ರಾಂಗ್ ನಂಬರ್‌ಗೆ ಹಣ ಕಳಿಸಿದ್ದೀರಾ? ಟೆನ್ಷನ್ ಬೇಡ, ಹೀಗೆ ಮಾಡಿ ತಕ್ಷಣ ರಿಟರ್ನ್ ಬರುತ್ತೆ

ಯುಪಿಐ ಮೂಲಕ ತಪ್ಪು ನಂಬರ್ ಅಥವಾ ತಪ್ಪು ಐಡಿಗೆ ಹಣ ಕಳಿಸಿದರೆ ಆತಂಕ ಬೇಡ. ಸರಿಯಾದ ಕ್ರಮ ಅನುಸರಿಸಿದರೆ ನಿಮ್ಮ ಹಣವನ್ನು ಬೇಗನೆ ವಾಪಸ್ ಪಡೆಯಬಹುದು. ತಿಳಿದುಕೊಳ್ಳಿ ಸಂಪೂರ್ಣ ವಿಧಾನ.

UPI Payment: ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಇಂದು ಜಗತ್ತಿಗೆ ಮಾದರಿಯಾಗಿದೆ. ಚಹಾ ಅಂಗಡಿ ಇಂದ ದೊಡ್ಡ ಶಾಪಿಂಗ್ ಮಾಲ್‌ವರೆಗೆ ಎಲ್ಲೆಡೆ ಯುಪಿಐ (UPI) ಪಾವತಿಯ ಅಲೆ ಸಾಗಿದೆ. ಆದರೆ ಕೆಲವೊಮ್ಮೆ ಅಜಾಗರೂಕತೆಯಿಂದ ತಪ್ಪು ನಂಬರ್ ಅಥವಾ ತಪ್ಪು ಯುಪಿಐ ಐಡಿಗೆ ಹಣ ಕಳುಹಿಸುವ ಘಟನೆಗಳು ನಡೆಯುತ್ತವೆ.

ಆ ಕ್ಷಣದಲ್ಲಿ ಹೃದಯವೇ ನಿಂತಂತಾಗುತ್ತದೆ, “ಈ ಹಣ ಹಿಂತಿರುಗುತ್ತದಾ?” ಎಂಬ ಭಯ ಹುಟ್ಟುತ್ತದೆ. ಆದರೆ ಈಗ ಆತಂಕ ಪಡುವ ಅಗತ್ಯವಿಲ್ಲ, ಸರಿಯಾದ ಕ್ರಮ ಅನುಸರಿಸಿದರೆ ನಿಮ್ಮ ಹಣ ವಾಪಸ್ ಪಡೆಯಬಹುದು.

ಮೊದಲು ಮಾಡಬೇಕಾದದ್ದು ನೀವು ಹಣ ಕಳುಹಿಸಿದ ಆಪ್‌ನಲ್ಲೇ ಫಿರ್ಯಾದ್ (complaint) ಸಲ್ಲಿಸುವುದು. ಉದಾಹರಣೆಗೆ ನೀವು Google Pay, PhonePe ಅಥವಾ Paytm ಬಳಕೆದಾರರಾಗಿದ್ದರೆ, ಆಪ್ ತೆರೆಯಿರಿ ಮತ್ತು Transaction History ವಿಭಾಗಕ್ಕೆ ಹೋಗಿ. ತಪ್ಪಾದ ವ್ಯವಹಾರವನ್ನು ಆಯ್ಕೆಮಾಡಿ “Help” ಅಥವಾ “Report Issue” ಕ್ಲಿಕ್ ಮಾಡಿ. ನಂತರ “Wrong UPI Transaction” ಆಯ್ಕೆ ಮಾಡಿ, ನಿಮ್ಮ Transaction ID ಮತ್ತು UTR Number ನಮೂದಿಸಿ.

ಯುಪಿಐ ಆಪ್‌ನಲ್ಲಿ ಫಿರ್ಯಾದ್ ಮಾಡಿದ ನಂತರವೂ ಸಮಸ್ಯೆ ಪರಿಹಾರವಾಗದಿದ್ದರೆ, ಮುಂದಿನ ಹಂತವಾಗಿ ನಿಮ್ಮ ಬ್ಯಾಂಕ್‌ನ್ನು ಅಥವಾ NPCI (National Payments Corporation of India) ಸಂಪರ್ಕಿಸಬಹುದು.

ನಿಮ್ಮ ಬ್ಯಾಂಕ್‌ನ ಗ್ರಾಹಕ ಸೇವೆಗೆ ಕರೆ ಮಾಡಿ ಅಥವಾ ನೇರವಾಗಿ ಶಾಖೆಗೆ ಭೇಟಿ ನೀಡಿ. ವಹಿವಾಟು ವಿವರಗಳೊಂದಿಗೆ ನಿಮ್ಮ ದೂರು ದಾಖಲಿಸಿ. NPCI ವೆಬ್‌ಸೈಟ್‌ನಲ್ಲೂ ನೇರವಾಗಿ ದೂರು ಸಲ್ಲಿಸಬಹುದು ಅಥವಾ ಅವರ ಟೋಲ್ ಫ್ರೀ ನಂಬರ್ 1800-120-1740 ಗೆ ಕರೆ ಮಾಡಬಹುದು.

ಹಾಗೇ, ನಿಮ್ಮ ದೂರು ಸಲ್ಲಿಸಿದ ನಂತರವೂ 30 ದಿನಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ, NPCI ಯ Dispute Redressal Mechanism ವಿಭಾಗದ ಮೂಲಕ ಮತ್ತೊಮ್ಮೆ ದೂರು ಸಲ್ಲಿಸಬಹುದು. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ NPCI ನಿಮ್ಮ ಬ್ಯಾಂಕ್‌ಗೆ ಹಣ ಹಿಂತಿರುಗಿಸಲು ಸೂಚನೆ ನೀಡುತ್ತದೆ. ಆದ್ದರಿಂದ ಟ್ರಾನ್ಸಾಕ್ಷನ್ ಐಡಿ ಹಾಗೂ ಯುಟಿಆರ್ ನಂಬರ್‌ಗಳನ್ನು ಯಾವಾಗಲೂ ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಹೀಗಾಗಿ ತಪ್ಪಾಗಿ ಹಣ ಕಳುಹಿಸಿದ್ದರೆ ಆತಂಕ ಪಡುವ ಬದಲು ತಕ್ಷಣ ಕ್ರಮ ಕೈಗೊಳ್ಳಿ. ವೇಗವಾಗಿ ಪ್ರತಿಕ್ರಿಯಿಸಿದಷ್ಟೂ ನಿಮ್ಮ ಹಣವನ್ನು ಬೇಗನೆ ಹಿಂತಿರುಗಿಸಿಕೊಳ್ಳುವ ಅವಕಾಶ ಹೆಚ್ಚಾಗುತ್ತದೆ.

Sent UPI Money to Wrong Number? Here’s How to Get It Back

Related Stories