಜನೆಯಾಗಿದ್ದು, ಇದರಿಂದ ದೊರೆಯುವ ಲಾಭಕ್ಕೂ ತೆರಿಗೆ ವಿಧಿಸಲಾಗದು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು.

Save 1,000 Monthly and Get 6.5 Lakh for Your Daughter

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories