ನಮ್ಮ ದೇಶದ ಹಿರಿಯ ನಾಗರೀಕರಿಗಾಗಿ ಕೇಂದ್ರ ಸರ್ಕಾರವು ಹಲವು ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ನಿವೃತ್ತಿ ಬಳಿಕ ನೆಮ್ಮದಿಯ ಜೀವನ ನಡೆಸಬಹುದು. ಇದೀಗ ಹಿರಿಯ ನಾಗರೀಕರಿಗೆ ಕೇಂದ್ರ ಸರ್ಕಾರದ (Central Government Scheme) ಹಣಕಾಸು ಸಚಿವರು (Finance Minister) ಒಂದು ಭರ್ಜರಿಯಾದ ಗುಡ್ ನ್ಯೂಸ್ ನೀಡಿದ್ದಾರೆ.
ಹಿರಿಯರು ನಾಗರೀಕರು ಉಳಿತಾಯ ಮಾಡಲು ಸೂಕ್ತವಾದ ಮತ್ತು ಸುರಕ್ಷಿತವಾದ ಯೋಜನೆಗಳು ಎಂದರೆ ಅವು FD ಮತ್ತು ಸಣ್ಣ ಉಳಿತಾಯ ಯೋಜನೆಗಳಾಗಿದೆ. ಇವುಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ (Increased Interest Rate). ಮ್ಯಾಕ್ಸಿಮಮ್ ಬಡ್ಡಿದರ ಕೊಡಲಾಗುತ್ತಿದ್ದು, ಹಿರಿಯ ನಾಗರೀಕರು ಹೂಡಿಕೆ ಮಾಡಲು ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.
2023ರ ಜುಲೈ ಇಂದ ಸೆಪ್ಟೆಂಬರ್ ವರೆಗು ಹಿರಿಯ ನಾಗರೀಕರ ಉಳಿತಾಯ ಯೋಜನೆಯ (Senior Citizens Savings Scheme) ಬಡ್ಡಿದರವನ್ನು 8.2% ಮಾಡಲಾಗಿದೆ. ಈ ವರ್ಷದ ಬಜೆಟ್ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಟ್ಯಾಕ್ಸ್ ಕಟ್ಟುವ ಹೊಸ ಪದ್ಧತಿ ಘೋಷಣೆ ಮಾಡುವುದರ ಜೊತೆಗೆ ಹಿರಿಯ ನಾಗರೀಕರ ಉಳಿತಾಯ ಯೋಜನೆಯ ಬಗ್ಗೆ ಕೂಡ ಪ್ರಮುಖ ವಿಚಾರವನ್ನು ತಿಳಿಸಿದ್ದರು.
ಅದೇನು ಎಂದರೆ, ಹಿರಿಯ ನಾಗರೀಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಹಣದ ಮಿತಿಯನ್ನು ಹೆಚ್ಚಿಸಲಾಗಿದೆ. ಇಷ್ಟು ವರ್ಷಗಳ ಕಾಲ 15 ಲಕ್ಷ ರೂಪಾಯಿ ಹೂಡಿಕೆ ಮಾಡುವ ಅವಕಾಶ ಈಗ ಮಿತಿಯನ್ನು ಹೆಚ್ಚಿಸಲಾಗಿದ್ದು, 30ಲಕ್ಷ ರೂಪಾಯಿಯವರೆಗು ಹೂಡಿಕೆ (Money Investment) ಮಾಡಬಹುದು.
ಇದರಿಂದ ಹಿರಿಯ ನಾಗರೀಕರು ಹೆಚ್ಬು ಉಳಿತಾಯ ಮಾಡುವುದರ ಜೊತೆಗೆ ಅವರಿಗೆ ಸಿಗುವ ಬಡ್ಡಿ ಮೊತ್ತ ಕೂಡ ಜಾಸ್ತಿಯಾಗಿದೆ. ಈ ವರ್ಷ ಸೆಪ್ಟೆಂಬರ್ ತಿಂಗಳ ತ್ರೈಮಾಸಿಕ ಸಮಯದ ವೇಳೆಗೆ ಬಡ್ಡಿದರ 8.2% ಇರಲಿದೆ. ಕಳೆದ ತ್ರೈಮಾಸಿಕದ ವೇಳೆ 8% ಇತ್ತು. ಇದಕ್ಕಿಂತಲೂ ಮೊದಲು 15ಲಕ್ಷ ಹೂಡಿಕೆ ಮತ್ತು 7.6% ಬಡ್ಡಿದರ ಇತ್ತು.
ಇದೀಗ ಹೂಡಿಕೆ ಮಿತಿ ಜಾಸ್ತಿ ಮಾಡಿರುವುದರಿಂದ ಅದಕ್ಕೆ ಸಿಗುವ ಬಡ್ಡಿ ಹಣ ಕೂಡ ಜಾಸ್ತಿಯಾಗುತ್ತದೆ. ಹಾಗೆಯೇ ಪ್ರತಿ ತಿಂಗಳು ಬರುವ ಆದಾಯ ಕೂಡ ಜಾಸ್ತಿಯಾಗಿದೆ. ಮೊದಲು ನೀವು ಗರಿಷ್ಠ ಮಿತಿಯಲ್ಲಿ 15ಲಕ್ಷ ಹೂಡಿಕೆ ಮಾಡಿದರೆ, 7.6% ಬಡ್ಡಿ ದರದಲ್ಲಿ ನಿಮ್ಮ ಯೋಜನೆ ಮೆಚ್ಯುರ್ ಆಗುವ ವೇಳೆಗೆ ₹20.70ಲಕ್ಷ ರೂಪಾಯಿ ಆದಾಯ ಪಡೆಯಬಹುದಿತ್ತು.
ಇದು ವರ್ಷಕ್ಕೆ ₹1.14ಲಕ್ಷ ರೂಪಾಯಿ ಆದಾಯ, ತಿಂಗಳಿಗೆ ₹9500 ರೂಪಾಯಿ ಆದಾಯ ಬರುತ್ತಿತ್ತು. ಈಗ ಹೂಡಿಕೆ ಮಿತಿ ಕೂಡ ಹೆಚ್ಚಾಗಿದೆ. ಈಗ ನೀವು ಗರಿಷ್ಠ ಹೂಡಿಕೆ ₹30ಲಕ್ಷ ಹೂಡಿಕೆ ಮಾಡಿದರೆ, ಇದಕ್ಕೆ ಬಡ್ಡಿದರ 8.2% ಸಿಗುತ್ತದೆ. ಈ ಯೋಜನೆಯ ಮೆಚ್ಯುರಿಟಿ ಸಮಯ 5 ವರ್ಷಗಳು. ಮೆಚ್ಯುರಿಟಿ ನಂತರ ನಿಮ್ಮ ಕೈಗೆ ₹42.3 ಲಕ್ಷ ರೂಪಾಯಿ ಸಿಗುತ್ತದೆ..
ವರ್ಷಕ್ಕೆ ₹2.46ಲಕ್ಷ ರೂಪಾಯಿ ಹಾಗೆಯೇ ತಿಂಗಳಿಗೆ ₹20,500 ರೂಪಾಯಿ ಆಗುತ್ತದೆ. ಇದು ಹಿರಿಯ ನಾಗರೀಕರಿಗಾಗಿ ಶುರುವಾಗಿರುವ ಹೊಸ ಯೋಜನೆ. ಇದರಲ್ಲಿ ಗಂಡ ಹೆಂಡತಿ ಇಬ್ಬರು ಸೆಪರೇಟ್ ಆಗಿ ಅಥವಾ ಜಂಟಿ ಖಾತೆ ಶುರು ಮಾಡಬಹುದು. ಪ್ರತಿ ತಿಂಗಳು ಬಡ್ಡಿ ಹಣವನ್ನು ಪಡೆಯಬಹುದು, ಈ ಹೂಡಿಕೆಯಲ್ಲಿ ನಿಮಗೆ ₹1.5ಲಕ್ಷ ರೂಪಾಯಿಯ ವರೆಗು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
senior citizens will get 25000 good news by finance minister
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.