ಹೊಸ ಸ್ಕೀಮ್, ಕರೆಂಟ್ ಬಿಲ್ ಕಟ್ಟೋದೇ ಬೇಡ! 40 ಲಕ್ಷ ಮನೆಗಳಿಗೆ ಫ್ರೀ ಫ್ರೀ ಫ್ರೀ
ಎಸ್‌ಬಿಐ ಇತ್ತೀಚೆಗೆ ಪರಿಚಯಿಸಿದ ಸೂರ್ಯಘರ್ ಸೌರ ವಿದ್ಯುತ್ ಯೋಜನೆಯ ಮೂಲಕ ಮನೆಮಂದಿಗೆ ಉಚಿತ ವಿದ್ಯುತ್ ಒದಗಿಸಲು ತೀರ್ಮಾನಿಸಿದೆ. 2027ರ ಒಳಗೆ 40 ಲಕ್ಷ ಮನೆಗಳನ್ನು ಗುರಿಯಾಗಿಟ್ಟುಕೊಂಡಿದೆ.

- 3KW ರಿಂದ 10KWವರೆಗೆ ಸೌರ ರೂಫ್ಟಾಪ್ ವ್ಯವಸ್ಥೆಗೆ ಸಾಲ ಲಭ್ಯ
- ಯಾವುದೇ ಪ್ರಾಸೆಸಿಂಗ್ ಫೀ ಇಲ್ಲ, 6 ತಿಂಗಳ ಮರಟೋರಿಯಂ ಪೀರಿಯಡ್
- ಕನಿಷ್ಠ ₹2 ಲಕ್ಷ ಸಾಲಕ್ಕೆ CIBIL ಅಗತ್ಯವಿಲ್ಲ, ₹6 ಲಕ್ಷದವರೆಗೆ ಲೋನ್ ಲಭ್ಯ
ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆಯೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಜನತೆಗೆ ಹೊಸ ಆಫರ್ ನೀಡಿದೆ. SBI ಸೂರ್ಯಘರ್ ಸೌರ ಲೋನ್ ಯೋಜನೆ (Surya Ghar Solar Loan Scheme) ಎಂಬ ಹೆಸರಿನ ಈ ಯೋಜನೆಯು ದೇಶದ renewable energy ಗುರಿಗಳನ್ನು ನೆರವೇರಿಸಲು ಆರಂಭಿಸಲಾಗಿದೆ.
ಈ ಯೋಜನೆಯು 2027ರ ವೇಳೆಗೆ ಕನಿಷ್ಠ 40 ಲಕ್ಷ ಮನೆಗಳಿಗೆ ಸೌರ ಶಕ್ತಿ ತಲುಪಿಸುವ ಗುರಿಯನ್ನು ಹೊಂದಿದ್ದು, ಇದರಿಂದ Net Zero Emissions ಗುರಿಯತ್ತ ಭಾರತ ಹೆಜ್ಜೆ ಹಾಕಲಿದೆ. ಬ್ಯಾಂಕ್‌ನ 70ನೇ ವಾರ್ಷಿಕೋತ್ಸವದ ಅಂಗವಾಗಿ ಈ ಯೋಜನೆಯ ಘೋಷಣೆ ನಡೆದಿದೆ.
ಇದನ್ನೂ ಓದಿ: ಆಧಾರ್‌ನಲ್ಲಿ ಮೊಬೈಲ್ ನಂಬರ್ ಆನ್‌ಲೈನ್‌ನಲ್ಲೇ ಬದಲಾಯಿಸಬಹುದಾ! ಇಲ್ಲಿದೆ ಮಾಹಿತಿ
ಈ ಯೋಜನೆಯಡಿಯಲ್ಲಿ ಮನೆಯ ಮೇಲೆ 3KW ರಿಂದ 10KWವರೆಗೆ ಸೌರ ಪ್ಯಾನಲ್‌ಗಳನ್ನು (Solar Panel) ಸ್ಥಾಪನೆ ಮಾಡಬಹುದು. 3KWವರೆಗೆ ಹೋದರೆ ₹2 ಲಕ್ಷವರೆಗೆ, 10KWವರೆಗೆ ಹೋದರೆ ₹6 ಲಕ್ಷವರೆಗೆ solar loan ಲಭ್ಯವಿದೆ. ₹2 ಲಕ್ಷವರೆಗೆ ಸಾಲ ಪಡೆಯುವವರಿಗೆ CIBIL Score ಅವಶ್ಯಕವಿಲ್ಲ. ಆದರೆ ₹6 ಲಕ್ಷವರೆಗೆ ಸಾಲ ಬೇಕಾದರೆ ಕನಿಷ್ಠ 650 ಸ್ಕೋರ್ ಇರಬೇಕು.
interest rate ಶೇಕಡಾ 6.5% ರಿಂದ 8.65% ವರೆಗೆ ಇರುತ್ತದೆ. 120 ತಿಂಗಳ ಅವಧಿಯಲ್ಲಿ ಈ ಸಾಲವನ್ನು ಹಿಂತಿರುಗಿಸಬಹುದಾಗಿದೆ. ಇದರೊಳಗೆ ಆರಂಭದ 6 ತಿಂಗಳು moratorium period ಇರುತ್ತದೆ. ಇದಲ್ಲದೆ ಈ ಲೋನ್‌ಗಾಗಿ ಯಾವುದೇ processing charges ಇಲ್ಲ.
ಇದನ್ನೂ ಓದಿ: ಚಿನ್ನದ ಬೆಲೆ ಮಹಾ ಜಿಗಿತ, ಚಿನ್ನಾಭರಣ ಪ್ರಿಯರಿಗೆ ಬೇಸರದ ಸುದ್ದಿ! ಇಲ್ಲಿದೆ ಬೆಂಗಳೂರು ಅಪ್ಡೇಟ್
ಕೇಂದ್ರ ಸರ್ಕಾರದ ಸಹಾಯದಿಂದ ಈ ಯೋಜನೆಗೆ ಸಬ್ಸಿಡಿಯೂ ಲಭ್ಯ. 1KWಗೆ ₹30 ಸಾವಿರ, 2KWಗೆ ₹60 ಸಾವಿರ, 3KWಗೆ ₹78 ಸಾವಿರದವರೆಗೆ government subsidy ಲಭ್ಯವಿದ್ದು, ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಖಾತೆಗೆ ಜಮೆಯಾಗುತ್ತದೆ. ಇದನ್ನು claim ಮಾಡಲು Suryaghar.gov.in ಮೂಲಕ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ನಿಮ್ಮ ಪತ್ನಿ ಹೆಸರಲ್ಲಿ 2 ಲಕ್ಷ ಎಫ್‌ಡಿ ಇಟ್ರೆ 2 ವರ್ಷದಲ್ಲಿ ಒನ್ ಟು ಡಬಲ್ ಲಾಭ
ಲೋನ್ ಪಡೆಯಲು ಅರ್ಹತೆ: ಗರಿಷ್ಠ ವಯಸ್ಸು 65, ಆದರೆ ಲೋನ್ ಮರುಪಾವತಿ 70ರ ಒಳಗೆ ಆಗಬೇಕು. ಸೌರ ಪ್ಯಾನಲ್ ಹಾಕುವ ಮನೆ ಮೇಲೆ ಸಂಪೂರ್ಣ ಹಕ್ಕು ಇರಬೇಕು. ಇತ್ತೀಚಿನ ವಿದ್ಯುತ್ ಬಿಲ್, Aadhaar card, PAN card, ಬ್ಯಾಂಕ್ ಪಾಸ್ ಬುಕ್, IT ರಿಟರ್ನ್ ಹಾಗೂ ವೇತನ ಸ್ಲಿಪ್‌ಗಳು ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನ: ಮೊದಲಿಗೆ jansamarth.in ಗೆ ತೆರಳಿ ಲೋನ್ ನೋಂದಣಿ ಮಾಡಿ. ಎಲ್ಲ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ, ಅರ್ಜಿಯನ್ನು ನಿಕಟದ ಎಸ್‌ಬಿಐ ಶಾಖೆಗೆ ಸಲ್ಲಿಸಿ. ಅರ್ಜಿ ಒಪ್ಪಿಗೆ ದೊರಕಿದ ಬಳಿಕ ಹಣ ನೇರವಾಗಿ vendor ಖಾತೆಗೆ ಜಮೆಯಾಗುತ್ತದೆ ಮತ್ತು solar installation ಪ್ರಕ್ರಿಯೆ ಆರಂಭವಾಗುತ್ತದೆ.
SBI Solar Free Electricity Scheme for 40 Lakh Homes





