15 ವರ್ಷಕ್ಕೆ ಅಂತ 25 ಲಕ್ಷ ಪರ್ಸನಲ್ ಲೋನ್ ತೆಗೆದುಕೊಂಡರೆ EMI ಎಷ್ಟು ಕಟ್ಟಬೇಕು?
- 25 ಲಕ್ಷ ಪರ್ಸನಲ್ ಲೋನ್ ಗೆ ಪ್ರತಿ ತಿಂಗಳು ಪಾವತಿಸಬೇಕಾದ EMI ಎಷ್ಟು
- ಎಸ್ ಬಿ ಐ ವೈಯಕ್ತಿಕ ಸಾಲಕ್ಕೆ ವಿಧಿಸುವ ಬಡ್ಡಿ 12%
- ಆನ್ಲೈನ್ ನಲ್ಲಿಯೂ ಸಿಗುತ್ತೆ ವೈಯಕ್ತಿಕ ಸಾಲ
Personal Loan : ಯಾವುದೇ ಎಮರ್ಜೆನ್ಸಿಯ ಸಮಯದಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬೇಕು ಎಂದುಕೊಳ್ಳುವವರಿಗೆ ಬ್ಯಾಂಕ್ ಗಳು (Banks) ಗುಡ್ ನ್ಯೂಸ್ ನೀಡಿವೆ. ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡಲಾಗುತ್ತಿದೆ. ಹೀಗಾಗಿ ನೀವು ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ.
ಎಸ್ ಬಿ ಐ ನಲ್ಲಿ ವೈಯಕ್ತಿಕ ಸಾಲ ತೆಗೆದುಕೊಳ್ಳುತ್ತೀರಾ!
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಗ್ರಾಹಕರಿಗೆ ಕೈಗೆಟುಕುವ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತಿದೆ. ಈ ಲೇಖನದಲ್ಲಿ ಎಸ್ ಬಿ ಐ ನಲ್ಲಿ 15 ವರ್ಷಗಳ ಅವಧಿಗೆ 25 ಲಕ್ಷ ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ ಪ್ರತಿ ತಿಂಗಳು ಎಷ್ಟು ಇಎಂಐ ಭರಿಸಬೇಕು ಎಂಬುದನ್ನು ನೋಡೋಣ.

ನೀವು ಯಾವುದೇ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಬಹಳ ಮುಖ್ಯವಾಗಿರುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಆಗ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತದೆ
ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿದ್ದರೆ ಅಥವಾ ನೀವು ಯಾವುದಾದರೂ ಬ್ಯಾಂಕಿನಲ್ಲಿ ಸಾಲ (Bank Loan) ತೆಗೆದುಕೊಂಡು ಸರಿಯಾಗಿ ಮರುಪಾವತಿ ಮಾಡದೆ ಡೀಫಾಲ್ಟರ್ ಆಗಿದ್ದರೆ ನಿಮಗೆ ಸಾಲ ಸಿಗುವುದು ತುಂಬಾ ಕಷ್ಟ.
ನಮ್ಮ ದೇಶದಲ್ಲಿ ಚಾಲ್ತಿಯಲ್ಲಿತ್ತು 10,000 ರೂಪಾಯಿ ನೋಟು! ಈ ವಿಚಾರ ನಿಮಗೆ ಗೊತ್ತಾ?
ಎಷ್ಟೋ ಬಾರಿ ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಕಾರಣದಿಂದಾಗಿ ಸಾಲದ ಅರ್ಜಿ ರಿಜೆಕ್ಟ್ ಆಗಿರುವ ಉದಾಹರಣೆಗಳು ಇವೆ. ಹಾಗಾಗಿ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕುವುದಕ್ಕೂ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ಇನ್ನು ಎಸ್ ಬಿ ಐ ಬ್ಯಾಂಕ್ ನಲ್ಲಿ ನೀವು 25 ಲಕ್ಷ ರೂಪಾಯಿಗಳನ್ನು 15 ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡರೆ EMI ಎಂದು ನೋಡುವುದಾದರೆ, ಈ ಬ್ಯಾಂಕ್ ನಲ್ಲಿ 12% ಗೆ ವೈಯಕ್ತಿಕ ಸಾಲ ಪಡೆಯಬಹುದು.
ಹೀಗಾಗಿ ಪ್ರತಿ ತಿಂಗಳು ಪಾವತಿಸಬೇಕಾಗುವ EMI ಮೊತ್ತ 30,004 ರೂಪಾಯಿಗಳು. ಅಂದರೆ 29,00,756 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕು. ಅಂದರೆ ಪಾವತಿಸಬೇಕಾದ ಒಟ್ಟು ಮೊತ್ತ 54,00,756 ರೂಪಾಯಿಗಳು.
ವೈಯಕ್ತಿಕ ಸಾಲವನ್ನು ಯಾವುದೇ ಬ್ಯಾಂಕ್ ನಲ್ಲಿ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಬ್ಯಾಂಕ್ ನಲ್ಲಿ ಬಡ್ಡಿ ಎಷ್ಟಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇನ್ನು ವೈಯಕ್ತಿಕ ಸಾಲಕ್ಕೆ (Personal Loan) ಯಾವುದೇ ವಿಶೇಷವಾದ ದಾಖಲೆಗಳು ಬೇಕಾಗಿಲ್ಲ. ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು ಅಷ್ಟೇ. ಆನ್ಲೈನಲ್ಲಿಯೂ ಕೂಡ ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
If You Take a 25 Lakh Personal Loan for 15 Years, What Will Be the EMI