ಸಾಕಷ್ಟು ವರ್ಷ EMI ಕಟ್ಟುವ ಬದಲು ಈ ರೀತಿ ಮಾಡಿ ಬೇಗ ಲೋನ್ ಮುಗಿಯುತ್ತೆ!
- ಪ್ರತಿ ತಿಂಗಳು EMI ಪಾವತಿಸಿ ಬೇಸರವಾಗಿದ್ದರೆ ಹೀಗೆ ಮಾಡಿ
- ತೆಗೆದುಕೊಂಡ ವಯಕ್ತಿಕ ಸಾಲವನ್ನು ಬಹಳ ಬೇಗ ಹಿಂತಿರುಗಿಸಿ
- ಬ್ಯಾಂಕ್ ನಲ್ಲಿ ಬಡ್ಡಿ ದರವನ್ನು ಮೊದಲು ಪರಿಶೀಲಿಸಿ
Personal Loan : ಹಣದ ಆಗುತ್ತೆ ಬಿದ್ದಾಗ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಸಹಜ. ಆದರೆ ಈ ಸಾಲ ಬರ್ತಾ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ. ಎಷ್ಟೋ ಜನರಿಗೆ ಈ ಸಾಲವೇ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತಿದೆ.
ಅದರಲ್ಲೂ ಹೆಚ್ಚಿನ ಮೊತ್ತದ ವೈಯಕ್ತಿಕ ಸಾಲವನ್ನು ಪಡೆದುಕೊಂಡಾಗ ಪ್ರತಿ ತಿಂಗಳು EMI ರೂಪದಲ್ಲಿ ಬಡ್ಡಿಯನ್ನು ಪಾವತಿ ಮಾಡೆ ಸಾಕಾಗುತ್ತದೆ. ಆದರೆ ನೀವು ಸ್ವಲ್ಪ ಸ್ಮಾರ್ಟ್ ಆಗಿ ಯೋಚನೆ ಮಾಡಿದ್ರೆ ನಿಮ್ಮ ಸಾಲವನ್ನು (Loan) ಬಹಳ ಬೇಗ ಮರುಪಾವತಿ ಮಾಡಬಹುದು.
ಚೆಕ್ ಬರೆಯುವಾಗ ಇದೊಂದು ಮಿಸ್ಟೇಕ್ ಮಾಡಿದ್ರೆ ದೊಡ್ಡ ಸಮಸ್ಯೆ ಆಗೋದು ಪಕ್ಕ
ಶೀರ್ಘವಾಗಿ ಸಾಲ ತೀರಿಸಲು ಹೀಗೆ ಮಾಡಿ!
* ಪ್ರತಿ ತಿಂಗಳು ಖರ್ಚನ್ನು ಕಡಿಮೆ ಮಾಡಿ EMI ಹೆಚ್ಚಾಗಿ ಪಾವತಿಸಲು ಆರಂಭಿಸಿದರೆ ಸಾಲ ಬಹಳ ಬೇಗ ಮರುಪಾವತಿಯಾಗುತ್ತದೆ.
* ಪ್ರತಿ ತಿಂಗಳು ಪಾವತಿ ಮಾಡುವ ಈ ಎಂ ಐ ಮೊತ್ತವನ್ನು ಹೆಚ್ಚಿಸಿಕೊಳ್ಳಿ. ಈ ರೀತಿ ಸ್ವಲ್ಪ ಸ್ವಲ್ಪವೇ ಹೆಚ್ಚುವರಿ ಹಣವನ್ನು ಪಾವತಿ ಮಾಡುತ್ತಾ ಬಂದರೆ ಬಹಳ ಬೇಗ ಸಾಲ ತೀರಿಸಬಹುದು.
* ನಿಮ್ಮ ಬಜೆಟ್ ಪ್ಲಾನ್ ಸರಿಯಾಗಿ ಇರಬೇಕು. ನನ್ನ ಬಳಿ ಎಷ್ಟು ಹಣವಿದೆ, ಎಷ್ಟು ಖರ್ಚು ಮಾಡಬಹುದು ಹಾಗೂ ಎಷ್ಟು ಹಣವನ್ನು ಸಾಲಕ್ಕೆ ಮೀಸಲಿಡಬಹುದು ಎಂಬುದನ್ನು ಮೊದಲೇ ನಿರ್ಧಾರ ಮಾಡಿಕೊಂಡರೆ ನಿಮ್ಮ ಆರ್ಥಿಕ ನಿರ್ವಹಣೆ ಸುಲಭವಾಗುತ್ತದೆ
* ಇನ್ನು ವಯಕ್ತಿಕ ಸಾಲವನ್ನು ಮಾಡುವಾಗ ಮೊಟ್ಟಮೊದಲನೆಯದಾಗಿ ಬಡ್ಡಿ ದರದ ಬಗ್ಗೆ ಪರಿಶೀಲನೆ ಮಾಡಿ. ಬ್ಯಾಂಕ್ನಿಂದ ಬ್ಯಾಂಕ್ಗೆ ಬಡ್ಡಿದರ ವಿಭಿನ್ನವಾಗಿರುತ್ತದೆ. ಹಾಗಾಗಿ ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದುಕೊಳ್ಳಿ.
SBI ನಲ್ಲಿ ಮೂರು ವರ್ಷಕ್ಕೆ FD ಇಟ್ಟರೆ ಸಿಗುವ ರಿಟರ್ನ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
* ಇತ್ತೀಚಿಗೆ ಆನ್ಲೈನ್ ಶಾಪಿಂಗ್ ಕ್ರೇಜ್, ಎಲ್ಲರಿಗೂ ಹೆಚ್ಚಾಗಿದೆ. ಹೀಗಾಗಿ ಅಗತ್ಯ ಇರುವ ವಸ್ತುಗಳ ಜೊತೆಗೆ ಅನಗತ್ಯ ವಸ್ತುಗಳನ್ನು ಕೂಡ ಶಾಪ್ ಇಂದ ಮಾಡುತ್ತೇವೆ. ಇದರಿಂದಾಗಿ ಖರ್ಚು ಹೆಚ್ಚಾಗುತ್ತದೆ ಸಾಲ ಮರುಪಾವತಿ ವಿಳಂಬವಾಗುತ್ತದೆ
* ಇನ್ನು ಕೆಲವೊಂದು ಬ್ಯಾಂಕುಗಳಲ್ಲಿ ನಿಮ್ಮ ಈ ಎಂಐ ಮೊತ್ತವನ್ನು ಪರಿಷ್ಕರಿಸಿಕೊಳ್ಳಬಹುದು ಹೀಗಾಗಿ ಅಗತ್ಯ ಇದ್ದಾಗ ದೀರ್ಘಾವಧಿಗೆ ಸಾಲ ತೆಗೆದುಕೊಂಡರೆ ಪ್ರತಿ ತಿಂಗಳು ಕಡಿಮೆ EMI ಪಾವತಿ ಮಾಡಬಹುದು.
ಈ ರೀತಿ ಕೆಲವು ಸ್ಮಾರ್ಟ್ ಯೋಜನೆಗಳು ಬಜೆಟ್ ಪ್ಲಾನ್ ಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಬಹುದು ಜೊತೆಗೆ ಬಹಳ ಬೇಗ ತೆಗೆದುಕೊಂಡ ಸಾಲವನ್ನು (Personal Loan) ಮರುಪಾವತಿ ಮಾಡಬಹುದು.
Instead of Paying EMIs for Years, Do This to Close Your Loan Faster