ಹೆಂಡತಿ ಹೆಸರಿನಲ್ಲಿ ಸೇವ್ ಮಾಡಿ ರೂ.35,000 ಬಡ್ಡಿ ಗಳಿಸಿ, ಬಂಪರ್ ಯೋಜನೆ
ನೀವು ಮದುವೆ ಆಗಿದ್ದರೆ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಯಾಕಂದರೆ ಕೇಂದ್ರ ಸರ್ಕಾರದ ಈ ಯೋಜನೆಯಿಂದ ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ ಹಣವನ್ನು ಸೇವ್ ಮಾಡಿ, 32 ಸಾವಿರ ರೂಪಾಯಿಗಳನ್ನು ಬಡ್ಡಿಯಾಗಿ ಪಡೆದುಕೊಳ್ಳಬಹುದು.
ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಕೇವಲ ಎರಡು ಲಕ್ಷ ರೂಪಾಯಿಗಳನ್ನು ಹೆಂಡತಿಯ ಹೆಸರಿನಲ್ಲಿ ಉಳಿತಾಯ ಮಾಡಬೇಕು.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿ!
MSSC ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು 2023ರಲ್ಲಿ ಪರಿಚಯಿಸಿದರು. ಯೋಜನೆ ಆರಂಭಗೊಂಡ ದಿನದ ಇಲ್ಲಿಯವರೆಗೆ ಸಾಕಷ್ಟು ಜನ ಹೂಡಿಕೆ ಮಾಡಿದ್ದಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7.5% ನಷ್ಟು ಬಡ್ಡಿ ನೀಡಲಾಗುವುದು.
ಕನಿಷ್ಠ ಸಾವಿರ ರೂಪಾಯಿಗಳಿಂದ ಕನಿಷ್ಠ 2 ಲಕ್ಷ ರೂಪಾಯಿಗಳ ವರೆಗೆ ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಇನ್ನು ನೀವು ಠೇವಣಿ ಇಟ್ಟು ಒಂದು ವರ್ಷದ ಬಳಿಕ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅದರ 40% ನಷ್ಟು ಹಿಂಪಡೆಯಲು ಅವಕಾಶವಿದೆ.
ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚಿಗೆ ಹಣ ಇಟ್ಟರೆ ಒಂದು ರೂಪಾಯಿ ಕೂಡ ಸಿಗಲ್ಲ!
ಎರಡು ಲಕ್ಷ ಹೂಡಿಕೆಗೆ 32 ಸಾವಿರ ಬಡ್ಡಿ!
ಈ ಯೋಜನೆಯಲ್ಲಿ ಗರಿಷ್ಠ ಎರಡು ಲಕ್ಷ ರೂಪಾಯಿಗಳನ್ನು ಮಾತ್ರ ಠೇವಣಿ ಇಡಬಹುದು. ಇಷ್ಟು ದೊಡ್ಡ ಮೊತ್ತದ ಹಣವನ್ನು ಠೇವಣಿ ಇಟ್ಟರೆ 7.5% ಬಡ್ಡಿ ದರದಲ್ಲಿ ಬರೋಬ್ಬರಿ ರೂ.2,32,044.00 ಗಳನ್ನು ಎರಡು ವರ್ಷಗಳ ನಂತರ ಪಡೆದುಕೊಳ್ಳಬಹುದು. ಅಂದರೆ ನಿಮ್ಮ ಎರಡು ಲಕ್ಷ ರೂಪಾಯಿ ಠೇವಣಿಗೆ ರೂ.32,044 ಬಡ್ಡಿಯಾಗಿ ಸಿಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಅಡಿಯಲ್ಲಿ ಭಾರತೀಯ ಯಾವುದೇ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಇನ್ನು ಮದುವೆ ಆಗದೆ ಇರುವ ಪುರುಷರು ತಮ್ಮ ತಾಯಿಯ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು ಅಪ್ರಾಪ್ತ ಬಾಲಕಿಯರ ಹೆಸರಿನಲ್ಲಿಯೂ ಪಾಲಕರು ಖಾತೆ ತೆರೆಯಬಹುದು.
ಈ ಯೋಜನೆಯಲ್ಲಿ ಠೇವಣಿ ಇಡಲು ನೀವು ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಒಂದು ಅರ್ಜಿ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಈ ಕೆ ವೈ ಸಿ ದಾಖಲೆಗಳನ್ನು ಕೊಡಬೇಕು.
Save in wife name and earn Rs 35,000 interest in This scheme