ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚಿಗೆ ಹಣ ಇಟ್ಟರೆ ಒಂದು ರೂಪಾಯಿ ಕೂಡ ಸಿಗಲ್ಲ!
Bank Deposit : ಕೈಯಲ್ಲಿ ಹಣ ಇದ್ರೆ ಎಲ್ಲಿ ಖರ್ಚಾಗುತ್ತೋ ಅಂತ ಬ್ಯಾಂಕ್ ನಲ್ಲಿ ಠೇವಣಿ ಇಡುವವರೇ ಹೆಚ್ಚು. ಇದು ಒಂದು ಉತ್ತಮ ಉಳಿತಾಯ ಕೂಡ ಪ್ಲಾನ್ ಕೂಡ ಹೌದು. ಆದರೆ ಹೀಗೆ ಬ್ಯಾಂಕ್ ನಲ್ಲಿ ಠೇವಣಿ (Deposit) ಇಡುವುದಕ್ಕೂ ಮೊದಲು ಬ್ಯಾಂಕಿನ ಕೆಲವು ನಿಯಮಗಳನ್ನು ನೀವು ತಿಳಿದುಕೊಳ್ಳಬೇಕು.
ಉದಾಹರಣೆಗೆ ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿಗೆ ಹಣವನ್ನು ಇಟ್ರೆ ಬ್ಯಾಂಕ್ ಆ ಎಲ್ಲಾ ಹಣಕ್ಕೂ ಜವಾಬ್ದಾರಿಯುತವಾಗಿರುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ.
ಠೇವಣಿ ಮೊತ್ತದ ಮಿತಿ ನಿರ್ಧರಿಸಿ!
ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿ (Saving Account) 5 ಲಕ್ಷ ರೂಪಾಯಿಗಳ ವರೆಗೆ ಒಬ್ಬ ವ್ಯಕ್ತಿ ಉಳಿತಾಯ ಮಾಡಬಹುದು. ಅದಕ್ಕಿಂತ ಹೆಚ್ಚಿಗೆ ಹಣವನ್ನು ಉಳಿತಾಯ ಮಾಡಿದರೆ ಬ್ಯಾಂಕ್ ವೈಫಲ್ಯದ ಸಂದರ್ಭದಲ್ಲಿ ನೀವು ಉಳಿತಾಯ ಮಾಡಿದ 5 ಲಕ್ಷಕ್ಕಿಂತ ಹೆಚ್ಚಿಗೆ ಹಣಕ್ಕೆ ಯಾವುದೇ ವಿಮೆ ಸಿಗುವುದಿಲ್ಲ. ಅಂದರೆ ಕೇವಲ 5 ಲಕ್ಷಕ್ಕೆ ಮಾತ್ರ ಬ್ಯಾಂಕ್ ಜವಾಬ್ದಾರಿಯುತವಾಗಿರುತ್ತದೆ. ಮತ್ತು ಉಳಿದ ಹಣಕ್ಕೆ ಬ್ಯಾಂಕ್ ಗ್ಯಾರಂಟಿ ನೀಡುವುದಿಲ್ಲ.
ಈ ಹಿಂದೆ ಅಂದ್ರೆ 2020 ರ ಕೇಂದ್ರ ಬಜೆಟ್ ನಲ್ಲಿ ವಿಮಾ ಮೊತ್ತವನ್ನು ಒಂದು ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ ಹೀಗಾಗಿ ಬ್ಯಾಂಕ್ ನಲ್ಲಿ ಠೇವಣಿ ಮಾಡುವವರ ಸಂಖ್ಯೆಯು ಹೆಚ್ಚಾಗಿದೆ.
HDFC ಬ್ಯಾಂಕ್ 8 ಲಕ್ಷ ಪರ್ಸನಲ್ ಲೋನ್ ಕೊಟ್ರೆ ಎಷ್ಟು EMI ಪಾವತಿಸಬೇಕಾಗುತ್ತೆ!
ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಅಡಿಯಲ್ಲಿ 5 ಲಕ್ಷಗಳ ವರೆಗೆ ವಿಮೇ ಸೌಲಭ್ಯವನ್ನು (Insurance) ಪಡೆಯಬಹುದು ಅಂದರೆ ಯಾವುದೇ ಬ್ಯಾಂಕ್ ದಿವಾಳಿಯಾದರೆ ಅಥವಾ ಬ್ಯಾಂಕ್ ತನ್ನ ಕೆಲಸವನ್ನು ಸ್ಥಗಿತಗೊಳಿಸಿದರೆ ಗ್ರಾಹಕರು 5 ಲಕ್ಷ ರೂಪಾಯಿಗಳವರೆಗೆ ವಿಮೆಯನ್ನು ಪಡೆದುಕೊಳ್ಳಬಹುದು. ಮೂರು ತಿಂಗಳುಗಳಲ್ಲಿ ಠೇವಣಿಗೆ ಹಣವನ್ನು ಹಿಂತಿರುಗಿಸಲಾಗುವುದು.
ಬ್ಯಾಂಕ್ ದರೋಡೆಯಾದರೆ ಅಥವಾ ಬ್ಯಾಂಕ್ ಮುಚ್ಚಿ ಹೋದರೆ ಆಗ ಆರ್ ಬಿಐನ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಹಿಮ ಸೌಲಭ್ಯವನ್ನು ಒದಗಿಸಿಕೊಡುತ್ತವೆ. ಆದರೆ ಭೂಕಂಪ ಪ್ರವಾಹ ದಂತಹ ಪ್ರಕೃತಿ ವಿಕೋಪದಿಂದ ಬ್ಯಾಂಕ್ ನಾಶವಾದರೆ ಗ್ರಾಹಕರ ಹಣಕ್ಕೆ ಬ್ಯಾಂಕ್ ಜವಾಬ್ದಾರನಾಗಿರುವುದಿಲ್ಲ.
If you deposit more than 5 lakhs in the bank, you won’t get a single rupee