ಈ ಒಂದು ಸ್ಕಿಮ್ ನಲ್ಲಿ ಉಳಿತಾಯ ಮಾಡಿದ್ರೆ ಪ್ರತಿ ತಿಂಗಳು 5500 ಪಿಂಚಣಿ ಸಿಗುತ್ತೆ

ಅಂಚೆ ಕಚೇರಿಯ 'ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ’ (POMIS) ಅತ್ಯುತ್ತಮ ಯೋಜನೆಯಾಗಿದ್ದು ಇಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.

  • ಮನೆಯಲ್ಲಿಯೇ ಕುಳಿತು ಪ್ರತಿ ತಿಂಗಳು ಪಡೆಯಿರಿ 5,500 ಪಿಂಚಣಿ
  • POMIS ಬಡವರಿಗೂ ಆರ್ಥಿಕ ನೆಲೆ ಒದಗಿಸುವ ಸುಭದ್ರ ಸ್ಕಿಮ್
  • ಒಂದು ಸಾವಿರದಿಂದ 9 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅವಕಾಶ

Post Office Scheme : ಭವಿಷ್ಯವನ್ನು ಭದ್ರವಾಗಿಸಿಕೊಳ್ಳಲು ಆರ್ಥಿಕವಾಗಿ ಯಾವುದೇ ತೊಂದರೆ ಇಲ್ಲದೆ ವೃದ್ಧಾಪ್ಯವನ್ನು ಮುಂದುವರಿಸಲು ಆರಂಭದಿಂದಲೇ ಒಂದಷ್ಟು ಸುರಕ್ಷಿತ ಹೂಡಿಕೆಯನ್ನು ಮಾಡುವುದು ಒಳ್ಳೆಯದು. ಸಾಕಷ್ಟು ಜನ ಕೆಲಸ ಸಿಕ್ಕ ತಕ್ಷಣ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡುತ್ತಾರೆ.

ಇದರಿಂದ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಈ ರೀತಿ ಹೂಡಿಕೆ ಮಾಡುವಾಗ ಸುರಕ್ಷಿತ ಹೂಡಿಕೆ ಯಾವುದು ಎನ್ನುವ ಪ್ರಶ್ನೆ ಮೂಡುತ್ತದೆ. ನೀವು ಕೂಡ ಇಂತಹ ಗೊಂದಲದಲ್ಲಿದ್ದರೆ ಇಲ್ಲಿದೆ ಸೂಕ್ತ ಉತ್ತರ.

ಅಂಚೆ ಕಚೇರಿಯ ಬಂಪರ್ ಸ್ಕೀಮ್!

ಭಾರತೀಯ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ರೀತಿಯ ಹಣ ಕಳೆದುಕೊಳ್ಳುವ ಭಯ ಇರುವುದಿಲ್ಲ ಇಲ್ಲಿ ನೀವು ಇಟ್ಟ ಹಣ 100% ಸುರಕ್ಷಿತವಾಗಿರುತ್ತದೆ. ಇನ್ನು ಅಜಯ್ ಕಚೇರಿಯಲ್ಲಿ ಅತಿ ಕಡಿಮೆ ಹೂಡಿಕೆಯಿಂದ ಹೆಚ್ಚಿನ ಹೂಡಿಕೆಗೆ ಸಂಬಂಧಪಟ್ಟ ಸ್ಕೀಮ್ ಗಳು ಲಭ್ಯ ಇವೆ, ಇತ್ತೀಚಿಗೆ ಪರಿಚಯಿಸಲಾದ ಹೊಸ ಸ್ಕೀಮ್ ಒಂದರಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿ ಪ್ರತಿ ತಿಂಗಳು 5,500 ರೂ. ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

Indian Man Counting Money

ಪ್ರತಿ ತಿಂಗಳು ಸಿಗುತ್ತೆ ರೂ 5,500 ಪಿಂಚಣಿ!

ಅಂಚೆ ಕಚೇರಿಯ ‘ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ’ (POMIS) ಅತ್ಯುತ್ತಮ ಯೋಜನೆಯಾಗಿದ್ದು ಇಲ್ಲಿ ಹೂಡಿಕೆ ಮಾಡಿದರೆ ಯಾವುದೇ ಮಾರುಕಟ್ಟೆಯ ಅಪಾಯವು ಇರುವುದಿಲ್ಲ ಜೊತೆಗೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು ಪಿಂಚಣಿಯನ್ನು (Pension Scheme) ಪಡೆದುಕೊಳ್ಳಬಹುದು.

ನಿಗದಿತ ಆದಾಯ ಪಡೆದುಕೊಳ್ಳಲು ಒಂದು ಬಾರಿಗೆ ಹೂಡಿಕೆ ಮಾಡಿದರೆ ಸಾಕು. ಯಾವುದೇ ಸರ್ಕಾರಿ ನೌಕರಿ ಇಲ್ಲದೆ ಇರುವವರೆಗೂ ಕೂಡ ಪಿಂಚಣಿ ಪಡೆದುಕೊಳ್ಳಬಹುದು.

Indian Money
Indian Money (Photo Credit : Pexels)

ಎಷ್ಟು ಹೂಡಿಕೆ ಮಾಡಬೇಕು?

ಇದಕ್ಕಾಗಿ ನೀವು ಮೊದಲು ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬೇಕು. ಕನಿಷ್ಠ ಸಾವಿರ ರೂಪಾಯಿಗಳಿಂದ ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಇನ್ನು ಜಂಟಿ ಖಾತೆಯ ಮೂಲಕ ಹೂಡಿಕೆ ಮಾಡುವವರಿಗೆ 15 ಲಕ್ಷ ರೂಪಾಯಿಗಳ ಮಿತಿ ಇದೆ.

ಪ್ರತಿ ಐದು ವರ್ಷಗಳಿಗೊಮ್ಮೆ ಒಂದು ಮೊತ್ತದ ಹಣವನ್ನು ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಬಡ್ಡಿಯ ಹಣವನ್ನೇ ಪಿಂಚಣಿಯಾಗಿ ಪಡೆದುಕೊಳ್ಳಬಹುದು. ಉದಾಹರಣೆಗೆ 9 ಲಕ್ಷ ರೂಪಾಯಿಗಳನ್ನು ಒಮ್ಮೆಲೇ ಹೂಡಿಕೆ ಮಾಡಿದರೆ 7.4% ಬಡ್ಡಿದರದಲ್ಲಿ, ಪ್ರತಿ ತಿಂಗಳು rs.5,500 ಪಿಂಚಣಿ ಪಡೆದುಕೊಳ್ಳಲು ಸಾಧ್ಯ.

ಯಾವುದೇ ವ್ಯಕ್ತಿ ಅಂಚೆ ಕಚೇರಿಯಲ್ಲಿ ಮಾಸಿಕ ಆದಾಯ ಯೋಜನೆಯನ್ನು ಆರಂಭಿಸಬಹುದು. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್, ಸಂಪರ್ಕ ಸಂಖ್ಯೆ ಹಾಗೂ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಆಧಾರವಾಗಿ ನೀಡಬೇಕು.

ಒಟ್ಟಿನಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಬಹುದು. ಯಾವುದೇ ರೀತಿಯ ಟಿಡಿಎಸ್ ಕಡಿತಗೊಳ್ಳದೆ ಇರುವುದರಿಂದ ಸಂಪೂರ್ಣ ಆದಾಯ ನಿಮ್ಮ ಕೈ ಸೇರುತ್ತದೆ.

Secure Your Future with Post Office POMIS for Monthly Pension of 5,500

(Photo Credit : Pexels)

English Summary
Related Stories