ICICI ಬ್ಯಾಂಕ್ ನಲ್ಲಿ 40 ಲಕ್ಷ ಹೋಮ್ ಲೋನ್ ಪಡೆದರೆ EMI ಎಷ್ಟು ಕಟ್ಟಬೇಕಾಗುತ್ತೆ?
- 40 ಲಕ್ಷ ಹೋಮ್ ಲೋನ್ ತೆಗೆದುಕೊಂಡ್ರೆ ತಿಂಗಳಿಗೆ ಪಾವತಿಸಬೇಕಾದ EMI ಎಷ್ಟು
- ಐಸಿಐಸಿಐ ಬ್ಯಾಂಕ್ ನಲ್ಲಿ ಗೃಹ ಸಾಲಕ್ಕೆ ಕೇವಲ 9% ಬಡ್ಡಿ
- ಗೃಹ ಸಾಲಕ್ಕೆ ಅರ್ಜಿ ಹಾಕುವ ಮೊದಲು ಸಿಬಿಲ್ ಸ್ಕೋರ್ ಚೆಕ್ ಮಾಡಿ
Home Loan : ಸ್ವಂತ ಮನೆಯನ್ನ ನಿರ್ಮಿಸಿಕೊಳ್ಳಬೇಕು ಎನ್ನುವ ಕನಸು ಎಲ್ಲರಿಗೂ ಇದ್ದರು ಅದನ್ನ ಈಡೇರಿಸಿಕೊಳ್ಳುವುದು ಸುಲಭದ ಮಾತಲ್ಲ. ಯಾಕಂದ್ರೆ ಮನೆಯ ನಿರ್ಮಾಣಕ್ಕೆ ಬಳಸುವ ಪ್ರತಿಯೊಂದು ವಸ್ತುವಿನ ಬೆಲೆ ಇತ್ತೀಚಿಗೆ ತುಂಬಾನೇ ದುಬಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಮನೆಯನ್ನು ಕಟ್ಟಿಸಲು ಸಾಲ ತೆಗೆದುಕೊಳ್ಳದೆ ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ. ಹಾಗೂ ಮನೆ ಕಟ್ಟಿಸಬೇಕು ಎಂದಿದ್ದರೆ ಬ್ಯಾಂಕ್ ನಲ್ಲಿ ಗೃಹ ಸಾಲವನ್ನು (Home Loan) ತೆಗೆದುಕೊಳ್ಳಬಹುದು.
ಗೃಹ ಸಾಲಕ್ಕೆ ಬ್ಯಾಂಕ್ ಬಡ್ಡಿ!
ಇನ್ನು ನೀವು ಯಾವುದೇ ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳುತ್ತೀರಿ ಎಂದಾದರೆ ಮೊದಲು ಅಲ್ಲಿ ವಿಧಿಸಲಾಗುವ ಬಡ್ಡಿ ಮತ್ತು ಇತರ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಶೇಕಡ 9% ಬಡ್ಡಿ ದರದಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ನೀವು ದೀರ್ಘಾವಧಿಯ ಸಾಲವನ್ನು ತೆಗೆದುಕೊಂಡರೆ ಮಾಸಿಕ EMI ಕಡಿಮೆ ಇರುತ್ತದೆ. ಇಎಂಐ ಮೊತ್ತ ಸಾಲದ ಬಡ್ಡಿಯನ್ನು ಅವಲಂಬಿಸಿರುತ್ತದೆ ಮತ್ತು ಬಡ್ಡಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಅವಲಂಬಿತವಾಗಿದೆ.
ಪ್ರತಿ ತಿಂಗಳು 20 ಸಾವಿರ ಗಳಿಸಬಹುದಾದ ಪೋಸ್ಟ್ ಆಫೀಸ್ ಸ್ಕೀಮ್ ಇದು
ಉತ್ತಮ ಕ್ರೆಡಿಟ್ ಸ್ಕೋರ್ ಇದ್ರೆ ಬಡ್ಡಿ ಕಡಿಮೆ ಬರುತ್ತೆ!
300 ರಿಂದ 900 ಪಾಯಿಂಟ್ ಗಡ ನಡುವೆ ಕ್ರೆಡಿಟ್ ಸ್ಕೋರ್ (Credit Score) ಲೆಕ್ಕ ಹಾಕಲಾಗುತ್ತದೆ. ಬ್ಯಾಂಕ್ ನಿಯಮದ ಪ್ರಕಾರ 750ಕ್ಕಿಂತ ಹೆಚ್ಚಿನ ಪಾಯಿಂಟ್ ಹೊಂದಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಬಹುದು. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಲ್ಲಿ ಗೃಹ ಸಾಲವನ್ನು ಬ್ಯಾಂಕ್ ಮಂಜೂರು ಮಾಡುವುದಿಲ್ಲ ಅಥವಾ ಮಂಜೂರು ಮಾಡಿದರು ಬಡ್ಡಿ ತುಂಬಾನೇ ಜಾಸ್ತಿ ಇರುತ್ತದೆ.
15 ವರ್ಷಕ್ಕೆ 40 ಲಕ್ಷ ರೂಪಾಯಿ ಸಾಲ ಮಾಡಿದ್ರೆ EMI ಎಷ್ಟು ಬರುತ್ತೆ ಗೊತ್ತಾ?
ನಾವು ಇಲ್ಲಿ ಐಸಿಐಸಿಐ ಬ್ಯಾಂಕ್ ನ ಗೃಹ ಸಾಲದ ಲೆಕ್ಕಾಚಾರವನ್ನು ನೋಡೋಣ. ಈ ಬ್ಯಾಂಕ್ ನಲ್ಲಿ 15 ವರ್ಷಗಳ ಅವಧಿಗೆ 40 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡರೆ, 9% ಬಡ್ಡಿ ಆಧಾರದ ಮೇಲೆ ಪ್ರತಿ ತಿಂಗಳು 40,571 ರೂಪಾಯಿಗಳನ್ನ EMI ಆಗಿ ಪಾವತಿ ಮಾಡಬೇಕು. ಅಂದರೆ 33,02,719 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕು.
ಗೃಹ ಸಾಲವನ್ನು ತೆಗೆದುಕೊಳ್ಳುವುದು ಅನಿವಾರ್ಯವಾದರೂ ಕೂಡ ಇದು ದೊಡ್ಡ ಆರ್ಥಿಕ ಹೊರೆಯಾಗಿದೆ ಹಾಗಾಗಿ ಪ್ರತಿ ತಿಂಗಳು ನಿಮ್ಮ ಸಂಬಳಕ್ಕಿಂತ ಕಡಿಮೆ EMI ಬರುವ ರೀತಿಯಲ್ಲಿ ಸಾಲ ತೆಗೆದುಕೊಳ್ಳಿ. ಇಲ್ಲವಾದರೆ ಪ್ರತಿ ತಿಂಗಳ ವೆಚ್ಚವನ್ನು ಭರಿಸುವುದಕ್ಕೆ ಕಷ್ಟಪಡಬೇಕಾಗುತ್ತದೆ.
How much EMI will pay if You take a home loan of Rs 40 lakh from ICICI Bank