ಸ್ಟೇಟ್ ಬ್ಯಾಂಕ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ 20 ಲಕ್ಷ ಆರ್ಥಿಕ ನೆರವು
ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಎಸ್‌ಬಿಐ ಆಶಾ ವಿದ್ಯಾರ್ಥಿವೇತನ, ಪ್ರತಿಭಾವಂತ ಬಡ ವಿದ್ಯಾರ್ಥಿಗಳು ವಿದೇಶದಲ್ಲಿ ಓದಲು ಸುವರ್ಣ ಅವಕಾಶ. ಇಲ್ಲಿದೆ ಸಂಪೂರ್ಣ ಮಾಹಿತಿ
- ಸ್ಟೇಟ್ ಬ್ಯಾಂಕ್ ವತಿಯಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು
- 20 ಲಕ್ಷ ರೂ.ವರೆಗೆ ವಿದ್ಯಾರ್ಥಿವೇತನ, ನಿರ್ದಿಷ್ಟ ಪ್ರಮಾಣದ ಶೈಕ್ಷಣಿಕ ವೆಚ್ಚ ಭರಣೆ
- ಮಾರ್ಚ್ 31, 2025 ಅರ್ಜಿ ಸಲ್ಲಿಸಲು ಕೊನೆಯ ದಿನ
ವಿದೇಶದಲ್ಲಿ ಓದಲು ಅವಕಾಶ: ಎಸ್‌ಬಿಐ ಆಶಾ ವಿದ್ಯಾರ್ಥಿವೇತನ 2025
SBI Education Scholarship: ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ (Study in abroad) ಉನ್ನತ ಶಿಕ್ಷಣ ಪಡೆಯುವ ಕನಸು ಇರುತ್ತದೆ. ಆದರೆ ಹಣಕಾಸಿನ ಅಡಚಣೆ ಇದನ್ನು ಸಾಧ್ಯವಾಗದಂತೆ ಮಾಡಬಹುದು.
ಈ ಸಮಸ್ಯೆಯನ್ನು ಪರಿಹರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಫೌಂಡೇಶನ್ ವಿಶೇಷ ವಿದ್ಯಾರ್ಥಿವೇತನ (Education Scholarship) ಯೋಜನೆಯನ್ನು ಘೋಷಿಸಿದೆ.
“ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ ಫಾರ್ ಓವರ್ಸೀಸ್ 2025” ಎಂಬ ಹೆಸರಿನ ಈ ಯೋಜನೆಯಡಿ, ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ರೂ.20 ಲಕ್ಷವರೆಗೆ ಅಥವಾ ಒಟ್ಟು ಶೈಕ್ಷಣಿಕ ವೆಚ್ಚದ ಶೇಕಡಾ 50ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಬರೀ 100 ರೂಪಾಯಿ ಕಟ್ಟಿ 2.14 ಲಕ್ಷ ತಗೊಂಡು ಹೋಗಿ! ಬಂಪರ್ ಸ್ಕೀಮ್
ಯಾರಿಗೆ ಈ ವಿದ್ಯಾರ್ಥಿವೇತನ?
ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿದೇಶದ (Overseas) ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಸ್ನಾತಕೋತ್ತರ (Postgraduate) ಅಥವಾ ಅದಕ್ಕಿಂತ ಮೇಲ್ಮಟ್ಟದ ಕೋರ್ಸ್ ಪ್ರವೇಶ ಪಡೆದಿರಬೇಕು.
ಅಲ್ಲದೇ, ಈ ವಿದ್ಯಾರ್ಥಿವೇತನ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ.
- ಶೈಕ್ಷಣಿಕ ಅರ್ಹತೆ: ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳಿಂದುತ್ತೀರ್ಣರಾಗಿರಬೇಕು
- ಆರ್ಥಿಕ ಮಾನದಂಡ: ಕುಟುಂಬದ ವಾರ್ಷಿಕ ಆದಾಯ ರೂ.6 ಲಕ್ಷಕ್ಕಿಂತ ಕಡಿಮೆ ಇರಬೇಕು
ಇದನ್ನೂ ಓದಿ: ₹1,119ಕ್ಕೆ ವಿಮಾನ ಪ್ರಯಾಣ! ಆಕಾಶದಲ್ಲಿ ಹಾರಾಡೋ ಕನಸು ನೆರವೇರಿಸಿಕೊಳ್ಳಿ
ಎಷ್ಟು ಹಣ ದೊರಕಲಿದೆ?
ಅರ್ಹ ವಿದ್ಯಾರ್ಥಿಗಳಿಗೆ ರೂ.20 ಲಕ್ಷವರೆಗೆ ಅಥವಾ ಶೈಕ್ಷಣಿಕ ವೆಚ್ಚದ ಶೇಕಡಾ 50ರಷ್ಟು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ?
ಆಸಕ್ತ ವಿದ್ಯಾರ್ಥಿಗಳು 2025 ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ಪ್ರತಿ ತಿಂಗಳು ₹5000 ಪಿಂಚಣಿ ಸಿಗುತ್ತೆ! ಹಿರಿಯ ನಾಗರಿಕರಿಗೆ ಬಂಪರ್ ಸೌಲಭ್ಯ
ಹೇಗೆ ಅರ್ಜಿ ಸಲ್ಲಿಸಬಹುದು?
ಅಭ್ಯರ್ಥಿಗಳು “Buddy4Study” ವೇದಿಕೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಲಿಂಕ್: SBI Asha Scholarship Application (https://www.buddy4study.com/application/SBIFS12/instruction)
SBI Asha Scholarship for Overseas 2025
Our Whatsapp Channel is Live Now 👇