HDFC ಬ್ಯಾಂಕ್ 8 ಲಕ್ಷ ಪರ್ಸನಲ್ ಲೋನ್ ಕೊಟ್ರೆ ಎಷ್ಟು EMI ಪಾವತಿಸಬೇಕಾಗುತ್ತೆ!
- ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲಕ್ಕೆ 10.85% ಬಡ್ಡಿ
- ಕ್ರೆಡಿಟ್ ಸ್ಕೋರ್, ಆದಾಯ ಮತ್ತು ವಯಕ್ತಿಕ ದಾಖಲೆಗಳು ಇದ್ದರೆ ವೈಯಕ್ತಿಕ ಸಾಲ ಸಿಗುತ್ತೆ
- ಪ್ರತಿ ತಿಂಗಳು ಪಾವತಿಸಬೇಕು 13,653 ರೂಪಾಯಿ EMI
Personal Loan : ನಾವು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯವನ್ನು ತೆಗೆದುಕೊಳ್ಳುತ್ತೇವೆ, ಹೀಗೆ ವೈಯಕ್ತಿಕ ಸಾಲವನ್ನು ಬ್ಯಾಂಕ್ ನಲ್ಲಿ ತೆಗೆದುಕೊಳ್ಳುವಾಗ ಎಷ್ಟು ಸಾಲವನ್ನು ಮಾಡುತ್ತೇವೆ ಹಾಗೂ ಅದಕ್ಕೆ ಪಾವತಿಸಬೇಕಾಗಿರುವ ಅಸಲು ಮತ್ತು ಬಡ್ಡಿ ಎಷ್ಟು ಎಂಬುದನ್ನು ಮೊದಲೇ ಲೆಕ್ಕಚಾರ ಹಾಕಿಕೊಂಡರೆ ಆರ್ಥಿಕವಾಗಿ ಹೆಚ್ಚು ಯೋಚನೆ ಮಾಡಬೇಕಾದ ಅಗತ್ಯ ಇರುವುದಿಲ್ಲ.
ಯಾಕೆಂದರೆ ನಮ್ಮ ಆದಾಯಕ್ಕಿಂತ ಒಂದು ತಿಂಗಳ EMI ಪಾವತಿಯೇ ಹೆಚ್ಚಾದರೆ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಕಷ್ಟ.

ಪ್ರತಿ ತಿಂಗಳು 5,000 ರೂಪಾಯಿ ಪೆನ್ಷನ್ ಕೊಡುವ ಈ ಯೋಜನೆಗೆ ಈಗಲೇ ಸೇರಿಕೊಳ್ಳಿ
ಈ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡರೆ ಬಡ್ಡಿ ಎಷ್ಟು ಗೊತ್ತಾ?
ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank) 10.84% ನಿಂದ 24% ವರೆಗೆ ಬಡ್ಡಿಯನ್ನು ವಯಕ್ತಿಕ ಸಾಲದ (Personal Loan) ಮೇಲೆ ವಿಧಿಸುತ್ತದೆ. ಇದರ ಜೊತೆಗೆ ಇತರ ಶುಲ್ಕಗಳನ್ನು ಕೂಡ ಪಾವತಿಸಬೇಕಾಗುತ್ತದೆ. ಆದರೆ ಬಹಳ ಸುಲಭವಾಗಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಹೆಚ್ಚುವರಿ ದಾಖಲೆಗಳನ್ನು ಕೊಡುವ ಅಗತ್ಯವಿಲ್ಲ.
ಏಳು ವರ್ಷದ ಅವಧಿಗೆ 8 ಲಕ್ಷ ರೂಪಾಯಿಗಳ ಸಾಲಕ್ಕೆ EMI ಎಷ್ಟು ಎಷ್ಟು?
ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ನೀವು ವೈಯಕ್ತಿಕ ಸಾಲ ತೆಗೆದುಕೊಳ್ಳುವುದಾದರೆ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಆದಾಯ, ಮೊದಲಾದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ಒಂದು ವೇಳೆ ನೀವು ಈ ಬ್ಯಾಂಕ್ ನಲ್ಲಿ ಏಳು ವರ್ಷಗಳ ಅವಧಿಗೆ 8 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡರೆ ಬ್ಯಾಂಕ್ ವಿಧಿಸುವ ಬಡ್ಡಿದರ 10.85%. ಹಾಗಾದ್ರೆ ತಿಂಗಳಿಗೆ ಎಷ್ಟು ಇಎಂಐ ಪಾವತಿಸಬೇಕು ಎಂಬುದನ್ನು ನೋಡೋಣ.
ಸಾಕಷ್ಟು ವರ್ಷ EMI ಕಟ್ಟುವ ಬದಲು ಈ ರೀತಿ ಮಾಡಿ ಬೇಗ ಲೋನ್ ಮುಗಿಯುತ್ತೆ!
8 ಲಕ್ಷ ರೂಪಾಯಿ ಸಾಲಕ್ಕೆ ಅಸಲು ಮತ್ತು ಬಡ್ಡಿ ಸೇರಿ 11,45,335 ರೂಪಾಯಿಗಳಾಗುತ್ತವೆ. ಅಂದರೆ ಇಲ್ಲಿ 3,45,335 ರೂಪಾಯಿಗಳು ಬಡ್ಡಿಗಳಾಗಿರುತ್ತವೆ. ಅಂದರೆ ನೀವು ಪ್ರತಿ ತಿಂಗಳು 13,653 ರೂಪಾಯಿಗಳನ್ನು ಇಎಂಐ ಪಾವತಿಸಬೇಕು.
If HDFC Bank Gives an 8 Lakh Personal Loan, How Much EMI Need to Pay