ಚೆಕ್ ಬರೆಯುವಾಗ ಇದೊಂದು ಮಿಸ್ಟೇಕ್ ಮಾಡಿದ್ರೆ ದೊಡ್ಡ ಸಮಸ್ಯೆ ಆಗೋದು ಪಕ್ಕ
- ಬ್ಯಾಂಕ್ ನಲ್ಲಿ ಚೆಕ್ ಬುಕ್ ವ್ಯವಹಾರ ಮಾಡುವಾಗ ಎಚ್ಚರವಿರಲಿ
- ರೂಪಾಯಿಗಳ ಮುಂದೆ ಮಾತ್ರ ಎಂದು ಬರೆಯುವುದನ್ನು ಮರೆಯಬೇಡಿ
- ಚೆಕ್ ನಲ್ಲಿ ಹಿಂಭಾಗದಲ್ಲಿಯೂ ಸಹಿ ಹಾಕುವುದು ಮುಖ್ಯ
Bank Cheque : ಹಣಕಾಸು ವಹಿವಾಟು ಮಾಡುವಾಗ ನಾವು ಎಷ್ಟೇ ಮುತುವರ್ಜಿಯಿಂದ ಇದ್ರೂ ಸಾಕಾಗಲ್ಲ. ಎಷ್ಟೋ ಬಾರಿ ನಾವು ಮಾಡುವ ಸಣ್ಣ ಪುಟ್ಟ ಮಿಸ್ಟೇಕ್ ಗಳು ಕೂಡ ದೊಡ್ಡ ಮೊತ್ತ ತೆರುವಂತೆ ಮಾಡುತ್ತವೆ. ನಾವು ಬುದ್ಧಿವಂತಿಕೆಯಿಂದ ವ್ಯವಹಾರ ಮಾಡದೆ ಇದ್ದಲ್ಲಿ ಸಾಲದ ಸೋಲದಲ್ಲಿ ಬೀಳಬೇಕಾಗಬಹುದು ಅಥವಾ ವಂಚಕರಿಂದ ವಂಚನೆಗೆ ಒಳಗಾಗಬೇಕಾಗಬಹುದು.
ಬ್ಯಾಂಕ್ ನಲ್ಲಿ ಚೆಕ್ ಬರೆಯುವಾಗ ಎಚ್ಚರವಿರಲಿ
ಸಾಮಾನ್ಯವಾಗಿ ನಾವು ಹಣಕಾಸು ವ್ಯವಹಾರವನ್ನು ಬ್ಯಾಂಕ್ ನಲ್ಲಿಯೇ ಮಾಡುತ್ತೇವೆ. ಇತ್ತೀಚಿಗೆ ಆನ್ಲೈನ್ (Online Banking) ಮೂಲಕವೇ ಹಣಕಾಸಿನ ವ್ಯವಹಾರ ಮಾಡಿದರು ಕೂಡ ದೊಡ್ಡ ದೊಡ್ಡ ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕ್ ಗೆ ಹೋಗಲೇಬೇಕು ,ಉದಾಹರಣೆಗೆ ಬ್ಯಾಂಕ್ ನಲ್ಲಿ ನಾವು ಚೆಕ್ ಬರೆದು ಬೇರೆಯವರಿಗೆ ಹಣ ಕೊಡುವುದು ಅಥವಾ ನಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಹಣ ಹಾಕಿಕೊಳ್ಳುವುದನ್ನು ಮಾಡುತ್ತೇವೆ.

ಆದರೆ ಬ್ಯಾಂಕ್ ನಲ್ಲಿ ಚೆಕ್ ಬರೆಯುವಾಗ ಒಂದು ಸಣ್ಣ ಮಿಸ್ಟೇಕ್ ಆದ್ರೂ ಕೂಡ ದೊಡ್ಡ ಮೊತ್ತವನ್ನೇ ತೆರಬೇಕಾಗುತ್ತದೆ.
SBI ನಲ್ಲಿ ಮೂರು ವರ್ಷಕ್ಕೆ FD ಇಟ್ಟರೆ ಸಿಗುವ ರಿಟರ್ನ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಚೆಕ್ ಬುಕ್ ಬಳಸುವಾಗ ಇದು ಗಮನದಲ್ಲಿರಲಿ!
ಸಾಕಷ್ಟು ಜನ ಆನ್ಲೈನ್ ಪೇಮೆಂಟ್ (Online Payment) ಮಾಡುವ ಅಭ್ಯಾಸ ಮಾಡಿಕೊಂಡಿರುವುದರಿಂದ ಬ್ಯಾಂಕ್ ನಲ್ಲಿ ಸಿಗುವ ಚೆಕ್ ಬುಕ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರುವುದಿಲ್ಲ. ಒಂದು ವೇಳೆ ಅನಿವಾರ್ಯ ಪರಿಸ್ಥಿತಿಯಲ್ಲಿ ಚೆಕ್ ಬರೆಯುವಾಗ ನಿಮಗೆ ಈ ನಿಯಮಗಳು ತಿಳಿಯದೆ ಇದ್ದರೆ ಆಗ ಹಣವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.
ಉದಾಹರಣೆಗೆ ಚೆಕ್ ನಲ್ಲಿ ಮೊತ್ತವನ್ನು ಬರೆಯುವಾಗ ‘ಮಾತ್ರ’ (only) ಎಂದು ಬರೆಯಬೇಕು. ಅಂದರೆ ಚೆಕ್ ನಲ್ಲಿ ಯಾವುದೇ ಮೊತ್ತವನ್ನು ನಿಖರವಾಗಿ ಬರೆಯಬೇಕು. ಉದಾಹರಣೆಗೆ 10,000 ಎಂದು ನೀವು ಬರೆದರೆ ಕೊನೆಯಲ್ಲಿ ರೂಪಾಯಿಗಳು ಮಾತ್ರ ಎನ್ನುವ ಪದವನ್ನು ಸೇರಿಸುವುದನ್ನು ಮರೆಯಬೇಡಿ.
15 ವರ್ಷಕ್ಕೆ ಅಂತ 25 ಲಕ್ಷ ಪರ್ಸನಲ್ ಲೋನ್ ತೆಗೆದುಕೊಂಡರೆ EMI ಎಷ್ಟು ಕಟ್ಟಬೇಕು?
ಚೆಕ್ ನಲ್ಲಿ ಸಹಿ ಹಾಕುವಾಗಲೂ ಇರಲಿ ಎಚ್ಚರ!
ಇನ್ನು ಚೆಕ್ ಮೇಲೆ ಸಹಿಯಾಗುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ನಿಮ್ಮ ಅಕೌಂಟ್ ನಲ್ಲಿ ನೀವು ಹಾಕಿರುವ ಸಹಿ ಹಾಗೂ ಚೆಕ್ ನಲ್ಲಿ ಹಾಕುವ ಸಹಿ ಮ್ಯಾಚ್ ಆಗಬೇಕು. ಚೆಕ್ ನಲ್ಲಿ ಹಿಂಬದಿಯಲ್ಲಿಯೂ ಕೂಡ ಸಹಿ ಹಾಕುವುದು ಅತ್ಯಗತ್ಯ. ಅದರಲ್ಲೂ ಮುಖ್ಯವಾಗಿ ಕ್ರಾಸ್ ಚೆಕ್ ನಲ್ಲಿ ಹಿಂಭಾಗದಲ್ಲಿಯೂ ಸಹಿ ಹಾಕುವುದು ಮುಖ್ಯ.
ಈ ರೀತಿ ಮಾಡುವುದರಿಂದ ಇನ್ನೊಬ್ಬ ವ್ಯಕ್ತಿಯ ಹೆಸರಿನಲ್ಲಿ ಚೆಕ್ ಅನ್ನು ಕೊಡಲು ಸಾಧ್ಯವಿಲ್ಲ. ಇಂದ ಕೆಲವು ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಚೆಕ್ ಮೂಲಕ ವ್ಯವಹಾರ ಮಾಡಿ.
Making This Mistake While Writing a Cheque Can Lead to Big Trouble