ನಮ್ಮ ದೇಶದಲ್ಲಿ ಚಾಲ್ತಿಯಲ್ಲಿತ್ತು 10,000 ರೂಪಾಯಿ ನೋಟು! ಈ ವಿಚಾರ ನಿಮಗೆ ಗೊತ್ತಾ?
- ಭಾರತದಲ್ಲಿ ಚಲಾವಣೆಯಲ್ಲಿತ್ತು 10,000 ರೂಪಾಯಿ ನೋಟು
- 1938 ರಲ್ಲಿ 10,000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇದ್ದವು
- ಬ್ರಿಟಿಷ್ ಸರ್ಕಾರ ಈ ನೋಟುಗಳನ್ನು ಬ್ಯಾನ್ ಮಾಡಿದ್ದು ಯಾಕೆ
10,000 Rupees Note: ಈ ಕರೆನ್ಸಿಗಳ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ. ನಾವು ಈಗ ಯಾವ ಕರೆನ್ಸಿಗಳನ್ನು (Indian Currency) ಚಲಾವಣೆಯಲ್ಲಿ ನೋಡುತ್ತೇವೆಯೋ ಅದಕ್ಕಿಂತ ಬಹಳ ವಿಭಿನ್ನವಾಗಿರುವ ಕರೆನ್ಸಿ ನೋಟು ಮತ್ತು ನಾಣ್ಯಗಳು ನಮ್ಮ ದೇಶದಲ್ಲಿ ಚಲಾವಣೆಯಲ್ಲಿ ಇದ್ದವು. ಅದರಲ್ಲೂ 10,000 ಮುಖಬೆಲೆಯ ಕರೆನ್ಸಿ ಚಾಲ್ತಿಯಲ್ಲಿತ್ತು ಅಂದ್ರೆ ನೀವು ನಂಬುತ್ತೀರಾ?
10,000 ಮುಖಬೆಲೆಯ ಕರೆನ್ಸಿ!
ಹೌದು, ನಮ್ಮ ದೇಶದಲ್ಲಿ 1957 ರವರೆಗೆ 25 ಪೈಸೆ ಮತ್ತು 50 ಪೈಸೆಯ ನಾಣ್ಯಗಳನ್ನು ಕೂಡ ಪರಿಚಯಿಸಿರಲಿಲ್ಲ. ಆದರೆ ಅದಕ್ಕಿಂತ ಮೊದಲು ಹತ್ತು ಸಾವಿರ ರೂಪಾಯಿ ಮುಖಬೆಲೆಯ ಕರೆನ್ಸಿ ಚಾಲ್ತಿಯಲ್ಲಿ ಇತ್ತು. ನಮ್ಮ ದೇಶದಲ್ಲಿ 1938 ರಲ್ಲಿ 10,000 ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡಲಾಗಿತ್ತು.
ಆ ಸಮಯದಲ್ಲಿ ಒಂದು ಅನ್ನ ಎರಡು ಅನ್ನ ಎಂದು ಕರೆಯಲ್ಪಡುವ ನಾಣ್ಯಗಳು ಮಾತ್ರ ಚಲಾವಣೆಯಲ್ಲಿ ಇದ್ದವು. ಒಟ್ಟು ಎರಡು ಬಾರಿ ರೂಪಾಯಿ, 10000 ನೋಟುಗಳನ್ನು ದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಅಂತಿಮವಾಗಿ ಕಾರಣಾಂತರಗಳಿಂದ ಈ ನೋಟುಗಳನ್ನು ಸ್ಥಗಿತಗೊಳಿಸಲಾಯಿತು. ಆದಾಗ್ಯೂ ಆಗಿನ ಕಾಲದ ಅತಿ ದೊಡ್ಡ ಮುಖಬೆಲೆಯ ನೋಟು ಎನಿಸಿಕೊಂಡಿತ್ತು.
ಈ ಬ್ಯಾಂಕ್ ನಲ್ಲಿ ಹಣ ಫಿಕ್ಸೆಡ್ ಇಟ್ಟರೆ ಬಡ್ಡಿಯೇ 5% ಸಿಗಲಿದೆ! ಯಾವ ಬ್ಯಾಂಕ್ ಗೊತ್ತಾ?
ಹತ್ತು ಸಾವಿರ ಮುಖಬೆಲೆಯ ನೋಟನ್ನು ಪರಿಚಯಿಸಿದ್ದು ಯಾಕೆ?
ವ್ಯಾಪಾರ ವ್ಯವಹಾರಗಳು ಸುಲಭವಾಗುವುದಕ್ಕೆ ಇಷ್ಟು ದೊಡ್ಡ ಮೌಲ್ಯದ ಹಣವನ್ನು ಪರಿಚಯಿಸಲಾಗಿತ್ತು. 25 ಮತ್ತು 50 ಪೈಸೆಗಳನ್ನು ಕೂಡ ಬಿಡುಗಡೆ ಮಾಡದೇ ಇರುವ ಸಂದರ್ಭದಲ್ಲಿ ವ್ಯಾಪಾರಸ್ಥರಿಗಾಗಿಯೇ 10,000 ಮುಖಬೆಲೆಯ ಕರೆನ್ಸಿಯನ್ನು ಬ್ರಿಟಿಷ್ ಸರ್ಕಾರವೇ ಬಿಡುಗಡೆ ಮಾಡಿತ್ತು.
ಆದರೆ ಈ ಕರೆನ್ಸಿಯನ್ನು ಆರಂಭಿಸಿದ ಎಂಟು ವರ್ಷಗಳ ನಂತರ ಅಂದರೆ 1946ರಲ್ಲಿ ಬ್ರಿಟಿಷ್ ಸರ್ಕಾರ ನೋಟುಗಳ ತಯಾರಿಕೆಯನ್ನು ನಿಲ್ಲಿಸಿತು ಆರ್ ಬಿ ಐ ನ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಅಂದ್ರೆ ಕಪ್ಪು ನೋಟುಗಳ ಸಂಗ್ರಹಣೆ ಹಾಗೂ ವಂಚನೆ ಹೆಚ್ಚಾಗುತ್ತಾ ಬಂತು. ಅದು ಅಲ್ಲದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕಾಳ ಧನ ಭ್ರಷ್ಟಾಚಾರದ ಭಯದಿಂದಾಗಿ ದೊಡ್ಡ ಮೌಲ್ಯದ ನೋಟನ್ನು ಬ್ಯಾನ್ ಮಾಡಲು ನಿರ್ಧರಿಸಲಾಯಿತು.
ICICI ಬ್ಯಾಂಕ್ ನಲ್ಲಿ 40 ಲಕ್ಷ ಹೋಮ್ ಲೋನ್ ಪಡೆದರೆ EMI ಎಷ್ಟು ಕಟ್ಟಬೇಕಾಗುತ್ತೆ?
ಎರಡನೇ ಬಾರಿಗೆ ಮರು ಮುದ್ರಣ!
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ 1954ರಲ್ಲಿ ಹತ್ತು ಸಾವಿರ ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಲಾಯಿತು ಆಗ 5000 ನೋಟುಗಳು ಕೂಡ ಹೆಚ್ಚಿನ ಮುಖಬೆಲೆಯ ಕರೆನ್ಸಿ ಎನಿಸಿಕೊಂಡಿತ್ತು.
ನಂತರ 1978 ರಲ್ಲಿ 5,000 ಮತ್ತು 10,000 ಮುಖಬೆಲೆಯ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ವ್ಯಾಪಾರಸ್ಥರ ಕಪ್ಪು ಹಣ ಸಂಗ್ರಹಣೆ ಇದಕ್ಕೆ ಮುಖ್ಯ ಕಾರಣ. ಕೆಲವು ವರ್ಷಗಳ ನಂತರ 10,000ಗಳ ನೋಟುಗಳನ್ನು ಮರು ಪರಿಚಯಿಸಲು ನಿರ್ಧರಿಸಿದ್ದರು ಕೂಡ ಸಾಕಷ್ಟು ವಿರೋಧಗಳು ವ್ಯಕ್ತವಾಗಿ ಈ ಯೋಚನೆಯನ್ನು ಕೈ ಬಿಡಲಾಯಿತು.
Did You Know, Rupees 10,000 Note Was in Circulation in Our Country