Business News

SBI ನಲ್ಲಿ ಮೂರು ವರ್ಷಕ್ಕೆ FD ಇಟ್ಟರೆ ಸಿಗುವ ರಿಟರ್ನ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

State Bank Fixed Deposit : ಹಣ ಉಳಿತಾಯ ಮಾಡುವುದು ನಮ್ಮ ಆರ್ಥಿಕ ನಿರ್ವಹಣೆಯ ಪ್ರಮುಖ ಅಂಶವಾಗಿರುತ್ತದೆ. ದುಡಿದ ಹಣವನ್ನು ಸುಮ್ಮನೆ ಖರ್ಚು ಮಾಡುವ ಬದಲು ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ.

ಇತ್ತೀಚಿಗೆ ಸಾಕಷ್ಟು ಜನ ಮ್ಯೂಚುವಲ್ ಫಂಡ್, ಎಸ್ಐಪಿ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇಲ್ಲಿ ಹೂಡಿಕೆ ಮಾಡುವಾಗ ಮಾರುಕಟ್ಟೆಯ ಅಪಾಯವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಯಾವುದೇ ತೊಂದರೆ ಇಲ್ಲದೆ, ಮಾರುಕಟ್ಟೆ ಅಪಾಯವಿಲ್ಲದೆ ಸುರಕ್ಷಿತ ಹೂಡಿಕೆಯನ್ನು ಮಾಡಬೇಕು ಎಂದಿದ್ದರೆ ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ FD ಯನ್ನು ಮಾಡಬಹುದು.

SBI ನಲ್ಲಿ ಮೂರು ವರ್ಷಕ್ಕೆ FD ಇಟ್ಟರೆ ಸಿಗುವ ರಿಟರ್ನ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇಂದಿನ ಈ ಲೇಖನದಲ್ಲಿ ಎಸ್ ಬಿ ಐ ಬ್ಯಾಂಕಿನಲ್ಲಿ ಎಫ್ ಡಿ ಇತರೆ ಎಷ್ಟು ರಿಟರ್ನ್ ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳೋಣ.

ಎಸ್ ಬಿ ಐ ನಲ್ಲಿ ಎಫ್ ಡಿ ಇಟ್ಟರೆ ಬರುವ ರಿಟರ್ನ್ ಎಷ್ಟು?

ಎಫ್ ಡಿ ಅಂದ್ರೆ ಫಿಕ್ಸೆಡ್ ಡೆಪಾಸಿಟ್ (Fixed Deposit). ನೀವು ಒಂದಷ್ಟು ಹಣವನ್ನು ಒಂದಷ್ಟು ಅವಧಿಗೆ ಠೇವಣಿ ಇಡಬಹುದು. ಈ ರೀತಿ ಮಾಡುವುದರಿಂದ ಬ್ಯಾಂಕ್ ನಿಮಗೆ ಉತ್ತಮ ಬಡ್ಡಿ ದರದೊಂದಿಗೆ ಹೆಚ್ಚಿನ ಆದಾಯ ಸಿಗುವಂತೆ ಮಾಡಿಕೊಡುತ್ತದೆ. ಬೇರೆ ಬೇರೆ ಬ್ಯಾಂಕ್ ನಲ್ಲಿ ಎಫ್ ಡಿ (Bank FD) ಹೂಡಿಕೆ ಮೇಲೆ ಬೇರೆ ಬೇರೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

ದೇಶದ ಅತಿ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿಯ ಯೋಜನೆಗಳನ್ನು ಪರಿಚಯಿಸಿದ್ದು ಉತ್ತಮ ಆದಾಯವನ್ನು ನೀಡುತ್ತಿದೆ.

ನೀವು ಬ್ಯಾಂಕ್ ನಲ್ಲಿ FD ಇಟ್ಟಾಗ, ಹಣದ ಸುರಕ್ಷತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ಇಲ್ಲಿ ಯಾವುದೇ ರೀತಿಯ ಮಾರುಕಟ್ಟೆಯ ಅಪಾಯ ಇರುವುದಿಲ್ಲ. ನಿಮಗೆ ಖಚಿತ ಆದಾಯ ಸಿಗುತ್ತದೆ. ಎಸ್ ಬಿ ಐ ನಲ್ಲಿ ಏಳು ದಿನಗಳಿಂದ 10 ವರ್ಷಗಳ ಅವಧಿಯವರೆಗೂ ಎಫ್ ಡಿ ಠೇವಣಿಯನ್ನು ಇಡಬಹುದು. ಉದಾಹರಣೆಗೆ ಮೂರು ವರ್ಷಗಳ ಅವಧಿಗೆ 6 ಲಕ್ಷ ರೂಪಾಯಿಗಳನ್ನು ಫಿಕ್ಸೆಡ್ ಇಟ್ಟರೆ ನಿಮಗೆ ಸಿಗುವ ರಿಟರ್ನ್ ಎಷ್ಟು ಎಂಬುದನ್ನು ನೋಡೋಣ.

ಎಸ್ ಬಿ ಐ ಸಾಮಾನ್ಯ ಗ್ರಾಹಕರಿಗೆ 6.75% ಬಡ್ಡಿ ದರವನ್ನು ಸ್ಥಿರತೆ ಹೊಣೆಯ ಮೇಲೆ ನೀಡುತ್ತದೆ. ಇನ್ನು ಇನ್ನು ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್ ಹೆಚ್ಚಿಸಲಾಗಿದ್ದು 7.25% ಬಡ್ಡಿಯನ್ನು FD ಮೇಲೆ ಪಡೆಯಬಹುದು.

ಸಾಮಾನ್ಯ ಗ್ರಾಹಕರು 6.75% ಬಡ್ಡಿ ದರದಲ್ಲಿ 6 ಲಕ್ಷ ರೂಪಾಯಿಗಳನ್ನು ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ 7,33,436 ರೂಪಾಯಿಗಳನ್ನು ಹಿಂಪಡೆಯಬಹುದು. ಅಂದರೆ ಬಡ್ಡಿ ಆಗಿ ರೂ. 1,33,436 ರೂಪಾಯಿ ಲಾಭ ಪಡೆಯುತ್ತೀರಿ.

ಅದೇ ರೀತಿ ಹಿರಿಯ ನಾಗರಿಕರು ಮೂರು ವರ್ಷಗಳ ಅವಧಿಗೆ 6 ಲಕ್ಷ ರೂಪಾಯಿಯ ನಿಶ್ಚಿತ ಠೇವಣಿ ಇಟ್ಟರೆ, 7.25% ಬಡ್ಡಿ ದರದಲ್ಲಿ 7,44,328 ರೂಪಾಯಿಗಳನ್ನು ಹಿಂಪಡೆಯಬಹುದು. ಅಂದರೆ ಇಲ್ಲಿ ಸಿಗುವ ಬಡ್ಡಿಯ ಮೊತ್ತ 1,64,328 ರೂಪಾಯಿಗಳು.

ಒಟ್ಟಿನಲ್ಲಿ ಎಸ್‌ಬಿಐ ಉತ್ತಮ ರಿಟರ್ನ್ ಸಿಗುವ ಸ್ಥಿರ ಠೇವಣಿ ಯೋಜನೆಯನ್ನು ಆರಂಭಿಸಿದ್ದು, ತಕ್ಷಣವೇ ಹೂಡಿಕೆ ಮಾಡಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ.

Complete Details on Returns for a 3-Year Fixed Deposit in SBI

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories