ಪ್ರತಿ ತಿಂಗಳು 5,000 ರೂಪಾಯಿ ಪೆನ್ಷನ್ ಕೊಡುವ ಈ ಯೋಜನೆಗೆ ಈಗಲೇ ಸೇರಿಕೊಳ್ಳಿ
- ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ರೂ.5,000 ಪಿಂಚಣಿ ಫಿಕ್ಸ್
- ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ
- 18 ರಿಂದ 40 ವರ್ಷ ವಯಸ್ಸಿನವರು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
Pension Scheme : ನಾವು ಪ್ರತಿ ತಿಂಗಳು ಹಣವನ್ನು ದುಡಿಯುವುದು ಮಾತ್ರವಲ್ಲ ಅದನ್ನು ಉಳಿತಾಯ ಮಾಡುವ ಬಗ್ಗೆಯೂ ಕೂಡ ಯೋಚನೆ ಮಾಡಬೇಕು. ಬರೀ ಖರ್ಚು ವೆಚ್ಚವನ್ನೇ ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಹೀಗಾಗಿ ನೀವು ಸ್ವಲ್ಪ ಸ್ವಲ್ಪವೇ ಉಳಿತಾಯ ಮಾಡುತ್ತಾ ಬಂದರೆ ವೃದ್ಧಾಪ್ಯದಲ್ಲಿ ಪಿಂಚಣಿಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿಯೇ ಸರ್ಕಾರ ಕೆಲವೊಂದು ಉತ್ತಮ ಹೂಡಿಕೆ ಯೋಜನೆಯನ್ನು ಪರಿಚಯಿಸಿದೆ.
ಸಾಕಷ್ಟು ವರ್ಷ EMI ಕಟ್ಟುವ ಬದಲು ಈ ರೀತಿ ಮಾಡಿ ಬೇಗ ಲೋನ್ ಮುಗಿಯುತ್ತೆ!
ಅಟಲ್ ಪಿಂಚಣಿ ಯೋಜನೆ
ಜನರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಟೆನ್ಶನ್ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು (Atal Pension Scheme) ಪರಿಚಯಿಸಿದೆ. ಯೋಜನೆಯಲ್ಲಿ ಅರವತ್ತು ವರ್ಷ ವಯಸ್ಸಿನಿಂದ ಪ್ರತಿ ತಿಂಗಳು 5,000 ವರೆಗೆ ಪಿಂಚಣಿಯನ್ನು ಪಡೆದುಕೊಳ್ಳಲು ಅವಕಾಶವಿದೆ.
ಅಟಲ್ ಪಿಂಚಣಿ ಯೋಜನೆಗೆ ಸೇರುವುದು ಹೇಗೆ?
ಈ ಯೋಜನೆಗೆ 18 ರಿಂದ 40 ವರ್ಷ ವಯಸ್ಸಿನ ಒಳಗಿನವರು ಹೂಡಿಕೆ ಆರಂಭಿಸಬಹುದು ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಅಟಲ್ ಪಿಂಚಣಿ ಯೋಜನೆಗೆ ಖಾತೆ ತೆರೆಯಬಹುದು. ಆದರೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವವರು ಹಾಗೂ ತೆರಿಗೆ ಪಾವತಿಸುವವರು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವಂತಿಲ್ಲ.
ಒಂದು ಲೆಕ್ಕಾಚಾರದ ಪ್ರಕಾರ ನಿಮಗೆ 32 ವರ್ಷ ವಯಸ್ಸಾಗಿದ್ದರೆ ಪ್ರತಿ ತಿಂಗಳು 689 ರೂಪಾಯಿಗಳನ್ನು ನೀವು ಹೂಡಿಕೆ ಮಾಡಬೇಕು. ಆಗ ನಿಮಗೆ ರೂ.5,000 ಪಿಂಚಣಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದು.
ಚೆಕ್ ಬರೆಯುವಾಗ ಇದೊಂದು ಮಿಸ್ಟೇಕ್ ಮಾಡಿದ್ರೆ ದೊಡ್ಡ ಸಮಸ್ಯೆ ಆಗೋದು ಪಕ್ಕ
ಅದೇ ರೀತಿ 18 ವರ್ಷ ವಯಸ್ಸಿನವರಾಗಿದ್ದರೆ ಪ್ರತಿ ತಿಂಗಳು ಕೇವಲ 210 ಅಂದರೆ ದಿನಕ್ಕೆ ಏಳು ರೂಪಾಯಿಗಳನ್ನು ಉಳಿತಾಯ ಮಾಡುತ್ತಾ ಬಂದರೆ ಐದು ಸಾವಿರ ಪಿಂಚಣಿ ನಿಮ್ಮ ಕೈ ಸೇರುತ್ತದೆ. ಇದು ನೀವು 40 ವರ್ಷ ವಯಸ್ಸಿನಲ್ಲಿದ್ದು, ನಿಮಗೆ 60 ವರ್ಷ ವಯಸ್ಸಾದಾಗ ಪಿಂಚಣಿ ಬೇಕು ಎಂಬುದಾದರೆ ಪ್ರತಿ ತಿಂಗಳು 1,454 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
ಅಟಲ್ ಪಿಂಚಣಿ ಯೋಜನೆಯಲ್ಲಿ ಈಗಾಗಲೇ 7.15 ಕೋಟಿ ಜನರು ಹೂಡಿಕೆ ಆರಂಭಿಸಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ವೃದ್ಧಾಪ್ಯ ಜೀವನವನ್ನು ಸೆಕ್ಯೂರ್ ಮಾಡಲು ಇರುವ ಉತ್ತಮ ಯೋಜನೆಗಾಗಿದ್ದು ತಪ್ಪದೇ ಹೂಡಿಕೆ ಆರಂಭಿಸಿ.
Join This Scheme Now to Receive a Monthly Pension of ₹5,000